ಕಲ್ಲಡ್ಕ

ಧನಾತ್ಮಕ ಚಿಂತನೆಯ ಕೆಲಸದಿಂದ ಪ್ರಗತಿ: ಮಾಣಿಲ ಸ್ವಾಮೀಜಿ

ಭಾರತೀಯ ಮೌಲ್ಯಗಳನ್ನು ,ಆಚಾರ ವಿಚಾರ, ಆಚರಣೆಗಳನ್ನು ಧನಾತ್ಮಕ ಚಿಂತನೆಯ ಮೂಲಕ ಉಳಿಸುವ ಕೆಲಸವನ್ನು ಸಮಾಜದ ಬಾಂಧವರು ಮಾಡಿದಾಗ ಬದುಕು ಸಾರ್ಥಕ ಎಂದು ಮಾಣಿಲ ಶ್ರೀ ಧಾಮ ಕ್ಷೇತ್ರದ ಶ್ರೀ ಮೋಹನದಾಸ ಸ್ವಾಮೀಜಿ ಹೇಳಿದರು.

ಜಾಹೀರಾತು

ಮಾಣಿ ಕುಲಾಲ ಸಂಘದ ವತಿಯಿಂದ ಮಾಣಿ ಕುಲಾಲ ಭವನದಲ್ಲಿ ಜ. ೨೮ ರಂದು ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ವಾರ್ಷಿಕ ಮಹಾ ಸಭೆಯಲ್ಲಿ ಆರ್ಶೀವಚನ ನೀಡಿದರು.

ಧಾರ್ಮಿಕ ಮೌಲ್ಯ, ಸಂಸ್ಕೃತಿಯ ಮತ್ತು ಧರ್ಮ ಚಿಂತನೆ ಮಾಡುವ ಕೆಲಸ ಅತೀ ಅವಶ್ಯವಾಗಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದನ್ನು ಕಡಿಮೆ ಮಾಡಿ ಗ್ರಾಮ ಗ್ರಾಮಗಳಲ್ಲಿ ಸತ್ಸಂಗ ಕಾರ್ಯಕ್ರಮಗಳನ್ನು ಕೈಗೊಳ್ಳುವ ಚಿಂತನೆ ನಡೆಸಿದ್ದೇನೆ ಎಂದು ಅವರು ಹೇಳಿದರು.

ಇಂದಿನ ದಿನಗಳಲ್ಲಿ ಎಲ್ಲಾ ಕಾರ್ಯಕ್ರಮಗಳಲ್ಲಿ ಸಂಪತ್ತು ದುರುಪಯೋಗವಾಗುತ್ತಿದೆ. ಅದನ್ನು ಕಡಿಮೆ ಮಾಡಿ ಉತ್ತಮ ಕಾರ್ಯಗಳಿಗೆ ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದ ಅವರು ಕುಲಾಲ ಸಮಾಜದ ಬದುಕನ್ನು ಉಳಿಸುವ ಕೆಲಸಕ್ಕೆ ಚಿಂತನ ಮಂಥನ ಮಾಡಬೇಕಾಗಿದೆ. ಸವಲತ್ತುಗಳನ್ನು ಸಾಧನೆ ಮತ್ತು ಸಂಘಟನೆಯ ಮೂಲಕ ಸದ್ಗುಣಶೀಲತಯಲ್ಲಿ ಸದುಪಯೋಗ ಪಡಿಸಿಕೊಳ್ಳಿ. ರಾಜಕೀಯ ಕ್ಷೇತ್ರದಲ್ಲಿ ಮುಂದೆ ಬರಲು ನಮ್ಮ ದೌರ್ಬಲ್ಯ ಮತ್ತು ದೌರ್ಭಾಗ್ಯ ಎರಡು ಕಾರಣವಾಗಿದೆ. ಸರಕಾರ ಕೂಡಾ ನಮ್ಮ ಮುಗ್ದತೆಯನ್ನು ಬಳಸಿಕೊಂಡಿದೆ. ದುರ್ಬಲತೆಯಿಂದಾಗಿ ನಮ್ಮ ಅಸ್ತಿತ್ವ ಕಳೆದುಕೊಳ್ಳುವಂತಾಗಿದೆ. ಮುಂದಿನ ದಿನಗಳಲ್ಲಿ ಸಂಘಟನೆಯ ಮೂಲಕ ಸ್ಥಿತಿವಂತರಾಗಲು ಪ್ರಾಮಾಣಿಕ ಪ್ರಯತ್ನ ಮಾಡಿ ಎಂದರು.

ಜಾಹೀರಾತು

ಮುಖ್ಯ ಅತಿಥಿಯಾಗಿ ಮಾತನಾಡಿದ ಬಿಜೆಪಿ ಮುಖಂಡ ಉಳಿಪ್ಪಾಡಿ ಗುತ್ತು ರಾಜೇಶ್ ನಾಯಕ್ ಅವರು ಧಾರ್ಮಿಕ ಕಾರ್ಯಕ್ರಮಗಳನ್ನು ಸಂಘಟನೆಯ ಮೂಲಕ ಅಯೋಜಿಸಿದಾಗ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಸಂಘಟನೆಯ ಮೂಲಕ ಸಮಾಜದ ಅವಶ್ಯಕತೆಗಳನ್ನು ಪಡೆಯಲು ಶ್ರಮಿಸಿ ಎಂದು ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಣಿ ಕುಲಾಲ ಸಂಘದ ಅದ್ಯಕ್ಷ ಎನ್ ರಾಮಚಂದ್ರ ಮಾಸ್ತರ್ ವಹಿಸಿದ್ದರು.

ಸಂಘದ ಗೌರವಾಧ್ಯಕ್ಷ ಎನ್.ವೆಂಕಪ್ಪ ಕುಲಾಲ್ ಮಲಾರು, ಪುತ್ತೂರು ಕುಲಾಲ ಸಮಾಜ ಸಂಘದ ಗೌರವಾಧ್ಯಕ್ಷ ಬಿ.ಎಸ್.ಕುಲಾಲ, ಕರ್ನಾಟಕ ರಾಜ್ಯ ಕುಂಬಾರರ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಶೇಸಪ್ಪ ಮಾಸ್ತರ್ ತುಂಬೆ, ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅದ್ಯಕ್ಷ ಭಾಸ್ಕರ್ ಎಂ.ಪೆರುವಾಯಿ, ಉದ್ಯಮಿ ಶೀನಪ್ಪ ಮೂಲ್ಯ ಪಾಳ್ಯ, ಉದ್ಯಮಿ ಎನ್.ಪಿ.ಶೇಖರ್ ಬೆಂಗಳೂರು, ಮಾಣಿಗುತ್ತು ಸಚಿನ್ ಶೆಟ್ಟಿ, ಉಪಸ್ಥಿತರಿದ್ದರು. ಈ ಸಂದರ್ಭ ನಿವೃತ್ತ ಯೋಧರಾದ ಮಾಧವ ಪಾಳ್ಯ, ಜನಾರ್ದನ ಪೆರಪೊಗರು, ನಿತೀಶ್ ಕುಮಾರ್ ಪಂತಡ್ಕ ಮತ್ತು ಚಲನಚಿತ್ರ ನಟ ಚಂದ್ರೋದಯ ಅವರನ್ನು ಸನ್ಮಾನಿಸಲಾಯಿತು. ಸಂಘದ ಕಾರ್ಯದರ್ಶಿ ಬಿ.ನಾರಾಯಣ ಕುಲಾಲ್ ಸ್ವಾಗತಿಸಿ ವಂದಿಸಿದರು. ಶಿಕ್ಷಕ ಗೋಪಾಲ ಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ