ಬಿಇಟಿ ಮತ್ತು ಬೀಡ್ಸ್ ಎಂಜಿನಿಯರ್ ಕಾಲೇಜು ವತಿಯಿಂದ ಸಿಇಟಿ ಪೂರಕ ಪರೀಕ್ಷೆ ಹಾಗೂ ವೃತ್ತಿಪರ ಕೋರ್ಸ್‌ಗಳ ಮಾರ್ಗದರ್ಶನ ಕಾರ್ಯಾಗಾರ ಬಂಟ್ವಾಳ ತಾಲೂಕಿನ ತುಂಬೆ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ಸುಮಾರು 50ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದರು. ಸಿಇಟಿ ಹಾಗೂ ವೃತ್ತಿಪರ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಯಿತು.
ಬಿಇಟಿ ಕಾಲೇಜಿನ ಪ್ರಾಂಶುಪಾಲ ಆಂಟನಿ ಅವರು ಮಾರ್ಗದರ್ಶನ ನೀಡಿದರು. ಸಿಇಟಿ ಪೂರಕ ಪರೀಕ್ಷೆಯನ್ನು ಕಾಲೇಜು ಪ್ರಾಧ್ಯಾಪಕರಾದ ಝಮೀರ್ ಅಹ್ಮದ್, ಮುಸ್ತಫಾ ಖಲೀಲ್ ವಿಟ್ಲ, ಇಮ್ರಾನ್ ಯು.ಎ, ನಿತಿನ್ ಮತ್ತು ಸುಶಾಂತ್ ಕೆ.ಜೆ ನಡೆಸಿಕೊಟ್ಟರು. ವಿಜೇತ ವಿದ್ಯಾರ್ಥಿಗಳಾದ ಮಹಮ್ಮದ್ ರಿಲ್‌ಹಾನ್ ಇಬ್ರಾಹಿಂ, ಖತೀಜತುಲ್ ನಿಹಾ, ಆಯಿಷತ್ ಮುರ್ಶಿದ ಅವರಿಗೆ ಪ್ರಮಾಣ ಪತ್ರ ಪ್ರಶಸ್ತಿ ವಿತರಿಸಲಾಯಿತು. ತುಂಬೆ ಕಾಲೇಜಿನ ಪ್ರಾಂಶುಪಾಲ ಗಂಗಾಧರ್ ಆಳ್ವ ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.
IFTAAR ORGANISED BY FORMER MINISTER RAMANATHA RAI AT PANEMANGALORE (more…)