ಕಲ್ಲಡ್ಕ

ಇರಿತ ಘಟನೆ ಬಳಿಕ ಕಲ್ಲಡ್ಕ ಸಂಪೂರ್ಣ ಪೊಲೀಸ್ ನಿಯಂತ್ರಣದಲ್ಲಿ

www.bantwalnews.com

ಮಂಗಳವಾರ ಸಂಜೆ 6.30ಕ್ಕೆ ದುಷ್ಕರ್ಮಿಗಳಿಬ್ಬರು ಅಂಗಡಿ ಎದುರು ನಿಂತಿದ್ದ ಕೇಶವ (26) ಎಂಬಾತನಿಗೆ ಮಾರಕಾಸ್ತ್ರಗಳಿಂದ ಇರಿದಿದ್ದಾರೆ. ತಲೆಯ ಕೆಳಭಾಗಕ್ಕೆ ಆದ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದು, ಸದ್ಯ ಕೇಶವ್ ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಪಿಗಳ ಪತ್ತೆಗೆ ಬಲೆಬೀಸಲಾಗಿದೆ ಎಂದು ಅವರು ಹೇಳಿದ್ದಾರೆ. ಘಟನೆಯ ಬೆನ್ನಿಗೇ ಕಲ್ಲಡ್ಕ ಮೇಗಿನಪೇಟೆ ಸುತ್ತಮುತ್ತ ಅಂಗಡಿ, ಮುಂಗಟ್ಟುಗಳು ಬಂದ್ ಆದವು. ಹೆಚ್ಚನ ಪೊಲೀಸರನ್ನು ಅಲ್ಲಿಗೆ ನಿಯೋಜಿಸಲಾಯಿತು. ಸದ್ಯ ಕಲ್ಲಡ್ಕ ಸಂಪೂರ್ಣ ಪೊಲೀಸರ ನಿಯಂತ್ರಣದಲ್ಲಿದ್ದು, ಸುತ್ತಮುತ್ತಲಿನ ಪ್ರದೇಶಗಳು, ಆಯಕಟ್ಟಿನ ಜಾಗಗಳಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಜಾಹೀರಾತು

ಸುಮಾರು ಐದು ತಿಂಗಳ ಬಳಿಕ ಕಲ್ಲಡ್ಕದಲ್ಲಿ ನಡೆಯುತ್ತಿರುವ ಅಹಿತಕರ ಘಟನೆ ಇದು.

ಕಲ್ಲಡ್ಕ ಘಟನೆಯಲ್ಲಿ ಗಾಜಿನ ಹುಡಿಗಳು ರಸ್ತೆಯಲ್ಲಿ ಬಿದ್ದದ್ದನ್ನು ಎಎಸ್ಪಿ ಡಾ.ಅರುಣ್, ಟ್ರಾಫಿಕ್ ಎಸ್ ಐ ಎಲ್ಲಪ್ಪ ಮತ್ತು ಪೊಲೀಸ್ ಸಿಬ್ಬಂದಿಗಳು ಹೆಕ್ಕಿ ರಸ್ತೆಯಲ್ಲಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ನಿಷೇಧಾಜ್ಞೆಯ ಕಹಿನೆನಪು ಮರುಕಳಿಸದಿರಲಿ. ಸುಮಾರು ಮೂರು ತಿಂಗಳು ಏನಾಗಿದೆ? ನಿಮಗೆ ಗೊತ್ತೇ ಇದೆ. ಹಲ್ಲೆ, ಕಲ್ಲೆಸೆತ, ಕೊಲೆ, ದೂರು, ಆರೋಪ, ಪ್ರತ್ಯಾರೋಪ, ದ್ವೇಷ, ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಅಪನಂಬಿಕೆ ಸೃಷ್ಟಿಸುವ ಬೇನಾಮಿ ವಿಚಾರಗಳ ಪ್ರಸಾರ, ಕಂಡುಬಂದವು. ಪರಿಣಾಮ ಗೊತ್ತೇ ಇದೆ. ಇಡೀ ಬಂಟ್ವಾಳ ತಾಲೂಕಿನ ವಾಣಿಜ್ಯ ವ್ಯವಹಾರ ಕಳಾಹೀನವಾಯಿತು. ಜನಸಾಮಾನ್ಯರು ನೋವು ಅನುಭವಿಸಿದರು. ಸಂತೋಷ ಅನುಭವಿಸುವವರು ಗಲಭೆ ಸೃಷ್ಟಿಕರ್ತರು ಮತ್ತು ಸಾಮಾಜಿಕ ಜಾಲತಾಣ ದುರ್ಬಳಕೆ ಮಾಡುವವರಷ್ಟೇ ಎಂಬುದು ಜನರಿಗೂ ನಿಧಾನವಾಗಿ ಅರ್ಥವಾಗತೊಡಗಿತು.

ಜಾಹೀರಾತು

ರಸ್ತೆ ಸರಿ ಇಲ್ಲದಿದ್ದರೆ, ಕುಡಿಯುವ ನೀರಿಗೆ ತೊಂದರೆ ಆದರೆ, ಯಾರಿಗಾದರೂ ರಕ್ತ ಬೇಕಾದರೆ, ಯಾರಾದರೂ ಸಮಸ್ಯೆಯಿಂದ ಬಳಲುತ್ತಿದ್ದರೆ ನಮ್ಮ ಸಂದೇಶ ಹರಡಲಿ, ಅವರ ಕಷ್ಟಗಳಿಗೆ ಸ್ಪಂದಿಸುವ ಬೆಳಕಾಗೋಣ, ಪ್ರಚೋದನಕಾರಿ ಸಂದೇಶಗಳ ರವಾನೆಗಳಿಗಿಂತ ಅದು ಒಳ್ಳೆಯದು. ಈ ಘಟನೆಯೂ ಅಷ್ಟೇ. ಸದ್ಯಕ್ಕಂತೂ ಕಲ್ಲಡ್ಕದಲ್ಲಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಮುಂದೇನೂ ಅಹಿತಕರ ಘಟನೆ ಆಗದಿರಲಿ ಎಂಬುದು ನಮ್ಮ ಹಾರೈಕೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ