Categories: Uncategorized

20 ಸಾವಿರ ಫಲಾನುಭವಿಗಳಿಗೆ 94ಸಿಸಿಯಡಿ ಹಕ್ಕುಪತ್ರ: ರೈ

  • ಅಪಪ್ರಚಾರ ಮಾಡುವವರು ಅಭಿವೃದ್ಧಿ ವಿರೋಧಿಗಳು
  • ಅಭಿವೃದ್ಧಿ ಕಾಮಗಾರಿಗೆ ತಡೆ ಸಲ್ಲದು

ಜಾಹೀರಾತು

 

ಈವರೆಗೆ ಬಂಟ್ವಾಳ ತಾಲೂಕಿನಲ್ಲಿ 94ಸಿಸಿ ಯೋಜನೆಯಡಿ ನಿವೇಶನಕ್ಕಾಗಿ 25 ಸಾವಿರ ಅರ್ಜಿಗಳು ಬಂದಿದ್ದು, 20 ಸಾವಿರ ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಬಂಟ್ವಾಳ ತಾಪಂನ ಎಸ್.ಜಿ.ಎಸ್.ವೈ. ಸಭಾಂಗಣದಲ್ಲಿ ಶನಿವಾರ ನಡೆದ 94ಸಿಸಿ ಹಕ್ಕುಪತ್ರ ವಿತರಣೆ, ಬಂಟ್ವಾಳ ತಾಲೂಕು ಪಂಚಾಯತ್ ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ಶನಿವಾರ ನಡೆದ ೯೪ಸಿಸಿ ಹಕ್ಕು ಪತ್ರ ವಿತರಣೆ, ಮುಖ್ಯಮಂತ್ರಿ ಪರ್ಯಾಯ ನಿಧಿ ವಿತರಣೆ ಹಾಗೂ ರಾಜ್ಯ ಸರಕಾರದ ಆಡಳಿತ ಅಭಿವೃದ್ಧಿ ಪುಸ್ತಕ ಬಿಡುಗಡೆ ಸಂದರ್ಭ ಮಾತನಾಡಿದ ಅವರು, ಕೆಲವರು ೯೪ಸಿಸಿ ಹಕ್ಕು ಪತ್ರ ವಿತರಣೆ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ. ಅವರು ಅಭಿವೃದ್ಧಿ ವಿರೋಧಿಗಳು ಎಂದರು.

ಜಾಹೀರಾತು

ಹಕ್ಕುಪತ್ರ ಇಲ್ಲದ ಕಾರಣ ಹಲವು ಯೋಜನೆಗಳಿಂದ ಜನರು ವಂಚಿತರಾಗುತ್ತಿದ್ದಾರೆ. ಗೋಮಾಳದಲ್ಲಿ ಕೂತವರಿಗೆ, ಪರಂಬೋಕು ಜಾಗದಲ್ಲಿ ಕೂತವರಿಗೂ ಹಕ್ಕುಪತ್ರ ವಿತರಿಸಲಾಗುತ್ತಿದೆ. ಇದರಿಂದ ಬಡವರು ಸ್ವಾಭಿಮಾನದಿಂದ ಬದುಕುವ, ಜೀವನದಲ್ಲಿ ಮುಂದೆ ಬರಲು ಅನುಕೂಲವಾಗುತ್ತದೆ ಎಂದ ಅವರು, ಕಳೆದ ಚುನಾವಣಾ ಸಂದರ್ಭ ಕೊಟ್ಟ ಭರವಸೆ ಈಡೇರಿಸಿದ್ದೇವೆ. ಅಲ್ಲದೆ ಅಭಿವೃದ್ಧಿಯಲ್ಲೂ ಬಂಟ್ವಾಳ ಕ್ಷೇತ್ರ ಇತರ ಕ್ಷೇತ್ರಗಳಿಗೆ ಮಾದರಿಯಾಗಿದೆ ಎಂದರು.

ಅಭಿವೃದ್ಧಿ ಕಾರ್ಯದ ವಿಷಯದಲ್ಲಿ ಎಷ್ಟೇ ವಿರೋಧ ಇದ್ದರೂ ಯಾವುದನ್ನೂ ತಾನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಜನಪರ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದಷ್ಟೇ ತನ್ನ ಗುರಿ. ಅದರಲ್ಲಿ ಯಶಸ್ವಿಯಾಗಿದ್ದೇನೆ. ಬಡ, ಮಧ್ಯಮ ವರ್ಗದ ಜನರ ಹಸಿವು ನೀಗಿಸುವ ಸಲುವಾಗಿ ಹಸಿವುಮುಕ್ತ ಕರ್ನಾಟಕ ಯೋಜನೆಯಡಿ ಸರಕಾರ ಅಕ್ಕಿ ವಿತರಿಸುತ್ತಿದೆ. ಇದಕ್ಕೂ ಆಕ್ಷೇಪಗಳು ಕೇಳಿಬರುತ್ತಿವೆ ಎಂದರು.

ಬಸ್ ನಿಲ್ದಾಣ ಶೀಘ್ರ:

ಜಾಹೀರಾತು

ತಾಪಂ ಕಟ್ಟಡದಲ್ಲಿ ಖಾಸಗಿ ಬಸ್ ನಿಲ್ದಾಣವನ್ನು ಶೀಘ್ರ ನಿರ್ಮಿಸಲಾಗುವುದು. ಇದಕ್ಕೆ ಅಡ್ಡಿಪಡಿಸುವವರು ಅಭಿವೃದ್ಧಿ ವಿರೋಧಿಗಳು ಎಂದು ದೂರಿದ ರೈ, ತನ್ನ ಅಧಿಕಾರವಧಿಯಲ್ಲಿ ಮಾಡಿದ ಹಲವು ಕಾರ್ಯಗಳನ್ನು ಪ್ರಸ್ತಾಪಿಸಿದರು.

ಮುಖ್ಯ ಮಂತ್ರಿ ಪರ್ಯಾಯ ನಿಧಿ ವಿತರಣೆ ಯೋಜನೆಯಡಿ ಪಲಾನುಭವಿಗಳಿಗೆ ತಲಾ ೨೫ ಸಾವಿರ ರೂ. ಹಾಗೂ ೫೦ ಸಾವಿರ ರೂ. ವಿತರಿಸಲಾಯಿತು.

ಇದೇ ವೇಳೆ ಕರ್ನಾಟಕ ಸರಕಾರದ ನಾಲ್ಕುವರೆ ವರ್ಷದ ಆಡಳಿತ ಅಭಿವೃದ್ಧಿಗಳ ಕುರಿತ “ಕೊಟ್ಟ ಮಾತಿಗೆ ದಿಟ್ಟ ಹೆಜ್ಜೆ” ಎಂಬ ಪುಸ್ತಕ ಬಿಡುಗಡೆ ಮಾಡಲಾಯಿತು.

ಜಾಹೀರಾತು

ಈ ಸಂದರ್ಭದಲ್ಲಿ ತಹಶೀಲ್ದಾರ್ ಪುರಂದರ ಹೆಗ್ಡೆ, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಮಂಜುಳಾ ಮಾಧವ ಮಾವೆ, ವಾರ್ತಾಧಿಕಾರಿ ಬಿ.ಎ. ಖಾದರ್ ಶಾ, ತಾಪಂ ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ