ಕಿತ್ತಳೆ ಹಣ್ಣು ಮಾರಾಟ ಮಾಡಿ ಊರಿಗೆ ಶಾಲೆ ಕಟ್ಟಿಕೊಟ್ಟ ಅಕ್ಷರ ಸಂತ ಹಾಜಬ್ಬ ಬಗ್ಗೆ ಪಠ್ಯಪುಸ್ತಕ ದಲ್ಲಿ ಓದಿದ್ದ ವಿದ್ಯಾರ್ಥಿಗಳಿಗೆ ಸ್ವತಃ ಅವರೊಂದಿಗೆ ಸಂವಾದ ನಡೆಸುವ ಅಪೂರ್ವ ಅವಕಾಶ ಒದಗಿ ಬಂದದ್ದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಂಟ್ವಾಳದಲ್ಲಿ. ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಹಾಗೂ ಉದ್ಯೋಗ ಮಾರ್ಗದರ್ಶನ ಕೋಶದ ಸಹ ಆಶ್ರಯದಲ್ಲಿ ನಡೆದ ವಿಶೇಷ ಕಾರ್ಯಕ್ರಮ ದಲ್ಲಿ ಹರೇಕಳ ಹಾಜಬ್ಬ ಮುಕ್ತ ಸಂವಾದ ನಡೆಸಿದರು. ಹಾಜಬ್ಬರ ಮುಗ್ಧತೆ ಸರಳತೆಗೆ ಮಕ್ಕಳು ಮನಸೋತರು.
ಹೊಸದಿಗಂತದ ಹಿರಿಯ ಪತ್ರಕರ್ತ ಗುರುವಪ್ಪ ಎನ್.ಟಿ ಬಾಳೆಪುಣಿ ಹಾಜಬ್ಬರ ಅಪೂರ್ವ ವ್ಯಕ್ತಿತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು. ವಿದ್ಯಾರ್ಥಿಗಳು ಮಾಧ್ಯಮ ವನ್ನು ಸಕಾರಾತ್ಮಕ ವಾಗಿ ಹೇಗೆ ಬಳಸಿಕೊಳ್ಳಬೇಕು ಹಾಗೂ ಮಧ್ಯಮ ಕ್ಷೇತ್ರದಲ್ಲಿ ಉದ್ಯೋಗ ಅವಕಾಶ ಗಳ ಬಗ್ಗೆ ಸವಿವರ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಅಜಕ್ಕಳ ಗಿರೀಶ ಭಟ್ ಅಧ್ಯಕ್ಷತೆ ವಹಿಸಿದ್ದರು. ಉಪಾನ್ಯಾಸಕಿ ಶಶಿಕಲಾ ಕೆ, ಕವಿತಾ,ಹೈದರಾಲಿ, ಅಪರ್ಣಾ, ಪುಟ್ಟೇಗೌಡ ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೀರ್ತಿರಾಜ್ ಕರಂದಾಡಿ ಪ್ರಾಸ್ತಾವಿಕ ಮಾತನಾಡಿದರು. ಉಪಾನ್ಯಾಸಕ ನಂದಕಿಶೋರ್ ಸ್ವಾಗತಿಸಿ ರಂಜಿನಿ ವಂದಿಸಿದರು. ನಿರೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.