ಬಂಟ್ವಾಳ

ತಲಪಾಡಿ ಬದ್ರಿಯಾ ಜುಮಾ ಮಸೀದಿ ಪದಾಧಿಕಾರಿಗಳ ಆಯ್ಕೆ

  • ಅಧ್ಯಕ್ಷರಾಗಿ ಇದಿನಬ್ಬ, ಕಾರ್ಯದರ್ಶಿಯಾಗಿ ಅನ್ವರ್ ಕೆ.ಎಚ್

 

Idinabba

ಬದ್ರಿಯಾ ಜುಮಾ ಮಸೀದಿ ಧಾರ್ಮಿಕ ಚಾರಿಟೇಬಲ್ ಟ್ರಸ್ಟ್ ಬಿ.ಸಿ.ರೋಡ್ ತಲಪಾಡಿ ಇದರ ವಾರ್ಷಿಕ ಮಹಾಸಭೆಯು ತಲಪಾಡಿ ಮಸೀದಿಯಲ್ಲಿ ರವಿವಾರ ಸಂಜೆ ನಡೆಯಿತು.
ಇದೇ ಸಂದರ್ಭದಲ್ಲಿ 2018-19 ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಇದಿನಬ್ಬ ಇಲೆವೆನ್, ಉಪಾಧ್ಯಕ್ಷರಾಗಿ ಇದಿನಬ್ಬ ಕೆಸ್ಸಾರ್ಟಿಸಿ, ಮುಹಮ್ಮದ್ ಬಜಾಜ್, ಕಾರ್ಯದರ್ಶಿಯಾಗಿ ಅನ್ವರ್ ಕೆ.ಎಚ್., ಜೊತೆ ಕಾರ್ಯದರ್ಶಿಯಾಗಿ ಲತೀಫ್ ಬಿ.ಸಿ., ಶಮೀರ್ ದಿಯಾಮೋಳ್, ಕೋಶಾಧಿಕಾರಿಯಾಗಿ ಮುಹಮ್ಮದ್ ಕೆ., ಲೆಕ್ಕಪರಿಶೋಧಕರಾಗಿ ಮುಸ್ತಾಕ್ ಬಿ.ಎಂ ಅವರನ್ನು ಆಯ್ಕೆ ಮಾಡಲಾಯಿತು.

ಜಾಹೀರಾತು

Anwar

ನಝೀರ್ ಟಿ.ಎಂ., ಬಶೀರ್ ಟಿ, ನಾಸೀರ್ ವಿ.ಎಚ್., ನವಾಝ್, ಸಲಾಂ ಬಿ.ಎಂ.ಟಿ., ರಫೀಕ್ ಸಪ್ನಾ, ಲತೀಫ್ ಕೆಮ್ಮಾರ, ಪಿ.ಕೆ. ಅಬೂಬಕರ್, ಝುಬೈಲ್ ಜುಬ್ಬಿ ಅವರನ್ನು ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.ಮುಹಮ್ಮದ್ ಬಜಾಜ್ ಅವರು ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ಎಆರ್‌ಎಫ್‌ನ ಅನ್ವರ್ ಕೆ.ಎಚ್. ವಾರ್ಷಿಕ ವರದಿ ಮಂಡಿಸಿದರು. ಮುಸ್ತಾಕ್ ಬಿ.ಎಂ. ತಲಪಾಡಿ ಸ್ವಾಗತಿಸಿ, ನಿರೂಪಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

20 hours ago