ಜನವರಿ 14ರಂದು ಆರಂಭಗೊಂಡ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರೋತ್ಸವದ ಮಹಾರಥೋತ್ಸವ ಭಾನುವಾರ ರಾತ್ರಿ ಅತ್ಯಂತ ವೈಭವದಿಂದ ನಡೆಯಿತು.
ಜನವರಿ 14ರಂದು ಭಾನುವಾರ ಲಕ್ಷದೀಪೋತ್ಸವ, ಬೆಳಗ್ಗೆ 10ಕ್ಕೆ ಧ್ವಜಾರೋಹಣ, ರಾತ್ರಿ 8.30ಕ್ಕೆ ಉತ್ಸವ ಬಲಿ, ಕಟ್ಟೆಪೂಜೆ ಬಳಿಕ ಬಟ್ಟಲು ಕಾಣಿಕೆಯೊಂದಿಗೆ ಜಾತ್ರಾ ಕಾರ್ಯಕ್ರಮಗಳು ಆರಂಭಗೊಂಡವು. 15, 16, 17ರಂದು ಸಂಜೆ 6.30ಕ್ಕೆ ನಿತ್ಯೋತ್ಸವಗಳು ನಡೆದವು. 18ರಂದು ಗುರುವಾರ ರಾತ್ರಿ 8.30ಕ್ಕೆ ಕೇಪುವಿನಿಂದ ಶ್ರೀ ಮಲರಾಯ ದೈವದ ಭಂಡಾರ ಬಂದು ರಾತ್ರಿ 9ಕ್ಕೆ ಬಯ್ಯದ ಬಲಿ ಉತ್ಸವ ನಡೆಯಿತು. ಬಳಿಕ 19 ಶುಕ್ರವಾರ ಬೆಳಗ್ಗೆ 9.30ಕ್ಕೆ ದರ್ಶನ ಬಲಿ, ಬಟ್ಲು ಕಾಣಿಕೆ, ಪ್ರಸಾದ ವಿತರಣೆ, ರಾತ್ರಿ 8ಕ್ಕೆ ನಡುದೀಪೋತ್ಸವ ಕೆರೆ ಆಯನ ನಡೆಯಿತು. 20ರ ಶನಿವಾರ ರಾತ್ರಿ 9ಕ್ಕೆ ಹೂತೇರು ಉತ್ಸವ ನಡೆಯಿತು.
21ರಂದು ಭಾನುವಾರ ಮಹಾರಥೋತ್ಸವ ಸೇರಿದ್ದ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಸಂಪನ್ನಗೊಂಡವು. ಬೆಳಗ್ಗೆ 9.30ಕ್ಕೆ ದರ್ಶನ ಬಲಿ, ರಾಜಾಂಗಣದ ಬಟ್ಲು ಕಾಣಿಕೆ, ಪ್ರಸಾದ ವಿತರಣೆ. ರಾತ್ರಿ 7.30ಕ್ಕೆ ಕಡಂಬುವಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಕ್ಷೇತ್ರಕ್ಕೆ ಬಂದು ರಾತ್ರಿ 8ಕ್ಕೆ ಮಹಾರಥೋತ್ಸವ ಬೀದಿ ಮೆರವಣಿಗೆ, ಶಯನೋತ್ಸವ ನಡೆಯಿತು.
ಸೋಮವಾರ ಅವಭೃತ ಸ್ನಾನ (ರಾತ್ರಿ 10ಕ್ಕೆ) ಕೊಡಂಗಾಯಿಗೆ ಸವಾರಿ ಧ್ವಜಾವರೋಹಣ, ಸಂಪ್ರೋಕ್ಷಣೆ ನಡೆಯತ್ತದೆ. 24ರಂದು ಕೇಪುವಿನ ಶ್ರೀ ಮಲರಾಯ ದೈವಕ್ಕೆ ನೇಮೋತ್ಸವ. 25ರಂದು ಗುರುವಾರ ಮಧ್ಯಾಹ್ನ ಅರಮನೆಯಲ್ಲಿ ಶ್ರೀ ಮಲರಾಯ ದೈವಕ್ಕೆ ನೇಮೋತ್ಸವ ಬಳಿಕ ಕೇಪುವಿಗೆ ಭಂಡಾರ ಹೊರಡುವುದು ನಡೆಯಲಿದೆ.