ಯಾರೋ ಹೊರಗಡೆ ಮಾತನಾಡುತ್ತಿದ್ದಾರೆ, ನಾನು ಹೊರಗೆ ಹೋಗಿ ಬರುವುದಾಗಿ ತಿಳಿಸಿ ಜೂನ್ 1ರಂದು ಮನೆಯಿಂದ ಹೋದ ಬಿಜೆಪಿ ಕಾರ್ಯಕರ್ತ ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ಅಜಿರ ಮನೆ ನಿವಾಸಿ ತಿಮ್ಮಪ್ಪ ಗೌಡ ಅವರ ಪುತ್ರ ರಮೇಶ ಗೌಡ (45) ಶವವಾಗಿ ಬಂಟ್ವಾಳ ತಾಲೂಕಿನ ಶಂಭೂರು ಎಎಂಆರ್ ಡ್ಯಾಂ ಬಳಿ ಪಡಿಮುಗೇರು ಎಂಬಲ್ಲಿ ನೇತ್ರಾವತಿ ನದಿ ಕಿನಾರೆಯಲ್ಲಿ ಪತ್ತೆಯಾಗಿದ್ದಾರೆ.
ಜೂನ್ 1ರಂದು ಬೆಳಗ್ಗೆ 4 ಗಂಟೆಗೆ ಮನೆಯ ಬಾಗಿಲು ತೆರೆದು ಹೋದ ರಮೇಶ ನಾಪತ್ತೆಯಾದ ಬಳಿಕ ಪರಿಚಯದವರು, ಸಂಬಂಧಿಕರ ಮನೆ ಮತ್ತಿತರ ಕಡೆ ಹುಡುಕಾಡಿದರೂ ಪತ್ತೆಯಾಗದಿರುವ ಕುರಿತು ಅವರ ಪತ್ನಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.
ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಹೊಂದಿರುವ ಇವರ ಸಾವಿಗೆ ಕಾರಣಗಳು ಇನ್ನಷ್ಟೇ ಗೊತ್ತಾಗಬೇಕಿದೆ. ರಮೇಶ ಅವರು ಬೆಳ್ತಂಗಡಿ ತಾಲೂಕಿನಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದರು. ಸ್ಥಳಕ್ಕೆ ಬಿಜೆಪಿ ಜಿಲ್ಲಾ ಮುಖಂಡ ಜಿ.ಆನಂದ ಸಹಿತ ಪ್ರಮುಖರು ಭೇಟಿ ನೀಡಿದರು. ತಾಲೂಕು ಕಚೇರ ಸಿಬ್ಬಂದಿಗಳಾದ ಸದಾಶಿವ ಕೈಕಂಬ, ಸುಂದರ್, ಚಂದ್ರಶೇಖರ್, ಶೀತಲ್ ಭೇಟಿ ನೀಡಿದ್ದು ಮಹಜರು ನಡೆಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…