ವಿಟ್ಲ

ರಮಾನಾಥ ವಿಟ್ಲ ಸಾರಥ್ಯದಲ್ಲಿ ವಿಟ್ಲೋತ್ಸವ-2018

www.bantwalnews.com

ಜಾಹೀರಾತು

ವಿಟ್ಲ ಶ್ರೀ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಪ್ರಯುಕ್ತ ವಿ.ಆರ್.ಸಿ ವತಿಯಿಂದ ರಮಾನಾಥ ವಿಟ್ಲ ಸಾರಥ್ಯದಲ್ಲಿ ವಿಟ್ಲೋತ್ಸವ-2018 ಪ್ರಯುಕ್ತ ಸಾಂಸ್ಕೃತಿಕ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.

ಸಭಾ ಕಾರ್ಯಕ್ರಮದಲ್ಲಿ ಭಾರತ ನೆಟ್‌ಬಾಲ್ ತಂಡದ ಉಪನಾಯಕ ನಿತಿನ್ ಪೂಜಾರಿ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಶಿಶಿರ್ ಶೆಣೈ, ಸ್ಪೂರ್ತಿ ರೈ, ದೀಪ್ತಿ, ಸ್ವಸ್ತಿಕ್, ಅಚಲ್, ವರುಣ್ ಕುಮಾರ್, ಮನೋಹರ್, ಶ್ರೀಕಾಂತ್, ಹೇಮಲತಾ, ಬಿನಿತಾ, ಧನ್ಯಶ್ರೀ, ಜಯಶ್ರೀ, ಸೂರಜ್, ಪ್ರಣಮ್ಯ, ಮಧುಶ್ರೀ, ಅಕ್ಷತಾ, ನಿಧಿ, ಬಬಿತಾ, ಹಸ್ತಾ ಜೈನ್, ನೇಹಾ ಎಂ.ಎಸ್, ಕಿಶನ್, ಅವರನ್ನು ಸನ್ಮಾನಿಸಲಾಯಿತು. ಅದಲ್ಲದೇ ಸ್ಥಳೀಯ ಪ್ರತಿಭೆ ಹೊನ್ನಪ್ಪ ಮೇಗಿನಪೇಟೆ ಅವರ ಕಂಠದಿಂದ ಮೂಡಿ ಬಂದ ಹಾಡುಗಳ ಪ್ರದರ್ಶನ ನೀಡಲು ಅವಕಾಶ ಕಲ್ಪಿಸಲಾಗಿತ್ತು.

ಕಗ್ಗತ್ತಲನ್ನು ಸೀಳಿ ಪ್ರಕಾಶಿಸುವ ಝಗಮಗ ಆಕರ್ಷಕ ಬೆಳಕಿನಲ್ಲಿ, ಅತ್ಯಾದ್ಭುತ ವೇದಿಕೆಯಲ್ಲಿ ಸಂಗೀತದ ನಡುವೆ ಅದ್ಭುತ ನೃತ್ಯಗಳ ತುಣುಕುಗಳು ಪ್ರದರ್ಶನಗೊಂಡಿದೆ. ರಾಜೇಶ್ ಮಂಗಳೂರು ನೇತೃತ್ವದಲ್ಲಿ ವಾಯ್ಸ್ ಆಫ್ ಮ್ಯೂಸಿಕ್ ಮಂಗಳೂರು ಅವರಿಂದ ಸಂಗೀತ ರಸಮಂಜರಿ ನಡೆಯಿತು. ಸಿಝಲಿಂಗ್ ಗೈಸ್ ನೃತ್ಯ ತಂಡ ಪ್ರೇಕ್ಷಕರಿಗೆ ಹೆಚ್ಚಿನ ಮನರಂಜನೆ ನೀಡಿದೆ. ಇದರ ನಡುವೆ ಚಿತ್ರಕಲಾ ಪ್ರತಿಭೆ ಶಬರಿ ಗಾಣಿಗ ಅವರಿಂದ ಆಕರ್ಷಕ ಫೈಟಿಂಗ್ ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಗಿದೆ.

ಜಾಹೀರಾತು

ವಾಯ್ಸ್ ಆಫ್ ಮ್ಯೂಸಿಕ್ ತಂಡದ ಪ್ರಕಾಶ್ ಮಹಾದೇವ್, ರೂಪ ಪ್ರಕಾಶ್, ಇಮ್ತಿಯಾಜ್, ಕೇರಳ ರಾಜ್ಯದ ಹೆಸರಾಂತ ಗಾಯಕರಾದ ರಮೀಝ್, ರಿಯಾನ ಹಾಗೂ ರಶ್ಮಿ ನಾರಾವಿ, ಅವರ ಕಂಠದಿಂದ ವಿವಿಧ ಹಾಡುಗಳು ಮೂಡಿ ಬಂದು ಪ್ರೇಕ್ಷಕರನ್ನು ಹುಚ್ಚೆದ್ದು, ಕುಣಿಸಿದೆ. ಪ್ರವೀಣ್ ಮಂಗಳೂರು ನಿರೂಪನೆ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದೆ.

ವಿಟ್ಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾಗಿರುವ ರಮಾನಾಥ ವಿಟ್ಲ ಅವರ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಕಾರದಲ್ಲಿ ೧೯೩ರಲ್ಲಿ ಪ್ರಾರಂಭಗೊಂಡ ಈ ವಿಟ್ಲೋತ್ಸವ ಕಾರ್ಯಕ್ರಮ ಇಂದಿನವರೆಗೂ ಪ್ರತಿ ವರ್ಷಾವಧಿ ಜಾತ್ರೋತ್ಸವ ಸಂದರ್ಭ ಆಯೋಜಿಸಲಾಗುತ್ತಿದೆ. ಪ್ರತಿವರ್ಷವೂ ಒಂದಲೊಂದು ವಿಶಿಷ್ಟತೆ ಹೊಂದಿರುವ ವಿಟ್ಲೋತ್ಸವ ಈ ಬಾರಿಯೂ ಸಾವಿರಾರು ಸಂಗೀತ ಪೇಮಿಗಳಿಗೆ ರಸದೌತನ ನೀಡಿದೆ.

ಕಾರ್ಯಕ್ರಮದಲ್ಲಿ ವಿಟ್ಲ ಅರಮನೆಯ ಕೃಷ್ಣಯ್ಯ ಕೆ, ಉದ್ಯಮಿ ಭಾಸ್ಕರ್ ಸನಿಲ್, ರಮಾನಾಥ ವಿಟ್ಲ, ನ್ಯಾಯವಾದಿ ನಟೇಶ್ ವಿಟ್ಲ, ವಿಟ್ಲ ಮಂಗೇಶ್ ಭಟ್, ಅಶೋಕ್ ವಿಟ್ಲ ಮೊದಲಾದವರು ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts