ನೇರಳಕಟ್ಟೆ ಸಮೀಪದ ಕೊಡಾಜೆ ಬದ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ರಾಜ್‌ಕಮಲ್, ಪ್ರದಾನ ಕಾರ್ಯದರ್ಶಿಯಾಗಿ ಮುಹಮ್ಮದ್ ರಫೀಕ್ ಎಸ್.ಎಂ. ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಲ್ಲಿನ ತರ್ಬಿಯತುಲ್ ಇಸ್ಲಾಂ ಮದರಸದಲ್ಲಿ ಸಮಿತಿ ಗೌರವಾಧ್ಯಕ್ಷ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಅವರ ಅಧ್ಯಕ್ಷತೆಯಲ್ಲಿ ರವಿವಾರ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಉಪಾಧ್ಯಕ್ಷರಾಗಿ ಅಬ್ದುಲ್ ಲತೀಫ್ ನೇರಳಕಟ್ಟೆ, ಕಾರ್ಯದರ್ಶಿಯಾಗಿ ಶಾಹುಲ್ ಹಮೀದ್ ಪರ್ಲೊಟ್ಟು, ಕೋಶಾಧಿಕಾರಿಯಾಗಿ ಪಿ.ಕೆ.ಅಬ್ಬಾಸ್ ಪರ್ಲೊಟ್ಟು, ಅವಿರೋಧವಾಗಿ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಸ್.ಎಂ.ಮುಹಮ್ಮದ್ ಶಾಫಿ, ಹಮೀದ್ ಇನಾಮ್ ಮಾಣಿ, ಮುಹಮ್ಮದ್ ರಫೀಕ್ ಸುಲ್ತಾನ್, ಮುಹಮ್ಮದ್ ಅಶ್ರಫ್ ಕೊಡಾಜೆ, ಇಬ್ರಾಹಿಂ ಕೆ. ಮಾಣಿ, ಇಬ್ರಾಹಿಂ ಪಂತಡ್ಕ, ಎಸ್.ಎಂ.ಎಸ್.ಇಬ್ರಾಹಿಂ ಅನಂತಾಡಿ, ಹಬೀಬ್ ಕೊಡಾಜೆ, ರವೂಫ್ ಕೊಡಾಜೆ, ಉಮರ್ ಫಾರೂಕ್ ಪಾರ್ಪಕಜೆ ನೇಮಕಗೊಂಡರು. ಖತೀಬ್ ಪಿ.ಕೆ.ಆದಂ ದಾರಿಮಿ ಉಪಸ್ಥಿತರಿದ್ದರು.
IFTAAR ORGANISED BY FORMER MINISTER RAMANATHA RAI AT PANEMANGALORE (more…)