• ಡಾ. ಎ.ಜಿ.ರವಿಶಂಕರ್

www.bantwalnews.com

ಬಾದಾಮಿಯಲ್ಲಿ ಯಥೇಷ್ಟವಾಗಿ ಕಬ್ಬಿಣದ ಸತ್ವ, ಕ್ಯಾಲ್ಸಿಯಂ,ಮೆಗ್ನೀಷಿಯಂ ತಾಮ್ರ ವಿಟಮಿನ್ಗಳು ಅಡಕವಾಗಿವೆ.ಆದುದರಿಂದ ಇದು ಪುಷ್ಟಿದಾಯಕವಾಗಿ ಮತ್ತು ಆರೋಗ್ಯದಾಯಕವಾಗಿ ಕೆಲಸ ಮಾಡುತ್ತದೆ.

  1. ಬದಾಮಿಯಲ್ಲಿ ಕ್ಯಾಲ್ಸಿಯಂ ಅಂಶ ಇರುವ ಕಾರಣ ಮಕ್ಕಳಲ್ಲಿ ಇದು ಮೂಳೆಯ ಬೆಳವಣಿಗೆ ಮತ್ತು ದ್ರುಢತೆಗೆ ಸಹಕರಿಸುತ್ತದೆ. ಹಾಗೆಯೇ ವಯಸ್ಕರಲ್ಲಿ ಮೂಳೆ ಮೆತ್ತಗಾಗುವುದನ್ನು ಅಥವಾ ಸುರಿಬೀಳುವುದನ್ನು (osteo porosis )ತಡೆ ಕಟ್ಟುತ್ತದೆ.
  2. ಇದರಲ್ಲಿ ನಾರಿನ ಅಂಶ ಇರುವ ಕಾರಣ ಮಲಬದ್ಧತೆ ನಿವಾರಣೆಯಾಗುತ್ತದೆ.
  3. ಬೆಳಗ್ಗೆ ಬಾದಾಮಿಯನ್ನು ಸೇವಿಸುವುದರಿಂದ ಹಸಿವಿನ ಪ್ರಮಾಣ ಕಡಿಮೆಯಾಗುತ್ತದೆ. ಆ ಮೂಲಕ ಶರೀರದ ಅಧಿಕ ತೂಕವನ್ನು ಇಳಿಸಲು ಸಹಕರಿಸುತ್ತದೆ.
  4. ನಿಯಮಿತವಾಗಿ ಬಾದಾಮಿಯನ್ನು ಸೇವಿಸುವುದರಿಂದ ಮಕ್ಕಳಲ್ಲಿ ನೆನಪು ಶಕ್ತಿ ಮತ್ತು ಬುದ್ದಿಶಕ್ತಿ ಅಧಿಕವಾಗುತ್ತದೆ.
  5. ಇದು ಶರೀರದಲ್ಲಿ ಒಳ್ಳೆಯ ಕೊಬ್ಬಿನ ಅಂಶವನ್ನು ಅಧಿಕ ಗೊಳಿಸಿ ಕೆಟ್ಟ ಕೊಬ್ಬಿನ ಅಂಶವನ್ನು ಹೋಗಲಾಡಿಸಿ ಸಮತೋಲನವನ್ನು ಕಾಪಾಡುತ್ತದೆ.ಇದರಿಂದ ಹೃದಯದ ಸಮಸ್ಯೆಯನ್ನೂ ಸಹ ತಡೆಕಟ್ಟಬಹುದು
  6. ಬಾದಾಮಿಯನ್ನು ಹುಡಿಮಾಡಿ ತುಪ್ಪಕ್ಕೆ ಹಾಕಿ ಕುಡಿಸಿ ಎಳೆಮಕ್ಕಳಿಗೆ ಹಚ್ಚುವುದರಿಂದ ಮಕ್ಕಳ ಚರ್ಮವು ಕಾಂತಿಯುತವಾಗುತ್ತದೆ.
  7. ಕಣ್ಣಿನ ಸುತ್ತ ಕಪ್ಪು ಕಲೆಗಳು ಕಾಣಿಸಿಕೊಂಡಾಗ ಬಾದಾಮಿಯ ಎಣ್ಣೆಯನ್ನು ಕಣ್ಣಿನ ಸುತ್ತ ಉಜ್ಜಿದರೆ ಕಲೆಗಳು ಮಾಯವಾಗುತ್ತವೆ.
  8. ಬಾದಾಮಿ ಸೇವನೆಯಿಂದ ತಲೆಕೂದಲು ಉದುರುವುದು ಕಡಿಮೆಯಾಗುತ್ತದೆ ಮತ್ತು ನುಣುಪನ್ನು ಪಡೆಯುತ್ತದೆ.
  9. ಬಾದಾಮಿ ಮುಟ್ಟಿನ ಸಮಯದ ಅಧಿಕ ರಕ್ತಸ್ರಾವವನ್ನು ಕಡಿಮೆಗೊಳಿಸುತ್ತದೆ.
  10. ಇದು ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಉತ್ತಮ ಪಥ್ಯ ಆಹಾರವಾಗಿದ್ದು ಅವರಲ್ಲಿ ರಕ್ತದ ಹಾಗು ಇತರ ಸತ್ವಗಳ ಸಮತೋಲನವನ್ನು ಕಾಪಾಡಲು ಸಹಕರಿಸುತ್ತದೆ.
  11. ಬಾದಾಮಿ ಹುಡಿಯನ್ನು ಹಾಲಿನಲ್ಲಿ ಕಲಸಿ ಮುಖಕ್ಕೆ ಲೇಪಿಸಿದರೆ ಮೊಡವೆಗಳು ಮಾಯವಾಗಿ ಮುಖ ಸುಂದರವಾಗುತ್ತದೆ.
  12. ಬಾದಾಮಿಯು ರಕ್ತದ ಒತ್ತಡವನ್ನು ಹತೋಟಿಗೆ ತರಲು ಸಹಕರಿಸುತ್ತದೆ.
  13. ಇದರಲ್ಲಿರುವ ನಾರಿನ ಅಂಶ ಹಾಗು ಮೆಗ್ನೀಷಿಯಂ ಅಂಶಗಳು ಮಧುಮೇಹವನ್ನು ಹತೋಟಿಯಲ್ಲಿಡಲು ಸಹಕರಿಸುತ್ತದೆ.
  14. ಬಾದಾಮಿ ಪುರುಷರಲ್ಲಿ ಲೈಂಗಿಕ ಸಾಮರ್ಥ್ಯ ಹಾಗು ವೀರ್ಯದ ಪ್ರಮಾಣವನ್ನು ಅಧಿಕ ಗೊಳಿಸುತ್ತದೆ.
  15. ಪ್ರತಿದಿನ 4 ರಿಂದ 5 ಬಾದಾಮಿ ಸೇವನೆಯು  ಮನುಷ್ಯನ ವ್ಯಾಧಿಕ್ಷಮತ್ವ ಶಕ್ತಿಯನ್ನು ಅಧಿಕ ಗೊಳಿಸುತ್ತದೆ.

 

Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.

Recent Posts