ಅಗ್ರಾರ್ ಚರ್ಚ್ ಶಾಲಾ ವಠಾರದಲ್ಲಿ 14 ವರ್ಷಕ್ಕಿಂತ ಮೇಲ್ಪಟ್ಟ ಹೆಣ್ಣು ಮಕ್ಕಳ ಮತ್ತು ಸ್ತ್ರೀಯರ ಉಚಿತ ಆರೋಗ್ಯ ಮಾಹಿತಿ , ತಪಾಸಣಾ ಶಿಬಿರವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಅಗ್ರಾರ್ ಚರ್ಚ್ ಧರ್ಮಗುರು ವಂ| ಗ್ರೆಗರಿ ಡಿ’ಸೋಜ, ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆಯ ಆಡಳಿತಾಧಿಕಾರಿ ವಂ| ರೋಶನ್ ಕ್ರಾಸ್ತಾ ಸಭೆ ಉದ್ದೇಶಿಸಿ ಮಾತನಾಡಿ ಶಿಬಿರದ ಉದ್ದೇಶ ತಿಳಿಸಿದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್. ರೊಡ್ರಿಗಸ್, ಕೆಥೋಲಿಕ್ ಸಭಾ ಕೇಂದ್ರಿಯ ಸಮಿತಿ ಅಧ್ಯಕ್ಷ ಅನಿಲ್ ಲೋಬೊ, ಲಯನ್ಸ್ ಅಧ್ಯಕ್ಷ ಜಗದೀಶ ಎಡಪಡಿತ್ತಾಯ, ಲಯನೆಸ್ ಅಧ್ಯಕ್ಷೆ ಚಿತ್ರಾ ಜೆ.ಎಡಪಡಿತ್ತಾಯ, ಕೆಥೋಲಿಕ್ ವಲಯ ಸಮಿತಿ ಅಧ್ಯಕ್ಷ ಸ್ಟೇನಿ ಲೋಬೊ, ಕಾರ್ಯದರ್ಶಿ ಫ್ರಾನ್ಸಿಸ್ ಡೇಸಾ, ನೀಯೊಜಿತ ಅಧ್ಯಕ್ಷ ಆಲ್ವಿನ್ ಮೋನಿಸ್, ಮುಖ್ಯಶಿಕ್ಷಕಿ ಭ| ಪ್ರೀತಿ ಫೆರ್ನಾಂಡಿಸ್, ಅನುದಾನಿತ ಶಾಲೆಯ ಮುಖ್ಯಶಿಕ್ಷಕಿ ಓಡ್ರಿನ್ ಡಿ’ಸೋಜ, ಬಂಟ್ವಾಳ ವಲಯ ಸ್ತ್ರೀಹಿತದ ಲೀನಾ ಮೊಂತೆರೊ, ಚರ್ಚ್ ಪಾಲನಾ ಸಮಿತಿ ಕಾರ್ಯದರ್ಶಿ ವಿನ್ಸೆಂಟ್ ಕಾರ್ಲೊ, ಪೀಟರ್ ಜೆ. ರೊಡ್ರಿಗಸ್, ಡಾ| ಎಲ್‌ರೋಯ್ ಸಲ್ದಾನ್ಹಾ ಉಪಸ್ಥಿತರಿದ್ದರು.
ಕಥೋಲಿಕ್ ಸಭಾ ಅಗ್ರಾರ್ ಘಟಕ ಅಧ್ಯಕ್ಷ ಆಂಟನಿ ಸಿಕ್ವೇರಾ ಸ್ವಾಗತಿಸಿದರು. ಸ್ತ್ರೀಹಿತ ಸಚೇತಕಿ ವೀರಾ ರೊಡ್ರಿಗಸ್ ವಂದಿಸಿದರು. ಕ್ಲಿಯೋನ ಡಿಸೋಜ, ಗ್ಲೇಶ್ಮ ವೇಗಸ್ ಕಾರ್ಯಕ್ರಮ ನಿರ್ವಹಿಸಿದರು.