ಬುಧವಾರ ಬೆಳಗ್ಗಿನಿಂದಲೇ ಬಂಟ್ವಾಳ ತಾಲೂಕಿನಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಕುರಿಯಾಳ ಗ್ರಾಮದ ವಿಶ್ವನಾಥ ಬೆಳ್ಚಡ ಎಂಬವರ ಮನೆ ಕುಸಿದುಬಿದ್ದಿದೆ. ಕುರಿಯಾಳದ ಆನೆಕೆರೆ ಎಂಬಲ್ಲಿರುವ ವಿಶ್ವನಾಥ ಬೆಳ್ಚಡ ಒಂಟಿಯಾಗಿ ವಾಸಿಸುತ್ತಿದ್ದು, ಸಂಬಂಧಿಕರ ಮನೆಗೆ ತೆರಳಿದ್ದ ಕಾರಣ ಪ್ರಾಣಾಪಾಯದಿಂದ ಪಾರಾದರು.
ಬುಧವಾರ ಬೆಳಗ್ಗೆ ಘಟನೆ ನಡೆದಿದ್ದು, ಸುಮಾರು 1.5 ಲಕ್ಷಕ್ಕೂ ಅಧಿಕ ಮೊತ್ತದ ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ. ಕುರಿಯಾಳ ಗ್ರಾಮಕರಣಿಕ ಅಮೃತಾಂಶು ಕೆ.ಎಸ್, ಗ್ರಾಮಸಹಾಯಕ ಸಂದೀಪ್ ಕೆ, ಪಂಚಾಯತ್ ಸದಸ್ಯರಾದ ಸುಧಾಕರ ಶೆಟ್ಟಿ ಭೇಟಿ ನೀಡಿ ಬೆಳ್ಚಡ ಅವರಿಗೆ ಪುನರ್ವಸತಿ ಕಲ್ಪಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…