ಸಾಮಾಜಿಕ ಚಿಂತನೆ, ಸಂಸ್ಕಾರವನ್ನು ನೀಡಲು ಶಿಕ್ಷಣ ವಿಫಲವಾಗಿರುವ ಸನ್ನಿವೇಶದಲ್ಲಿ ಸಾಹಿತ್ಯಗಳು ಆ ಕೆಲಸವನ್ನು ಕೈಗೆತ್ತಿಕೊಳ್ಳಬೇಕು ಎಂದು ಮೊಡಂಕಾಪು ದೀಪಿಕಾ ಹೈಸ್ಕೂಲು ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲೇಶ್ವರ ಹೆಬ್ಬಾರ ಹೇಳಿದರು.
ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನ ಪ್ರಮಾಥಿ ಕನ್ನಡ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನೀರ್ಕಜೆ ಸುಬ್ರಾಯ ಭಟ್ ಮತ್ತು ಸಹೋದರರ ದತ್ತಿ ಕಾರ್ಯಕ್ರಮದಲ್ಲಿ ಸಾಹಿತ್ಯದ ಮೂಲಕ ಸಾಮಾಜಿಕ ಸಂಸ್ಕಾರ ವಿಷಯದ ಬಗ್ಗೆ ಅವರು ಮಾತನಾಡಿದರು.
ನಮ್ಮ ಸಾಹಿತ್ಯಗಳು ಜೀವನದ ಪ್ರತಿ ಕ್ಷಣಗಳಿಗೆ ಆಧಾರವಾಗಿರುವ ವಿಚಾರಗಳನ್ನು ತಿಳಿಸುತ್ತವೆ. ಅದನ್ನು ಅಳವಡಿಸಿಕೊಂಡಾಗ ಪರಿಪೂರ್ಣ ವ್ಯಕಿತ್ವ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ, ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಅಧ್ಯಕ್ಷ ಮೋಹನ್ ರಾವ್, ಕನ್ನಡ ಭವನ ನಿರ್ಮಾಣ ಸಮಿತಿಯ ಸಂಚಾಲಕ ಗಂಗಾಧರ ಭಟ್ ಕೊಳಕೆ, ನಿವೃತ್ತ ಅಧ್ಯಾಪಕರಾದ ಕೃಷ್ಣಶರ್ಮ ಉಪಸ್ಥಿತರಿದ್ದರು.
ಪ್ರಮಾಥಿ ಕನ್ನಡ ಸಂಘದ ನಿರ್ದೇಶಕರಾದ ಯತಿರಾಜ್ ಸ್ವಾಗತಿಸಿ, ಸಂಘದ ಸದಸ್ಯೆ ಚೈತ್ರ ವಂದಿಸಿದರು. ಸಂಘದ ಕಾರ್ಯದರ್ಶಿ ಅನುಷಾ ಕಾರ್ಯಕ್ರಮ ನಿರೂಪಿಸಿದರು.