ಬಂಟ್ವಾಳ

ಸ್ವಚ್ಛತೆಯ ಪಾಠದೊಂದಿಗೆ ಮೂರನೇ ದಿನಕ್ಕೆ ಕಾಲಿಟ್ಟ ಬಿಜೆಪಿ ನಡಿಗೆ

ಬಿಜೆಪಿ ಪ್ರಮುಖರಾದ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಅವರ ನೇತೃತ್ವದಲ್ಲಿ ನಡೆಯುತ್ತಿರುವ ಬಿಜೆಪಿ ಪಾದಯಾತ್ರೆ ರಾಯಿ ದಾಮೋದರ ಪೂಜಾರಿ ಮನೆಯಿಂದ ಮಂಗಳವಾರ ಆರಂಭಗೊಂಡಿತು.

ಜಾಹೀರಾತು

ಕೇತ್ರೋಡಿ ಕ್ವಾರ್ಟಸ್ ರಸ್ತೆಯಲ್ಲಿ ಪಂಜಿಕಲ್ಲಿನ ಬಾಲೇಶ್ವರ ಗರೋಡಿ ಬಳಿ ಸೇರಿದ್ದ ಪಂಜಿಕಲ್ಲಿನ ಬಿಜೆಪಿ ಕಾರ್ಯಕರ್ತರು ಯಾತ್ರೆಯನ್ನು ಸ್ವಾಗತಿಸಿದರು.

ಜಾಹೀರಾತು

ನಿಂಗಲ್ ಬಾಕಿಮಾರುವಿನಲ್ಲಿನ ಮೈದಾನದಲ್ಲಿ ಕಸದ ಕೊಂಪೆಯನ್ನು ಕಂಡ ಯಾತ್ರೆಯಲ್ಲಿ ಪಾಲ್ಗೊಂಡ ಕಾರ್ಯಕರ್ತರು, ಅದನ್ನು ಸ್ವಚ್ಛ ಮಾಡಿದರು. ಈ ಮೂಲಕ ಪ್ರಧಾನಿ ಮೋದಿ ಅವರ ಸ್ವಚ್ಛ ಭಾರತ ಆಶಯವನ್ನು ಕಾರ್ಯರೂಪಕ್ಕಿಳಿಸಿದರು.

ನಂತರ ಪಾದಯಾತ್ರೆಯು ದಂಡೆಗೋಳಿ ಮೂಲಕ ಚೆನ್ನೈತ್ತೋಡಿಗ್ರಾಮದ ವಾಮದಪದವು ಪೇಟೆತಲುಪಿತು ಈ ಸಂದರ್ಭದಲ್ಲಿ ಚೆನ್ನೈತ್ತೋಡಿಯ ಬಿಜೆಪಿ ವತಿಯಂದ ಸ್ವಾಗತ ನಡೆಯಿತು. ಮಹಿಳಾ ಕಾರ್‍ಯಕರ್ತರುಆರತಿಎತ್ತಿ ಸ್ವಾಗತಿಸಿದರು. ನಂತರ ಗಣೇಶ ಮಂದಿರದಲ್ಲಿ ಮದ್ಯಾಹ್ನದ ಭೋಜನ ವ್ಯವಸ್ಥೆಯನ್ನು ಮುಗಿಸಿಕೊಂಡು ಯಾತ್ರೆಯು ಕೊಡಂಬೆಟ್ಟು ಮೂಲಕ ಕಾವಳಪಡೂರಿಗೆ ಸಾಗಿತು.

ಜಾಹೀರಾತು

ಈ ಸಂದರ್ಭದಲ್ಲಿ ಕ್ಷೇತ್ರ ಅಧ್ಯಕ್ಷರಾದ ದೇವದಾಸ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ , ರಾಜ್ಯ ಬಿಜೆಪಿ ಸಹವಕ್ತಾರೆ ಸುಲೋಚನಾ ಜಿ.ಕೆ ಭಟ್, ಜಿ.ಪಂ ಸದಸ್ಯರಾದತುಂಗಪ್ಪ ಬಂಗೇರಾ, ಕಮಾಲಕ್ಷಿ ಪೂಜಾರಿ, ಜಿಲ್ಲಾ ಉಪಾಧ್ಯಕ್ಷರಾದ ಜಿ.ಆನಂದ, ಕ್ಷೇತ್ರ ಉಪಾಧ್ಯಕ್ಷರಾದ ವಿಜಯ ರೈ , ಕಾರ್ಯದರ್ಶಿಗಳಾದ ಸೀತರಾಮ ಪೂಜಾರಿ, ರಮಾನಾಥ ರಾಯಿ, ಗಣೇಶ್‌ ರೈಮಾಣಿ, ಎಸ್.ಸಿ ಮೊರ್ಚಾ ಜಿಲ್ಲಾಧ್ಯಕ್ಷರಾದ ದಿನೇಶ್‌ ಅಮ್ಟೂರು, ಜಿಲ್ಲಾ ಸಮಿತಿ ಸದಸ್ಯರಾದ ರೋನಾಲ್ಡ್ ಡಿ ಸೋಜಾ, ಜೋಕಿಂ ಮಿನೆಜಸ್, ರಾಜ್ಯ ಯುವ ಮೋರ್ಚಾ ಸದಸ್ಯ ಪೃಥ್ವಿರಾಜ್ ಬಂಗೇರಾ, ಶಕ್ತಿ ಕೇಂದ್ರ ಅಧ್ಯಕ್ಷರಾದ ರತ್ನಕುಮಾರ್‌ ಚೌಟ, ಪ್ರಧಾನ ಕಾರ್ಯದರ್ಶಿ ಸಂಜೀವ ಪೂಜಾರಿ, ರೈತ ಮೋರ್ಚಾ ಅಧ್ಯಕ್ಷರಾದ ತನಿಯಪ್ಪಗೌಡ , ಪ್ರ.ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ ಬಾರೆಕ್ಕಿನಡೆ, ಹಿಂದುಳಿವರ್ಗದ ಅಧ್ಯಕ್ಷರಾದ ವಸಂತ ಅಣ್ಣಳಿಕೆ, ಪ್ರ.ಕಾರ್ಯದರ್ಶಿ ಹರೀಶ್‌ರಾಯಿ, ಬಂ.ವ್ಯ.ಸೇ.ಸ ನಿರ್ದೇಶಕರಾದ ಕರುಣೇಂದ್ರ ಪೂಜಾರಿ, ಕೆ.ಎನ್ ಶೇಖರ್, ಯುವಮೋರ್ಚಾದ ಸಂತೋಷ್‌ ರಾಯಿ, ದಿನೇಶ್ ಶೆಟ್ಟಿ ದಂಬೆದಾರು, ಮೋಹನದಾಸ್, ಸಂಪತ್‌ ಕೋಟ್ಯಾನ್, ರಾಜೇಂದ್ರ, ರಾಯಿ ಪಂಚಾಯತ್‌ಅಧ್ಯಕ್ಷರಾದ ದಯಾನಂದ ಸಫಲ್ಯ, ಪಂಜಿಕಲ್ಲು ಪಂಚಾಯತ್‌ಉಪಾಧ್ಯಕ್ಷರಾದ ಲಕ್ಷ್ಮಣ್‌ಗೌಡ, ರಾಯಿ, ಪಂಜಿಕಲ್ಲು, ಚೆನ್ನೈತ್ತೋಡಿ  ಪಂಚಾಯತ್ ಸಮಿತಿ ಅಧ್ಯಕ್ಷರುಗಳಾದ ಪರಮೇಶ್ವರ ಪೂಜಾರಿ, ಚಿದಾನಂದ ಕುಲಾಲ್, ಜಯರಾಮ ಶೆಟ್ಟಿ ಕಾಪು, ಮಹಿಳಾ ಮೋರ್ಚಾದ ಸದಸ್ಯರುಗಳಾದ ವಿನುತಾ ಸಫಲ್ಯ,ರೇಣುಕಾ ರೈ,ಗುಣವತಿ,ನಳಿಣಾಕ್ಷಿ ಶೆಟ್ಟಿ, ಪಂಚಾಯತ್ ಸದಸ್ಯರಾದಹರೀಶ್ ಪೂಜಾರಿ, ಬಾಲಕೃಷ್ಣ ಪೂಜಾರಿ, ಸುಮತಿ,ಶಾಲಿನಿ,ರೂಪ,ಹರೀಣಾಕ್ಷಿ, ಮೋಹನ್‌ದಾಸ್‌ಗಟ್ಟಿ, ಪೂವಪ್ಪ ಮೆಂಡನ್ , ಪಕ್ಷದ ಪ್ರಮುಖರುಗಳಾದ ಪ್ರಕಾಶ್‌ಅಂಚನ್, ಗೋಪಾಲಕೃಷ್ಣ ಚೌಟ, ಪುಷ್ಪರಾಜಚೌಟ, ಕೃಷ್ಣಪ್ಪಗೌಡ,ವಿನೋದ್ ಪೂಜಾರಿ, ಶ್ಯಾಮಪ್ರಸಾದ್ ಪೂಂಜಾ ,ಯಶೋಧರ ಶೆಟ್ಟಿ, ಪ್ರಕಾಶ್ ಶೆಟ್ಟಿ ಆಲಕ್ಕಿ, ರೂಪೇಶ್ ಪೂಜಾರಿ, ಉಮೇಶ್‌ಗೌಡ,ರವೀಂದ್ರ ಪೂಜಾರಿ ಬದನಡಿ,ಗಂಗಾಧರ ಪಿಲ್ಕಾಜೆ, ವಸಂತಗೌಡ ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ