ಬಂಟ್ವಾಳ

ಯುವ ರೈತರಿಂದ ಛಾಯಾ ಸರಕಾರ: ರೈತಸಂಘದ ಸಭೆಯಲ್ಲಿ ಸಲಹೆ

ಜಾಹೀರಾತು

ಜಿಲ್ಲೆಯಲ್ಲಿ ಯುವಕರ ರೈತ ಮಂತ್ರಿಮಂಡಳ ರಚಿಸಿ ಛಾಯಾ ಸರಕಾರ ಸ್ಥಾಪಿಸಬೇಕು, ಆಡಳಿತವನ್ನು ರೈತಪರವಾಗಿಸಲು ಹೆಜ್ಜೆಯಿಡಬೇಕು ಎಂದು ರೈತ ಮುಖಂಡ ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ಹೇಳಿದ್ದಾರೆ.

ಭಾನುವಾರ ಬಿ.ಸಿ.ರೋಡಿನಲ್ಲಿ ನಡೆದ ಕರ್ನಾಟಕ ರಾಜ್ಯ ರೈತ ಸಂಘ,ಹಸಿರು ಸೇನೆ ದ.ಕ ಜಿಲ್ಲೆ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಅದಕ್ಕಾಗಿ 18 ರಿಂದ 30 ವರ್ಷದ ಆಸಕ್ತ ಯುವಕರಿಂದ ಅರ್ಜಿಗೆ ಅಹ್ವಾನಿಸಲಾಗಿದೆ ಎಂದು ಹೇಳಿದರು. ಅರ್ಜಿ ಹಾಕುವವರು ದಯಾನಂದ ಶೆಟ್ಟಿ, ಕುಳವೂರುಗುತ್ತು ಹೌಸ್, ಕುಳವೂರು ಗ್ರಾಮ, ಕುಪ್ಪೆಪದವು ಪೋಸ್ಟ್ ಮಂಗಳೂರು ತಾಲೂಕು ಇಲ್ಲಿಗೆ ಸಲ್ಲಿಸಬಹುದು ಎಂದು ಶಾಸ್ತ್ರಿ ಹೇಳಿದರು.

ಸಭೆಯಲ್ಲಿ ಉಪಸ್ಥಿತರಿದ್ದ ರೈತ ಮುಖಂಡರಾದ ಧನಕೀರ್ತಿ ಬಲಿಪ,ಶ್ರೀಧರ ಶೆಟ್ಟಿ ಬೈಲುಗುತ್ತು,ಮನೋಹರ ಶೆಟ್ಟಿ ನಡಿಕಂಬಳಗುತ್ತು, ಮುರುವ ಮಹಾಬಲ ಭಟ್, ಸುಬ್ರಮಣ್ಯ ಭಟ್ ಸಜಿಪ, ಈಶ್ವರ ಭಟ್, ಎನ್.ಕೆ ಇದಿನಬ್ಬ,ಸುದೀಶ್ ಮಯ್ಯ, ರೊನಾಲ್ಡ್ ಡಿಸೋಜ, ಸುದೀಶ್ ಭಂಡಾರಿ ವಿಟ್ಲ, ದಯಾನಂದ ಶೆಟ್ಟಿ ಕುಳಾವೂರು ಗುತ್ತು ಹಾಗು ಇತರ ಮುಖಂಡರು ನಾನಾ ಸಲಹೆ ಸೂಚನೆಗಳನ್ನು ಒದಗಿಸಿದರು.

ಜಾಹೀರಾತು

ರೈತರ ಸಾಲ ಮನ್ನ ಮತ್ತು ಇತರ ಪ್ರಮುಖ ವಿಷಯಗಳ ಬಗ್ಗೆ ಹಾಗೂ ಸಂಘಟನೆ  ಬಗ್ಗೆ ಚರ್ಚಿಸಿ ರೈತರಿಂದ ಬಂದ ಸಲಹೆ ದಾಖಲೀಕರಣ ಮಾಡಲಾಯಿತು.ತುಂಬೆ ಡ್ಯಾಂ ಸಮಸ್ಯೆ, ಕುಮ್ಕಿ ಹಕ್ಕು ಬಗ್ಗೆ ಚರ್ಚಿಸಿ ಮುಂದಿನ ಸಭೆ ಬೆಳ್ತಂಗಡಿಯಲ್ಲಿ ನಡೆಸಲು ನಿರ್ಣಯಿಸಲಾಯಿತು.

ಮೂಲರಪಟ್ಣ ತಂಕಿಹಿತ್ಲು ಸುಂದರ ಶೆಟ್ಟಿ ಅವರ ಅಡಕೆ ಮತ್ತು ತೆಂಗು ಮರಗಳನ್ನು ಮಾರ್ಗ ರಚಿಸುವ ನೆಪದಲ್ಲಿ ನಾಶ ಮಾಡಲಾಗಿದ್ದು ಈ ಕುರಿತು ಸೂಕ್ತ ಪರಿಹಾರಕ್ಕಾಗಿ ಹೋರಾಟ ನಡೆಸಲು ಹಸಿರು ಸೇನೆ ಸಂಚಾಲಕ ದಯಾನಂದ ಶೆಟ್ಟಿ ಸೂಚನೆ ನೀಡಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ