ಈ ಬಾರಿ ರಾಜ್ಯ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮತ್ತು ಉಮಾನಾಥ ಕೋಟ್ಯಾನ್ ಅವರನ್ನು ಬಂಟ್ವಾಳ ಯಶವಂತ ವ್ಯಾಯಾಮ ಶಾಲೆಯಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.
ಜಿ.ಎಸ್.ಬಿ.ಎಸ್.ವಿ.ಎಸ್.ದೇವಳ, ಶಾಲೆಯ ಹಳೇ ವಿದ್ಯಾರ್ಥಿ ಸಂಘ ಹಾಗೂ ಶ್ರೀ ಯಶವಂತ ವ್ಯಾಯಮ ಶಾಲೆ ಬಂಟ್ವಾಳ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ರಾಜೇಶ್ ನಾಯ್ಕ್., ಬಂಟ್ವಾಳ ದ ಶಾಸಕನಾಗಿ ಆಯ್ಕೆಯಾಗಲು ಪುಣ್ಯ ಬೇಕಾಗಿದೆ. ವೆಂಕಟರಮಣ ದೇವರ ಆಶ್ರೀವಾದ ನಿಮ್ಮ ಪ್ರೀತಿ ವಿಶ್ವಾಸ ಗೆಲುವಿಗೆ ಕಾರಣವಾಯಿತು. ಬಿಜೆಪಿ ಪಕ್ಷವನ್ನು ಉಳಿಸಿ ಬೆಳೆಸುವಲ್ಲಿ ಜಿ.ಎಸ್.ಬಿ.ಸಮಾಜದ ಕೊಡುಗೆ ಅನನ್ಯವಾದುದು ಎಂದರು.
ಸ್ಪರ್ಧಾತ್ಮಕ ಯುಗದಲ್ಲಿ ಕೃಷಿಯೂ ಅಗತ್ಯ ಎಂದು ಒತ್ತಿ ಹೇಳಿದ ಅವರು, ಕೃಷಿಯಿಂದ ಸುಂದರ ಸರಳ ಜೀವನ ನಡೆಸಲು ಸಾಧ್ಯ. ಶಾಸಕನಾಗಿ ಕೃಷಿಯನ್ನು ಉಳಿಸಿ ಬೆಳೆಸುವ ಮೂಲಕ ಮಾದರಿ ತಾಲೂಕಿಗೆ ಪ್ರಥಮ ಪ್ರಾಶಸ್ತ್ಯ ಕೊಡುತ್ತೇನೆ. ಶಾಂತಿಯುತ ನೆಮ್ಮದಿಯ ಜೀವನಕ್ಕೆ ಭದ್ರ ಬುನಾದಿ ಯನ್ನು ಹಾಕುವುದು ಮತ್ತು ಉದ್ಯೋಗ ಸ್ರಷ್ಟಿ ಮಾಡುವುದು ನನ್ನ ಕನಸು. ಶಾಸಕನ ಇತಿಮಿತಿಗಳನ್ನು ಅರಿತು ಕೆಲಸ ಮಾಡುತ್ತೇನೆ ನಿಮ್ಮೆಲ್ಲರ ಸಹಕಾರ ಬೇಕು ಎಂದರು.
ಎಸ್.ವಿ.ಎಸ್.ಶಾಲೆಯ ಹಳೆ ವಿದ್ಯಾರ್ಥಿ ಯಾದ ನಾನು ರಾಜಕೀಯ ಪ್ರವೇಶ ಮಾಡಿದರು ಹಳೆಯ ನೆನಪು ಮರೆತಿಲ್ಲ ಎಂದು ಶಾಸಕ ಉಮನಾಥ ಕೋಟ್ಯಾನ್ ಶಿಕ್ಷಕರಾದ ವಿಶ್ವನಾಥ ಬಾಳಿಗ, ಗಣಪತಿ ಶೆಣೈ ಹೆಸರುಗಳನ್ನು ಮೆಲುಕು ಹಾಕಿದರು.
ಕಾರ್ಯಕರ್ತರು ನನ್ನ ಸರ್ವಸ್ವ ಅವರನ್ನು ನಾನು ಮರೆಯುವ ಪ್ರಶ್ನೆಯೇ ಇಲ್ಲ. ನಾನು ಬಡ ಕುಟುಂಬದಿಂದ ಬಂದವನು, ಇಲ್ಲಿನ ಶಿಕ್ಷಣ ಸಂಸ್ಥೆ ನೀಡಿದ ಮಾತುಗಾರಿಕೆ ಮಾತ್ರ ನನ್ನನ್ನು ಶ್ರೀಮಂತನನ್ನಾಗಿ ಮಾಡಿದೆ. ಎಂದರು. ಜಿ.ಎಸ್.ಬಿ.ಸಂಘದ ಅಧ್ಯಕ್ಷ ಡಾ ವಸಂತ ಬಾಳಿಗ ಕಾರ್ಯಕ್ರಮ ದ ಅಧ್ಯಕ್ಷ ತೆ ವಹಿಸಿದ್ದರು. ಯಶವಂತ ವ್ಯಾಯಮ ಶಾಲೆಯ ಅಧ್ಯಕ್ಷ ನಾರಾಯಣ ಕಾಮತ್, ವೆಂಕಟರಮಣ ದೇವಳದ ಧರ್ಮ ದರ್ಶಿ ಎ. ಗೋವಿಂದ ಪ್ರಭು, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಪ್ರಭಾಕರ ಪೈ, ಪ್ರಮುಖರಾದ ಹರಿಕ್ರಷ್ಣ ಬಂಟ್ವಾಳ, ಉದಯಕುಮಾರ್ ರಾವ್, ಜಿ.ಆನಂದ, ದೇವದಾಸ ಶೆಟ್ಟಿ, ದಿನೇಶ್ ಭಂಡಾರಿ, ಚಿದಾನಂದ ಶೆಣ್ಯೆ, ಗಿರೀಶ್ ಪೈ, ರಾಮದಾಸ ಬಂಟ್ವಾಳ, ಸತೀಶ್ ನಾಯಕ್, ಶ್ರೀನಿವಾಸ ಪೈ ಮತ್ತಿತರು ಉಪಸ್ಥಿತರಿದ್ದರು.
ವ್ಯಾಯಮ ಶಾಲೆಯ ಕಾರ್ಯದರ್ಶಿ ನಾಗೇಂದ್ರ ವಿ. ಬಾಳಿಗಾ ಸ್ವಾಗತಿಸಿದರು. ವಸಂತ ಪ್ರಭು ವಂದಿಸಿದರು. ರಮ್ಯ ಪ್ರಶಸ್ತಿ ಕಾರ್ಯ ಕ್ರಮ ನಿರೂಪಿಸಿದರು.