ಬಂಟ್ವಾಳನ್ಯೂಸ್ www.bantwalnews.com ಆರಂಭವಾಗಿ ಒಂದು ವರ್ಷ, ಒಂದು ತಿಂಗಳು ಕಳೆಯಿತು. ತಾಲೂಕಿನದ್ದೇ ದೈನಂದಿನ ಸುದ್ದಿಗಳ ಜೊತೆಗೆ ಹಲವು ವೈವಿಧ್ಯಗಳನ್ನು ನೀಡುವ ವೆಬ್ ಪತ್ರಿಕೆಯ ಅಗತ್ಯವಿದ್ದಾಗ ನವೆಂಬರ್ 10, 2016ರಂದು ಬಂಟ್ವಾಳನ್ಯೂಸ್ ಆರಂಭಗೊಂಡಿತು. ಪತ್ರಿಕೆ ಆರಂಭಗೊಂಡ ಮೇಲೆ ಹಲವರು ಇಂಟರ್ ನೆಟ್ ಮೂಲಕ ಓದುವ ಹವ್ಯಾಸ ಬೆಳೆಸಿಕೊಂಡರು. ಮೊಬೈಲ್ ಮೂಲಕ ಬಂಟ್ವಾಳದ ಸುದ್ದಿ ಓದುವ ಹವ್ಯಾಸವನ್ನು ಹಲವರು ರೂಢಿಸಿದರೆ, ಸುದ್ದಿ ಮಾಧ್ಯಮದ ಈ ಸಾಧ್ಯತೆ ಹಲವರಿಗೆ ಪ್ರೇರಣೆಯಾಯಿತು ಎಂಬುದು ಹೆಮ್ಮೆಯ ವಿಷಯ. ಸುದ್ದಿ, ಅಂಕಣಗಳು, ಲೇಖನಗಳೊಂದಿಗೆ ಯಾವುದೇ ಅಬ್ಬರವಿಲ್ಲದೆ ಬಂಟ್ವಾಳನ್ಯೂಸ್ ಮೊದಲ ವರ್ಷವನ್ನು ಯಶಸ್ವಿಯಾಗಿಯೇ ಮುಗಿಸಿದ ಸವಿನೆನಪಿಗೆ ವ್ಯಂಗ್ಯಚಿತ್ರಗಳ – ವ್ಯಂಗ್ಯನೋಟ ಆರಂಭಗೊಂಡಿತು. ಕಳೆದ ಬಾರಿ ನಮ್ಮೂರಿನವರೇ ಆದ ಮುಕೇಶ್ ರಾವ್, ವ್ಯಂಗ್ಯಚಿತ್ರವನ್ನು ಒದಗಿಸಿದ್ದು ಅವು ಪ್ರಕಟಗೊಂಡಿವೆ. ಪ್ರಕಟಗೊಂಡ ಚಿತ್ರಕ್ಕೆ ಪ್ರಶಸ್ತಿಯೂ ದೊರಕಿದೆ. ಈ ಬಾರಿ ಇನ್ನೊಂದು ವ್ಯಂಗ್ಯಚಿತ್ರ – ವ್ಯಂಗ್ಯನೋಟಕ್ಕಾಗಿ ಪ್ರಕಟಗೊಳ್ಳುತ್ತಿದೆ.
ನೀವೂ ಕಾರ್ಟೂನ್ ಬರೆಯಬಹುದು. ರಚಿಸಿದ ವ್ಯಂಗ್ಯಚಿತ್ರಗಳನ್ನು ನಮ್ಮ ವಿಳಾಸಕ್ಕೆ ಈ ಮೈಲ್ ಮಾಡಿರಿ. (ನೆನಪಿಡಿ: ಯಾವ ಜಾತಿ, ಧರ್ಮ, ವ್ಯಕ್ತಿ, ಸಿದ್ಧಾಂತಗಳ ಮನನೋಯಿಸುವ ಕಾರ್ಟೂನ್ ಗಳಿಗೆ ಇಲ್ಲಿ ಜಾಗವಿಲ್ಲ) ನಮ್ಮ ಇ ಮೈಲ್ ವಿಳಾಸ ಹೀಗಿದೆ: bantwalnews@gmail.com
ಸಹೃದಯಿ ಸ್ನೇಹಿತರ, ಓದುಗರ ಪ್ರೋತ್ಸಾಹ ಸದಾ ಇರಲಿ.