ಅಳಿಕೆ ಗ್ರಾಮದ ಜೆಡ್ಡು ಪದ್ಮಗಿರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶಿಲಾಮಯ ಶ್ರೀ ಆದಿ ಧನ್ವಂತರಿ ಕ್ಷೇತ್ರದ ಬ್ರಹ್ಮಕಲಶವು ಎ.26ರಿಂದ ಎ.29ರ ವರೆಗೆ ನಡೆಯಲಿದ್ದು, ಗುರುವಾರ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ, ಆಶೀರ್ವಚನ ನೀಡಿದರು.
ಜೆಡ್ಡು ಆಯುರ್ವೇದ ಸೇವಾ ಟ್ರಸ್ಟ್‌ನ ಅಧ್ಯಕ್ಷ ಜೆಡ್ಡು ನಾರಾಯಣ ಭಟ್, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಟಿ.ತಾರಾನಾಥ ಕೊಟ್ಟಾರಿ, ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ ದಂಬೆಕಾನ, ಉಪಾಧ್ಯಕ್ಷರಾದ ಅಳಿಕೆ ಗ್ರಾ.ಪಂ.ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ನರಸಿಂಹ ಬಲ್ಲಾಳ್ ಎರುಂಬು, ಕಾನ ಈಶ್ವರ ಭಟ್, ಜತೆಕಾರ್ಯದರ್ಶಿ ಸದಾಶಿವ ಶೆಟ್ಟಿ ಅಳಿಕೆ, ಪ್ರಧಾನ ಕೋಶಾಕಾರಿ ಸತೀಶ್ವರ ಭಟ್ ಪದ್ಯಾಣ, ಪ್ರಧಾನ ಸಂಚಾಲಕ ಕೋಡಿಜಾಲು ಗೋವಿಂದ ಭಟ್, ಅಳಿಕೆ ಶ್ರೀ ಸತ್ಯಸಾಯಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ರಘು ಟಿ.ವೈ., ಮಾಹಿತಿ ಕಾರ್ಯಾಲಯ ಸಮಿತಿ ಸಂಚಾಲಕಿ ಡಾ.ಮನೋರಮಾ ಜಿ.ಭಟ್, ಕೋಡಂದೂರು ಸುಬ್ರಹ್ಮಣ್ಯ ಶಾಸ್ತ್ರಿ, ಶೀನಪ್ಪ ನಾಯ್ಕ ಮಂಗಳಪದವು, ದಿನೇಶ್ ಶೆಟ್ಟಿ ಪಟ್ಲ, ರಾಮಕೃಷ್ಣ ಆಚಾರ್ಯ ಪಡಿಬಾಗಿಲು, ರಾಮನಂದನ ಮಡಿಯಾಲ, ಸಾಂಸ್ಕೃತಿಕ ಸಮಿತಿ ಸಂಚಾಲಕ ಕೃಷ್ಣ ಭಟ್ ಕುಂಚಿನಡ್ಕ, ಸರಸ್ವತಿ ಎನ್.ಭಟ್ ಮೊದಲಾದವರು ಉಪಸ್ಥಿತರಿದ್ದರು.
ದೇಗುಲ ನಿರ್ಮಾಣ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ| ಜೆಡ್ಡು ಗಣಪತಿ ಭಟ್ ಪ್ರಸ್ತಾವನೆಗೈದರು. ಸ್ವಾಗತ ಸಮಿತಿ ಸದಸ್ಯ ಈಶ್ವರ ನಾಯ್ಕ ಸ್ವಾಗತಿಸಿದರು. ಪ್ರಚಾರ ಸಮಿತಿ ಸಂಚಾಲಕ ಸದಾಶಿವ ಅಳಿಕೆ ಕಾರ್ಯಕ್ರಮ ನಿರೂಪಿಸಿದರು.