ಕಲ್ಲಡ್ಕ

ಅಮಲು ಪದಾರ್ಥಗಳಿಂದ ದೂರವಿರಿ: ತೋಕೆ ಉಸ್ತಾದ್

ಅಮಲು ಪದಾರ್ಥಗಳಿಂದ ದೂರವಿರಿ ಅವು ಎಲ್ಲಾ ಕೆಟ್ಟ ಕಾರ್ಯಗಳನ್ನು ಮಾಡಿಸುತ್ತದೆ, ಯುವಜನತೆಯು ದುಷ್ಟ ಕೂಟಗಳಿಂದ ದೂರವಿದ್ದು ಪ್ರಜ್ಞಾವಂತರಾಗಬೇಕು,ಹಾಗೂ ಸುಲ್ತಾನುಲ್ ಉಲಮಾರನ್ನು ವಿಮರ್ಶಿಸುವವರು ಅವರು ಮಾಡಿದ ಶೈಕ್ಷಣಿಕ ಕ್ರಾಂತಿಯನ್ನು ನೋಡಲು ಮರ್ಕಝ್ ಗೆ ಒಮ್ಮೆ ಭೇಟಿ ನೀಡಬೇಕು ಎಂದು ಅರಿವಿನ ಹೆಬ್ಬಾಗಿಲು ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ನಚ್ಚಬೊಟ್ಟು ಪ್ರೊಫೆಸರ್ ಟಿ ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಹೇಳಿದರು.
ಎಸ್ಸೆಸ್ಸೆಫ್ ಹಾಗೂ ಎಸ್ ವೈ ಎಸ್ ಪೆರ್ನೆ ಶಾಖೆ ವತಿಯಿಂದ ಪೆರ್ನೆ ಸುನ್ನೀ ಸೆಂಟರ್ ವಠಾರದಲ್ಲಿ ನಡೆದ ಮರ್ಕಝ್ ರೂಬಿ ಜುಬಿಲಿ ಪ್ರಚಾರ ಸಮ್ಮೇಳನ ಹಾಗೂ ಮರ್ಹೂಂ ಶರಫುದ್ದೀನ್ ಬಾನೊಟ್ಟು ಅನುಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಪ್ರಭಾಷಣಗೈದರು.
ಎಸ್ ವೈ ಎಸ್ ಪೆರ್ನೆ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಹನೀಫ್ ಮುಸ್ಲಿಯಾರ್ ಸ್ವಾಗತ ಭಾಷಣ ಮಾಡಿದರು, ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಉಪಾಧ್ಯಕ್ಷರಾದ ಹಾರಿಸ್ ಮದನಿ ಪಾಟ್ರಕೋಡಿ ಉದ್ಘಾಟನೆಗೈದರು. ಕರ್ವೇಲು ತಾಜುಲ್ ಉಲಮಾ ಫೌಂಡೇಶನ್ ನ ಅಸ್ಸಯ್ಯಿದ್ ಸಾದಾತ್ ತಂಙಳ್ ದುಆ ಆಶೀರ್ವಚನ ನೀಡಿದರು.
ಮಹ್ ಶೂಕೆ ಮದೀನಾ ಬುರ್ದಾ ತಂಡ ಶಾಂತಿನಗರ ಕಂಬಳಬೆಟ್ಟು ತಂಡದಿಂದ ಆಕರ್ಷಕ ಬುರ್ದಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಬದ್ರಿಯಾ ಜುಮಾ ಮಸೀದಿ ದೋರ್ಮೆ ಅಧ್ಯಕ್ಷ ಅಬ್ದುಲ್ಲ ಶಾಫಿ,ಶೇರ ಖಿಳ್ರಿಯಾ ಜುಮಾ ಮಸೀದಿ ಸ್ಥಾಪಕರಾದ ಇಬ್ರಾಹಿಂ ಹಾಜಿ ಶೇರಾ, ಝಕರಿಯಾ ಮುಸ್ಲಿಯಾರ್ ಜಾರಿಗೆಬೈಲ್, ಬದ್ರಿಯಾ ಜುಮಾ ಮಸೀದಿ ದೋರ್ಮೆ ಮಾಜಿ ಅಧ್ಯಕ್ಷ ಅಬ್ಬಾಸ್ ಹಾಜಿ, ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಅದ್ಯಕ್ಷ ಫಾರೂಖ್ ಹನೀಫಿ ಪರ್ಲೊಟ್ಟು, ಪ್ರಧಾನ ಕಾರ್ಯದರ್ಶಿ ಸಲೀಂ ಮಾಣಿ, ಪೆರ್ನೆ ಎಸ್ ವೈ ಎಸ್ ನಾಯಕ ಅಬ್ದುಲ್ ರಶೀದ್ ಮೊದಲಾದವರು ಭಾಗವಹಿಸಿದ್ದರು, ಮುಸ್ತಫಾ ಶೇರಾ ಹಾಗೂ ನಿಝಾರ್ ಪೆರ್ನೆ ಕಾರ್ಯಕ್ರಮ ನಿರೂಪಿಸಿದರು,ಸಿದ್ದೀಕ್ ಪೆರ್ನೆ ಧನ್ಯವಾದಗೈದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ