ಬಂಟ್ವಾಳ ಕ್ಷೇತ್ರ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಶುಕ್ರವಾರ ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ಮಧ್ಯಾಹ್ನ ನಾಮಪತ್ರ ಸಲ್ಲಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಕ್ಷೇತ್ರಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ ಈ ಸಂದರ್ಭ ಉಪಸ್ಥಿತರಿದ್ದರು.
ಪಾದಯಾತ್ರೆ:
ಇದಕ್ಕೂ ಮೊದಲು ಅಭ್ಯರ್ಥಿ ರಾಜೇಶ್ ನಾಯ್ಕ್ ಅವರು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.ಬಳಿಕ ದೇವಳದ ಸನ್ನಿಧಿಯಿಂದ ಬಿ.ಸಿ.ರೋಡಿನವರೆಗೆ ಸುಮಾರು 15 ಕಿ.ಮೀ.ನಷ್ಟು ಪಾದಯಾತ್ರೆಯ ಮೂಲಕ ಸಾಗಿ ಬಂದರು. ಪಕ್ಷದ ಮುಖಂಡರಾದ ದೇವದಾಸ ಶೆಟ್ಟಿ,ಪದ್ಮನಾಭ ಕೊಟ್ಟಾರಿ,ರುಕ್ಮಯ ಪೂಜಾರಿ,ಸುಲೋಚನಾ ಜಿ.ಕೆ.ಭಟ್,ಗೋವಿಂದ ಪ್ರಭು, ತುಂಗಪ್ಪ ಬಂಗೇರ,ಗಣೇಶ್ ರೈ ಮಾಣಿ,ಚೆನ್ನಪ್ಪ ಕೋಟ್ಯಾನ್,ಜಿ.ಆನಂದ,ದಿನೇಶ್ ಅಮ್ಟೂರ್,ಸುಗುಣ ಕಿಣಿ,ಉದಯಕುಮಾರ್ ರಾವ್ , ಕಮಲಾಕ್ಷಿ ಪೂಜಾರಿ,ರಾಮದಾಸ ಬಂಟ್ವಾಳ,ಮೋನಪ್ಪ ದೇವಸ್ಯ,ಸೀತಾರಾಮಪೂಜಾರಿ, ರೋನಾಲ್ಡ್ ಡಿಸೋಜ,ಉಸ್ಮಾನ್ ಪಾಣೆಮಂಗಳೂರು,ವಸಂತ ಅಣ್ಣಳಿಕೆ,ಆನಂದ ಶಂಭೂರು, ಪ್ರದೀಪ್ ಅಜ್ಜಿಬೆಟ್ಟು, ಪ್ರಭಾಕರ ಪ್ರಭು,ಹರೀಶ್ ಆಚಾರ್ಯ, ರವೀಂದ್ರ ಕಂಬಳಿ,ವೆಂಕಟೇಶ್ ನಾವುಡ,ಶ್ರೀಕಾಂತ್ ಶೆಟ್ಟಿ,ಬೊಳ್ಳುಕಲ್ಲು ನಾರಾಯಣ ಪೂಜಾರಿ,ದಿನೇಶ್ ಭಂಡಾರಿ,ಪುಷ್ಪರಾಜ್ ಚೌಟ,ಚಂದ್ರಕಲಾಯಿ,ರತ್ನಾಕರ ಶೆಟ್ಟಿ ಕಲ್ಲಡ್ಕ,ಹರೀಶ್ ಶೆಟ್ಟಿ ಪಡು,ರಮಾನಾಥ ರಾಯಿ,ಶೇಖರ ಶೆಟ್ಟಿ ಅಮ್ಟಾಡಿ,ಬಬಿತಾ ಕೋಟ್ಯಾನ್,ಸೀಮಾ ಮಾಧವ, ಮೋಹನ್ ಪಿ.ಎಸ್., ಗುರು ಬಂಟ್ವಾಳ, ರಾಧಕೃಷ್ಣ ಅಡ್ಯಂತಾಯ, ಕಿಶೋರ್ ಪಲ್ಲಿಪಾಡಿ,ಯಶವಂತ ಕೋಟ್ಯಾನ್, ಸುಕೇಶ್ ,ರಂಜಿತ್ ಮೈರ,ಪ್ರಮೋದ್ ಅಜ್ಜಿಬೆಟ್ಟು,ಪ್ರಕಾಶ್ ಅಂಚನ್,ರತ್ನಕುಮಾರ್ ಚೌಟ,ಸಂಜೀವ ಪೂಜಾರಿ ಪಂಜಿಕಲ್ಲು,ಯಶೋಧರ ಕರ್ಬೆಟ್ಟು ಸಹಿತ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪಾದಯಾತ್ರೆಯಲ್ಲಿ ರಾಜೇಶ್ ನಾಯ್ಕ್ ಜೊತೆ ಹೆಜ್ಜೆ ಹಾಕಿದರು.