- ಸದಭಿರುಚಿಯ ನಾಟಕಗಳಿಂದ ಜನತೆ ದೂರ: ಡಾ. ಏರ್ಯ ವಿಷಾದ
ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಮುಳುಗಿಹೋಗಿರುವ ನಾವು ಸದಭಿರುಚಿಯ ನಾಟಕಗಳಿಂದ ದೂರವಿರುವುದು ನೋವಿನ ಸಂಗತಿ ಎಂದು ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಹೇಳಿದರು.
ನೂಜಿಬೈಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಠಾರ ಮಂಚಿಯಲ್ಲಿ ಜರಗಿದ ಬಿ.ವಿ.ಕಾರಂತ ರಂಗ ಭೂಮಿಕಾ ಟ್ರಸ್ಟ್ ಇದರ ಆಶ್ರಯದಲ್ಲಿ ನಡೆದ ಬಿ.ವಿ.ಕಾರಂತ ನೆನಪಿನ ಮಂಚಿ ನಾಟಕೋತ್ಸವ ದಶಮಾನದ ಸಂಭ್ರಮದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಿ.ವಿ.ಕಾರಂತರ ನಾಟಕಗಳನ್ನು ಶಾಲೆಗಳಲ್ಲಿ ಮಾಡುತ್ತಿದ್ದ ನೆನಪು ಅವಿಸ್ಮರಣೀಯ . ನಾಟಕಗಳಲ್ಲಿ ಹೆಚ್ಚು ಪ್ರಯೋಗಾತ್ಮಕ ನಾಟಕಗಳು ಮೂಡಿ ಬರಬೇಕು . ಶಿವರಾಮ ಕಆರಂತರ ಹೆಸರನ್ನು ಪಿಲಿಕುಳ ನಿಸರ್ಗಧಾಮಕ್ಕೆ ಇಟ್ಟ ಹೆಮ್ಮೆ ನಮಗಿದೆ ಎಂದು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ವಿಟ್ಲ ಕನ್ನಡ ಸಂಘ ಅಧ್ಯಕ್ಷ ನಿವೃತ್ತ ಪ್ರಾಂಶುಪಾಲ ಅನಂತ ಕೃಷ್ಣ ಹೆಬ್ಬಾರ್, ನೂಜಿಬೈಲು ಅ.ಹಿ.ಪ್ರಾ.ಶಾಲಾ ಸಂಚಾಲಕಿ ಶಾಂತಲಾ ಎನ್.ಭಟ್ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಗಣೇಶ್ ಐತಾಳ್ ಸ್ವಾಗತಿಸಿದರು. ಅಧ್ಯಕ್ಷ ಕಜೆ ರಾಮಚಂದ್ರ ಭಟ್ ಪ್ರಾಸ್ತಾವಿಕ ಮಾತನ್ನಾಡಿದರು. ಬಾಲಕೃಷ್ಣ ಶೆಟ್ಟಿ ವಂದಿಸಿದರು. ನ್ಯಾಯವಾದಿ ರವೀಂದ್ರ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸುವರ್ಣ ಪ್ರತಿಷ್ಠಾನ ರಿ. ಮಂಗಳೂರು ಇವರಿಂದ ’ಮಳೆ ನಿಲ್ಲುವ ವರೆಗೆ’ ಕನ್ನಡ ನಾಟಕ ಜರಗಿತು.
ಪ್ರತಿದಿನ ಸಂಜೆ ನಾಟಕಗಳು ನಡೆಯುತ್ತವೆ. ಕಾರ್ಯಕ್ರಮಗಳ ವಿವರ ಹೀಗಿದೆ.
ಮೇ. 4:
ಸಂಜೆಯ ಕಾರ್ಯಕ್ರಮ: ಅಧ್ಯಕ್ಷತೆ – ಎ.ಸಿ.ಭಂಡಾರಿ (ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ). ಉಪಸ್ಥಿತಿ: ಡಾ. ಪುಂಡಿಕಾಯಿ ಗಣಪಯ್ಯ ಭಟ್, ಡಾ. ಗೋಪಾಲ ಆಚಾರ್, ಬಿ.ಲೋಕನಾಥ. ಸನ್ಮಾನ – ತುಕಾರಾಮ ಪೂಜಾರಿ (ಅಧ್ಯಕ್ಷ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ, ಸಂಚಯಗಿರಿ). ಬಳಿಕ ನಾಟಕ ನವಸುಮ ರಂಗಮಂಚ ಕೊಡವೂರು ಇವರಿಂದ ಬಾಲಕೃಷ್ಣ ಕೊಡವೂರು ರಚನೆ, ನಿರ್ದೇಶನದ ದುರ್ದುಂಡೆ ದ್ರೌಣಿ – ತುಳು ನಾಟಕ.
ಮೇ. 5
ಮಧ್ಯಾಹ್ನ 2.30ರಿಂದ ಮೇದಿನಿ ಕೆಳ ಮನೆ ನಿರ್ದೇಶನದ ‘ದಾಳಿ’, ಕಿರುಚಿತ್ರ ಪ್ರದರ್ಶನ, ಮತ್ತು 3 ಗಂಟೆಯಿಂದ ನೀರಿದ್ದರೆ ನಾಳೆ ನೀರ ಅರಿವು – ನಮ್ಮ ಉಳಿವು ಸಂವಾದ ಕಾರ್ಯಕ್ರಮದಲ್ಲಿ ಮಂಚಿ ಶ್ರೀನಿವಾಸ ಆಚಾರ್, ಡಾ| ನಾರಾಯಣ ಶೆಣೈ, ಡಾ| ಕೊಂಕೋಡಿ ಕೃಷ್ಣ ಭಟ್ ಪ್ರಮುಖ ಮಾತುಗಾರರಾಗಿ ಭಾಗವಹಿಸಲಿರುವರು.
ಸಂಜೆ ಗಂಟೆ 6 ರಿಂದ ಸಭಾ ಕಾರ್ಯಕ್ರಮವು ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ.ಮೋಹನ್ ರಾವ್ ಅಧ್ಯಕ್ಷತೆಯಲ್ಲಿ ಜರಗಲಿರುವುದು. ಕೆ.ಜಿ.ಕೃಷ್ಣಮೂರ್ತಿ, ಹಿರಿಯ ರಂಗ ನಿರ್ದೇಶಕರು, ತುಮುರಿ, ಶ್ರೀನಿವಾಸ ದೇಶಪಾಂಡೆ, ಮುಖ್ಯ ಪ್ರಬಂಧಕರು, ಕರ್ಣಾಟಕ ಬ್ಯಾಂಕ್ ಪ್ರಧಾನ ಕಛೇರಿ ಮಂಗಳೂರು, ಪತ್ತುಮುಡಿ ಸೂರ್ಯನಾರಾಯಣ ರಾವ್, ಮಾಲಕರು, ಹೋಟೆಲ್ ಜನತಾ ಡಿ ಲಕ್ಷ್, ಮಂಗಳೂರು, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಹಿರಿಯ ರಂಗ ನಿರ್ದೇಶಕರಾದ ಶ್ರೀ ಜೀವನ್ ರಾಂ ಸುಳ್ಯ ಅವರಿಗೆ ಗೌರವಾರ್ಪಣೆಯನ್ನು ಮಾಡಲಾಗುವುದು. ಲಾನಣ್ಯ (ರಿ), ಬೈಂದೂರು ಇವರಿಂದ ರಾಜೇಂದ್ರ ಕಾರಂತರ ರಚನೆ ಮತ್ತು ಗಿರೀಶ್ ಬೈಂದೂರು ಇವರ ನಿರ್ದೇಶನದ ಮುದ್ದಣನ ಪ್ರಮೋಶನ್ ಪ್ರಸಂಗ ಕನ್ನಡ ನಾಟಕ ಪ್ರದರ್ಶನಗೊಳ್ಳುವುದು.
ಮೇ 6, ಸಮಾರೋಪ:
ಸಂಜೆ ಗಂಟೆ 6 ರಿಂದ ಸಮಾರೋಪ ಸಮಾರಂಭ ಮುಂಬೈ ವಿಶ್ವವಿದ್ಯಾನಿಲಯದ ವಿಶ್ರಾಂತ ಪಾಧ್ಯಾಪಕರಾದ ಡಾ| ತಾಳ್ತಜೆ ವಸಂತ ಕುಮಾರ ಅಧ್ಯಕ್ಷತೆಯಲ್ಲಿ ಜರಗಲಿರುವುದು. ಬೆಂಗಳೂರಿನ ಹಿರಿಯ ಪತ್ರಕರ್ತರು, ಸಾಹಿತಿಗಳಾದ ಜೋಗಿ ಹಾಗೂ ಡಾ| ಪಿ.ಮನೋಹರ ಉಪಾಧ್ಯ, ಮಂಗಳೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಮೂರ್ತಿ ದೇರಾಜೆ ಮತ್ತು ಶಂಕರಪ್ರಸಾದ್, ಮಕ್ಕಳ ನಾಟಕ ವಿನ್ಯಾಸಕಾರರು, ವಿಟ್ಲ ಅವರನ್ನು ಗೌರವಿಸಲಾಗುವುದು. ರಂಗಭೂಮಿ, ಉಡುಪಿ ಇವರಿಂದ ಶಶಿಕುಮಾರ್ ಕಾವೂರು ರಚನೆ, ಮತ್ತು ರವಿರಾಜ್ ಎಚ್.ಪಿ ನಿರ್ದೇಶನದ ಐಸಿಯು ನೋಡುವೆ ನಿನ್ನ… ಕನ್ನಡ ನಾಟಕ ಪ್ರದರ್ಶನಗೊಳ್ಳುವುದು.