ಬಿಐಟಿ ಮತ್ತು ಬೀಡ್ಸ್ ಎಂಜಿನಿಯರಿಂಗ್ ಕಾಲೇಜು ವತಿಯಿಂದ ಸಿಇಟಿ ಪೂರಕ ಪರೀಕ್ಷೆ ಹಾಗೂ ವೃತ್ತಿಪರ ಕೋರ್ಸುಗಳ ಮಾರ್ಗದರ್ಶನ ಕಾರ್ಯಾಗಾರ ಕೊಳ್ನಾಡು ಗ್ರಾಮದ ನಾರ್ಶ ಮೈದಾನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತಿಚೆಗೆ ನಡೆಯಿತು.
ಸಿಇಟಿ ಪೂರಕ ಪರೀಕ್ಷೆಯನ್ನು ಬಿಐಟಿ ಕಾಲೇಜಿನ ಅಧ್ಯಾಪಕ ಇಮ್ರಾನ್ ಯು. ಎ, ನಿತಿನ್, ಸುಶಾಂತ್ ಹಾಗೂ ಮುಸ್ತಫಾ ಖಲೀಲ್ ವಿಟ್ಲ ನಡೆಸಿಕೊಟ್ಟರು.
ವಿಜೇತ ವಿದ್ಯಾರ್ಥಿಗಳಾದ ಮಿಸರಿಯ, ಮಾರಿಯಮ್ಮ ಹಾಗೂ ಅರ್ಶಿದ ಬಾನು ಅವರಿಗೆ ಪ್ರಮಾಣ ಪತ್ರ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಸರಕಾರಿ ಕಾಲೇಜಿನ ಪ್ರಾಂಶುಪಾಲೆ ಸಿಂತಿಯ ಡಿಸೋಜಾ, ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.
ಸಿಇಟಿ ಪೂರಕ ಪರೀಕ್ಷೆ ಹಾಗೂ ವೃತ್ತಿಪರ ಕೋರ್ಸುಗಳ ಬಗ್ಗೆ ಮಾರ್ಗದರ್ಶನ ನೀಡಲಾಯಿತು. ಈ ಕಾರ್ಯಕ್ರಮವು ಬಿಐಟಿ ಪ್ರಾಂಶುಪಾಲ ಡಾ. ಆಂಥೋನಿ ಯವರ ಮಾರ್ಗದರ್ಶನದಲ್ಲಿ ನಡೆಯಿತು.
| ಪುತ್ತೂರಿನ ಸ್ವಾಗತ ಸಮಿತಿಯ ಸಂಚಾಲಕರಾಗಿ ಉಜ್ವಲ್ ಪ್ರಭು | ಹೊರಕಾಣಿಕೆ ಸಮಿತಿಯ ಸಂಚಾಲಕರಾಗಿ ದಯಾನಂದ ಶೆಟ್ಟಿ ಉಜಿರೆಮಾರು ಆಯ್ಕೆ…
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…