ಪಾಣೆಮಂಗಳೂರು ನಿವಾಸಿ ಎನ್. ಚಂದ್ರಶೇಖರ ಕುಡ್ವ (41) ಜು.13ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಇವರು ಎನ್.ಕೆ.ಜಿ. ಕುಡ್ವ ಮತ್ತು ಪಿ.ವಿ.ಶೆಣೈ ಪಾಲುದಾರರಾಗಿದ್ದು, ಉತ್ತಮ ಕ್ರಿಕೆಟ್ ಆಟಗಾರರೂ ಆಗಿದ್ದರು.
ಎಸ್.ವಿ.ಎಸ್. ಪಾಣೆಮಂಗಳೂರು ತಂಡದ ಕಪ್ತಾನರಾಗಿದ್ದು ಹಲವು ಜಿ.ಎಸ್.ಬಿ. ಕ್ರಿಕೆಟ್ ಕೂಟಗಳಲ್ಲಿ ಭಾಗವಹಿಸಿದ್ದರು. ಇವರು ತಾಯಿ, ಪತ್ನಿ, ಪುತ್ರ ಮತ್ತು ಅಪಾರ ಬಂಧುಗಳು, ಅಭಿಮಾನಿಗಳನ್ನು ಅಗಲಿದ್ದಾರೆ.