ಪಾಕಶಾಲೆಯೇ ವೈದ್ಯಶಾಲೆ

ಪುಟ್ಟ ಪಚ್ಚೆ ಬಟಾಣಿಯ ದೊಡ್ಡ ಕಾರ್ಯ

  • ಡಾ.ಎ.ಜಿ.ರವಿಶಂಕರ್

www.bantwalnews.com

ಜಾಹೀರಾತು

ಪಚ್ಚೆ ಬಟಾಣಿ ಕೇವಲ ಪುಲಾವು,ಘೀರೈಸ್ ಅಥವಾ ಪದಾರ್ಥಗಳಲ್ಲಿ ಉಪಯೋಗಿಸುವುದು ಮಾತ್ರ ಗೊತ್ತು. ಆದರೆ ಇದು ಎಷ್ಟು ಸತ್ವಭಾರಿತವಾಗಿದೆ ಮತ್ತು ಎಲ್ಲೆಲ್ಲಿ ಉಪಯೋಗಕ್ಕೆ ಬರುತ್ತದೆ ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಇದರಲ್ಲಿ  ವಿಟಮಿನ್  ಬಿ.ಸಿ,ಕೆ,ಯಥೇಷ್ಟವಾಗಿದ್ದು ಜೊತೆಯಲ್ಲಿ ಕಬ್ಬಿಣಾಂಶ, ತಾಮ್ರ ,ಜಿಂಕ್ ,ಮ್ಯಾಂಗನೀಸ್ , ಫಾಸ್ಫರಸ್ ಹಾಗು ನಾರಿನ ಅಂಶಗಳೂ ಕೂಡಾ ಧಾರಾಳವಾಗಿ ಅಡಕವಾಗಿವೆ.

  1. ಬಟಾಣಿಯು ಜೀರ್ಣಶಕ್ತಿಯನ್ನು ಸರಿಯಾಗಿಸುತ್ತದೆ ಮತ್ತು ನಾರಿನ ಅಂಶ ಇರುವ ಕಾರಣ ಮಲಬದ್ಧತೆಯನ್ನು ನಿವಾರಿಸುತ್ತದೆ.
  2. ಮೂಳೆಗಳನ್ನು ದೃಢಗೊಳಿಸುವುದರ ಮೂಲಕ ಮೂಳೆಗಳು ಸುರಿ ಬೀಳುವುದನ್ನು ತಡೆಕಟ್ಟುತ್ತದೆ.
  3. ಗರ್ಭಿಣಿಯರಿಗೆ ಉತ್ತಮ ಆಹಾರವಾಗಿದ್ದು ಮಗುವಿನ ಹಾಗು ತಾಯಿಯ ಆರೋಗ್ಯವನ್ನು ಕಾಪಾಡುತ್ತದೆ. ಗರ್ಭಿಣಿಯರಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತದೆ, ಮಲಬದ್ಧತೆಯನ್ನ್ನು ಹೋಗಲಾಡಿಸುತ್ತದೆ ಹಾಗು ಮಗುವಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
  4. ಮಧುಮೇಹವನ್ನು ಹತೋಟಿಯಲ್ಲಿಡಲು ಸಹಕರಿಸುತ್ತದೆ.
  5. ಅತಿಯಾದ ಶೀತದ ಸ್ಪರ್ಶದಿಂದ ಕೈ ಕಾಲು ಊತ ಹಾಗು ನೋವು ಇದ್ದಾಗ ಬಟಾಣಿಯನ್ನು ಬೇಯಿಸಿ ಶೇಕ ಕೊಡಬೇಕು
  6. ಸುಟ್ಟ ಗಾಯದ ಮೇಲೆ ಹಸಿಬಟ ಣಿಯನ್ನು ಅರೆದು ಲೇಪ ಹಾಕಿದರೆ ಉರಿ ಕಡಿಮೆಯಾಗುತ್ತದೆ.
  7. ಶರೀರದಿಂದ ಕೆಟ್ಟ ಕೊಬ್ಬಿನ ಅಂಶವನ್ನು ಹೋಗಲಾಡಿಸುತ್ತದೆ.
  8. ಹೃದಯಕ್ಕೆ ಬಲದಾಯಕವಾಗಿದ್ದು ಹೃದಯಾಘಾತದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ ಮತ್ತು ರಕ್ತದ ಒತ್ತಡವನ್ನು ಹತೋಟಿಯಲ್ಲಿಡಲು ಸಹಕರಿಸುತ್ತದೆ.
  9. ಪ್ರತಿನಿತ್ಯ ಪಚ್ಚೆ ಬಟಾಣಿ ಸೇವನೆಯಿಂದ ಕಣ್ಣಿನ ದೃಷ್ಟಿ ಸಾಮರ್ಥ್ಯ ಅಧಿಕವಾಗುತ್ತದೆ.
  10. ಇದರಲ್ಲಿರುವ ಸತ್ವಗಳ ಪ್ರಭಾವದಿಂದಾಗಿ ತಲೆಕೂದಲು ಉದುರುವುದು ಕಡಿಮೆಯಾಗುತ್ತದೆ.
  11. ಅಕಾಲದಲ್ಲಿ ಚರ್ಮ ಸುಕ್ಕು ಕಟ್ಟುವುದನ್ನು ಮತ್ತು ವಯಸ್ಕರಂತೆ ಕಾಣುವುದನ್ನು ಬಟಾಣಿ ಹೋಗಲಾಡಿಸುತ್ತದೆ.
  12. ನಿಯಮಿತವಾಗಿ ಬಟಾಣಿಯನ್ನು ಸೇವಿಸುವುದರಿಂದ ವಯಸ್ಕರಲ್ಲಿ ಮರೆಗುಳಿ ರೋಗವು ಹತೋಟಿಗೆ ಬರುತ್ತದೆ.
  13. ಬಟಾಣಿಯು ಸಂಧುಗಳ ಊತ ಹಾಗು ನೋವನ್ನು ಕಡಿಮೆಗೊಳಿಸುತ್ತದೆ. (ಆಭ್ಯಂತರ ಸೇವನೆ ಹಾಗು ಬಾಹ್ಯ ಶೇಕ )
  14. ಬಟಾಣಿ ಹೊಟ್ಟೆಯ ಕ್ಯಾನ್ಸರ್ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.
  15. ಬಟಾಣಿ ಅತ್ಯಂತ ಸತ್ವಭರಿತವಾದ ಕಾರಣ ಶರೀರದ ವ್ಯಾಧಿಕ್ಷಮತ್ವ ಸಾಮರ್ಥ್ಯವನ್ನು ಅಧಿಕ ಗೊಳಿಸುತ್ತದೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.