ಬಿಜೆಪಿ ಮುಸ್ಲಿಂ ವಿರೋಧಿಯಲ್ಲ. ಕ್ರೈಸ್ತ, ಮುಸ್ಲಿಂ ಧರ್ಮೀಯರೂ ಬಿಜೆಪಿಯಲಿದ್ದಾರೆ. ಎಲ್ಲರನ್ನೂ ಸಮಾನವಾಗಿ ಪರಿಗಣಿಸುತ್ತಾ ದೇಶದ ಅಭಿವೃದ್ಧಿಯನ್ನಷ್ಟೇ ಮಂತ್ರವಾಗಿ ಮುನ್ನಡೆಯುತ್ತಿರುವ ಪಕ್ಷ ಬಿಜೆಪಿ.
ಕೇರಳದ ಪ್ರಮುಖ ಬಿಜೆಪಿ ನಾಯಕ ಕುಂಟಾರು ರವೀಶ ತಂತ್ರಿ ಹೇಳಿದ್ದು ಹೀಗೆ.
ಕರೋಪಾಡಿ ಗ್ರಾಮದ ಮಿತ್ತನಡ್ಕದಲ್ಲಿ ಭಾನುವಾರ ರಾತ್ರಿ ಬಿಜೆಪಿ ವತಿಯಿಂದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ನೇತೃತ್ವದಲ್ಲಿ ನಡೆಯುತ್ತಿರುವ ಪರಿವರ್ತನೆಗೆ ನಮ್ಮ ನಡಿಗೆ ಬಂಟ್ವಾಳ ಪರಿವರ್ತನೆಗೆ ಬಿಜೆಪಿ ನಡಿಗೆ ಕಾರ್ಯಕ್ರಮದ ಬಹಿರಂಗ ಸಭೆಯಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.
ಪ್ರಧಾನಿ ನರೇಂದ್ರ ಮೋದಿಯವರನ್ನು ಗುಜರಾತಿನಲ್ಲಿ ಮುಸಲ್ಮಾನ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ನಡೆಯಿತು. ಆದರೆ ಗುಜರಾತ್‌ನಲ್ಲಿ ಹಾಗಿಲ್ಲ ಎಂದ ತಂತ್ರಿ, ರಾಹುಲ್ ಗಾಂಧಿ ಇತ್ತೀಚೆಗೆ ದೇಗುಲಗಳಿಗೆ ತೆರಳಲು ಆರಂಭಿಸಿದ್ದನ್ನು ಪ್ರಶ್ನಿಸಿದರು.
ಈ ಸಂದರ್ಭ ಮಾತನಾಡದ ರಾಜೇಶ್ ನಾಯ್ಕ್, ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 30 ವರ್ಷಗಳಿಂದ ಅಭಿವೃದ್ಧಿ ಸಮರ್ಪಕವಾಗಿಲ್ಲ . ನೇತ್ರಾವತಿ ನದಿಯಲ್ಲಿ 5 ಸಾವಿರಷ್ಟು ಲೋಡ್ ಮರಳು ಸಿಗಬಹುದು. ಅದೇ ಆದಾಯದಿಂದ ದ.ಕ.ಜಿಲ್ಲೆಯನ್ನು ಅಭಿವೃದ್ಧಿ ಪಡಿಸಬಹುದು. ಜಿಲ್ಲೆಗೆ ಸ್ಪಷ್ಟ ಮರಳು ನೀತಿಯನ್ನು ತರಬೇಕಾಗಿದೆ ಎಂದರು.
ಕ್ಷೇತ್ರ ಅಧ್ಯಕ್ಷ ದೇವದಾಸ ಶೆಟ್ಟಿ ಅಧ್ಯಕ್ಷತೆ ವಹಿಸಿ, ಮಾತನಾಡಿ, ಬಂಟ್ವಾಳದ ಪರಿವರ್ತನೆಗಾಗಿ ಈ ಗ್ರಾಮದೆಡೆಗೆ ನಡಿಗೆಯನ್ನು ಕೈಗೊಂಡಿದ್ದಾರೆ. ಎಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಇನ್ನು ನೂರು ದಿನಗಳಲ್ಲಿ ಕಾರ್ಯಕರ್ತರು ಶ್ರಮವಹಿಸಿ, ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸಬೇಕು ಎಂದರು.
ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಮಾತನಾಡಿ, ಕಳೆದ 4 ತಿಂಗಳಿಂದ ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ನೀಡಿಲ್ಲ. ಸರಕಾರದ ಖಜಾನೆ ಖಾಲಿಯಾಗಿದೆ. ಮತ್ತೆ ತೆಂಗಿನಕಾಯಿ ಒಡೆದಲ್ಲೆಲ್ಲ ಇನ್ನು ಮೂರು ತಿಂಗಳೊಳಗೆ ರಸ್ತೆಗಳು ಅಭಿವೃದ್ಧಿ ಯಾಗಲಿದೆಯೇ ?ಎಂದು ಪ್ರಶ್ನಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್ ಚೌಟ, ತಾ.ಪಂ.ಸದಸ್ಯ ಕುಲ್ಯಾರು ನಾರಾಯಣ ಶೆಟ್ಟಿ, ಮೋನಪ್ಪ ದೇವಸ್ಯ, ಎಸ್.ಸಿ.ಮೋರ್ಚಾ ಜಿಲ್ಲಾಧ್ಯಕ್ಷ ದಿನೇಶ್ ಅಮ್ಟೂರು, ಜಿಲ್ಲಾ ಸಮಿತಿ ಕಾರ್‍ಯದರ್ಶಿ ಗಣೇಶ್ ರೈ ಮಾಣಿ, ಸದಸ್ಯ ರೋನಾಲ್ಡ್ ಡಿ ಸೋಜಾ, ಜಿ.ಪಂ.ಮಾಜಿ ಸದಸ್ಯ ಲಿಂಗಪ್ಪ ಗೌಡ ಪನೆಯಡ್ಕ, ಕೊಳ್ನಾಡು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಬಾಲಕೃಷ್ಣ ಸೆರ್ಕಳ, ಮಾಣಿ ಶಕ್ತಿ ಕೇಂದ್ರದ ಪ್ರ.ಕಾರ್‍ಯದರ್ಶಿ ಅಭಿಷೇಕ್ ರೈ,ಹರೀಶ್ ಬೇಡಗುಡ್ಡೆ, ವಿಟ್ಲಪಡ್ನೂರು ಗ್ರಾ.ಪಂ.ಅಧ್ಯಕ್ಷ ರವೀಶ್ ಶೆಟ್ಟಿ ಕರ್ಕಳ, ಸಾಲೆತ್ತೂರು ಗ್ರಾ.ಪಂ.ಅಧ್ಯಕ್ಷೆ ಚಂದ್ರಾವತಿ, ಕೊಳ್ನಾಡು ಬಿಜೆಪಿ ಪಂಚಾಯತ್ ಸಮಿತಿ ಅಧ್ಯಕ್ಷ ವಿಶ್ವನಾಥ ಪೂಜಾರಿ ಕಟ್ಟತ್ತಿಲಕೋಡಿ, ರೈತ ಮೋರ್ಚಾ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ, ಸಜಿಪಮುನ್ನೂರು ಗ್ರಾಮ ಸಮಿತಿ ಅಧ್ಯಕ್ಷ ಅರವಿಂದ ಭಟ್, ಕರೋಪಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ವಿಘ್ನೇಶ್ವರ ಭಟ್ ಅನೆಯಾಲಕೋಡಿ, ಪಟ್ಲಗುತ್ತು ರಘುನಾಥ ಶೆಟ್ಟಿ, ಗ್ರಾಮ ಸಮಿತಿ ಕಾರ್ಯದರ್ಶಿ ಹರೀಶ್ ಕೋಡ್ಲ, ಬಂಟ್ವಾಳ ಯುವ ಮೋರ್ಚಾ ಅಧ್ಯಕ್ಷ ವಜ್ರನಾಥ ಕಲ್ಲಡ್ಕ, ಲೋಹಿತ್ ಸಾಲೆತ್ತೂರು, ಪ್ರಶಾಂತ್ ಕೊಳ್ನಾಡು, ಅಶ್ವತ್ಥ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕರೋಪಾಡಿ ಗ್ರಾಮ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಅನೆಯಾಲಗುತ್ತು ಸ್ವಾಗತಿಸಿದರು. ಮಾತೇಶ್ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು. ಕನ್ಯಾನ ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ಪಿ.ರಘುರಾಮ ಶೆಟ್ಟಿ ವಂದಿಸಿದರು.