ಅಕ್ರಮವಾಗಿ ಕಸಾಯಿಖಾನೆ ನಡೆಸಲಾಗುತ್ತಿದೆ ಎಂಬ ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿದ ಬಂಟ್ವಾಳ ಪೋಲೀಸರ ತಂಡ 2.10 ಕೆಜಿ ಮಾಂಸ, ಒಂದು ದನವನ್ನು ವಶಕ್ಕೆ ಪಡೆದುಕೊಂಡು ಆರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಟ್ವಾಳ ಸಮೀಪ ಲೊರೆಟ್ಟೋ ಪಕ್ಕದ ಟಿಪ್ಪುನಗರದಲ್ಲಿರುವ ಕಸಾಯಿಖಾನೆಗೆ ದಾಳಿ ನಡೆಸಿದ ಸಂದರ್ಭ ಲೊರೆಟ್ಟು ನಿವಾಸಿಗಳಾದ ಆದಂ, ಅಹಮ್ಮದ್ ಬಾವ, ನಾಸೀರ್, ಮಹಮ್ಮದ್ ಮುಸ್ತಾಫಾ, ನಾಸೀರ್ ಹುಸೈನ್ , ಲತೀಫ್ ಎಂಬವರನ್ನು ಬಂಧಿಸಲಾಯಿತು ಎಂದು ಬಂಟ್ವಾಳ ಪೊಲೀಸರು ತಿಳಿಸಿದ್ದಾರೆ.
ಕಾರ್ಯಚರಣೆಯಲ್ಲಿ ಬಂಟ್ವಾಳ ನಗರ ಠಾಣಾ ಎಸ್ ಐ ಚಂದ್ರಶೇಖರ್, ಅಪರಾಧ ವಿಭಾಗದ ಎಸ.ಐ.ಹರೀಶ್, ಬಂಟ್ವಾಳ ಗ್ರಾಮಾಂತರ ಠಾಣಾ ಎಸ್.ಐ.ಪ್ರಸನ್ನ, ಬಂಟ್ವಾಳ ನಗರ ಠಾಣಾ ಎ.ಎಸ್.ಐ. ಸಂಜೀವ, ಸಿಬ್ಬಂದಿಗಳಾದ ಕೃಷ್ಣ ಕುಲಾಲ್, ಸುರೇಶ್ ಪಡಾರ್, ನಾಗರಾಜ್, ಸುರೇಶ್ ಬಿ. ಮಲಿಕ್ ಸಾಬ್, ರಾಘವೇಂದ್ರ, ನಜೀರ್ ಮತ್ತು ಚಾಲಕ ಸಂಪತ್ ಭಾಗವಹಿಸಿದ್ದರು.
| ಪುತ್ತೂರಿನ ಸ್ವಾಗತ ಸಮಿತಿಯ ಸಂಚಾಲಕರಾಗಿ ಉಜ್ವಲ್ ಪ್ರಭು | ಹೊರಕಾಣಿಕೆ ಸಮಿತಿಯ ಸಂಚಾಲಕರಾಗಿ ದಯಾನಂದ ಶೆಟ್ಟಿ ಉಜಿರೆಮಾರು ಆಯ್ಕೆ…
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…