ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವಿನ ಅವಕಾಶ ಇದೆ ಎಂದು ಪಕ್ಷದ ಮತ್ತು ಖಾಸಗಿ ಸಂಸ್ಥೆಗಳ ಸರ್ವೆ ಹೇಳಿದೆ. ಅದಕ್ಕಾಗಿ ಹಗಲು ರಾತ್ರಿ ಕೆಲಸ ಮಾಡುವುದು ನಿಮ್ಮ ಕಾರ್ಯ ಎಂದು ಉತ್ತರ ಪ್ರದೇಶದ ಸಚಿವ ಮಹೇಂದ್ರ ಸಿಂಗ್ ಹೇಳಿದರು.
ಪಕ್ಷದ ಬಂಟ್ವಾಳ ಕ್ಷೇತ್ರ ಕಾರ್ಯಲಯದಲ್ಲಿ ನಡೆದ ಚುನಾವಣಾ ಪ್ರಭಾರಿಗಳ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸಜ್ಜನ ವ್ಯಕ್ತಿತ್ವದ ಸಮರ್ಥ ಅಭ್ಯರ್ಥಿಯಾದರಾಜೇಶ್ ನಾಯ್ಕ್ರನ್ನು ಗೆಲ್ಲಿಸುವ ಮೂಲಕ ಜನವಿರೋಧಿಯಾದ ಕಾಂಗ್ರೇಸ್ ಸರಕಾರವನ್ನು ಬದಲಾಯಿಸಿ ಬಿಜೆಪಿ ಗೆಲ್ಲಿಸಬೇಕೆಂದು ಕಾರ್ಯಕತರಲ್ಲಿ ಮನವಿ ಮಾಡಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ನಮ್ಮ ಕಾರ್ಯಕರ್ತರು ಸಂಘಟನಾತ್ಮಕ ಶಕ್ತಿಯಿಂದ ಈ ಬಾರಿ ಬಂಟ್ವಾಳದಲ್ಲಿ ರಾಜೇಶ್ ನಾಯ್ಕ್ರನ್ನು ಶಾಸಕರನ್ನಾಗಿ ಮಾಡಬೇಕು ಎಂದರು.
ಬಂಟ್ವಾಳ ಕ್ಷೇತ್ರ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ಮಾತನಾಡಿ ಕಳೆದ ನಾಲ್ಕುವರೆ ವರ್ಷಗಳಿಂದ ಬಂಟ್ವಾಳ ಕ್ಷೇತ್ರದ 59 ಗ್ರಾಮಗಳ 249 ಬೂತ್ಗಳ ಮತದಾರರ ಒಡನಾಟವನ್ನರಿಸಿಕೊಂಡಿದ್ದೇನೆ. ಜನರ ಸಂಕಷ್ಟದ ನಾಡಿ ಮಿಡಿತವನ್ನು ಅರಿತಿದ್ದೇನೆ. ಕಾನೂನು ಸುವ್ಯವಸ್ಥೆಯ ಬಲಪಡಿಸಿ ಸಾಮರಸ್ಯದ ಭಯಮುಕ್ತ ಬಂಟ್ವಾಳದ ನಿರ್ಮಾಣಕ್ಕೆ ನಾವೆಲ್ಲರೂ ಈ ಚುನಾವಣೆಯ ಮೂಲಕ ಹೋರಾಡಬೇಕು ಅದಕ್ಕಾಗಿ ನಮ್ಮ ನಮ್ಮ ಮತಗಟ್ಟೆಯನ್ನು ಗೆಲ್ಲಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ ಕ್ಷೇತ್ರ ಸಮಿತಿ ಅಧ್ಯಕ್ಷರಾದ ದೇವದಾಸ ಶೆಟ್ಟಿ ,ಪ್ರಧಾನಕಾರ್ಯದರ್ಶಿಗಳಾದ ಮೋನಪ್ಪ ದೇವಸ್ಯ,ಉಪಾಧ್ಯಕ್ಷರಾದ ಶ್ರೀಕಾಂತ್ ಶೆಟ್ಟಿ,ಬೊಲ್ಲುಕಲ್ಲು ನಾರಾಯಣ ಪೂಜಾರಿ,ಕಾರ್ಯದರ್ಶಿಗಳಾದ ರಮನಾಥ ರಾಯಿ,ಸೀತಾರಾಮ ಪೂಜಾರಿ,ಗಣೇಶ್ ರೈ ಮಾಣಿ, ಪ್ರಕಾಶ್ ಅಂಚನ್,ರಂಜಿತ್ ಮೈರ ಉಪಸ್ಥಿತರಿದ್ದರು.
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)