ವಿಟ್ಲ

ನಮ್ಮ ವಿಟ್ಲಕ್ಕೆ ಎಂಟು ವರ್ಷಗಳಾಯ್ತು

www.bantwalnews.com ವರದಿ

ಎಂಟು ವರ್ಷಗಳ ಹಿಂದೆ ವಿಟ್ಲದ ಜನತೆಗೆ ಸುತ್ತಮುತ್ತಲ ಸುದ್ದಿಗಳನ್ನು ಕ್ಷಿಪ್ರಗತಿಯಲ್ಲಿ ತಲುಪಿಸುವ ಉದ್ದೇಶದಿಂದ ಇಲ್ಲಿನ ಇಬ್ಬರು ಉತ್ಸಾಹಿ ಯುವಕರಾದ ಇಸ್ಮಾಯಿಲ್ ಸೆರಂತಿಮಠ ಹಾಗೂ ಅಬೂಬಕ್ಕರ್ ಜೋಗಿಮಠ ಕೂಡಿಕೊಂಡು ಯಾವುದೇ ಫಲಾಪೇಕ್ಷೆಯಿಲ್ಲದೆ ಅಭಿವೃದ್ದಿಪಡಿಸಿದ ಅಂತರ್ಜಾಲ ತಾಣವೇನಮ್ಮ ವಿಟ್ಲ“.

ನವೆಂಬರ್ 30, 2009 ರಂದು ಆರಂಭವಾದ ವೆಬ್ ಸೈಟ್ ಗೆ ದೇಶ ವಿದೇಶಗಳ ವಿಟ್ಲ ನಾಗರಿಕರು ಸದಸ್ಯರಾಗಿದ್ದಾರೆ. ಅತ್ಯಂತ ನಿಕೃಷ್ಠ ಮಾಹಿತಿಯಿಂದ ಹಿಡಿದು ಅತೀ ಪ್ರಮುಖ ಕಾರ್ಯಕ್ರಮಗಳ ಬಗ್ಗೆ ನಿರಂತರವಾಗಿ ವರದಿ ಮಾಡುವ ಮೂಲಕನಮ್ಮ ವಿಟ್ಲಅಸಂಖ್ಯಾತ ಓದುಗರನ್ನು ಆಕರ್ಷಿಸಿದೆ. ಇಲ್ಲಿಯವರೆಗೆ ಸುಮಾರು 96000 ಬಾರಿ ವೆಬ್ ಸೈಟ್ನ್ನು ವೀಕ್ಷಿಸಲಾಗಿದ್ದು ಓದುಗರಿಂದ ಪ್ರಶಂಸೆಗೊಳಪಟ್ಟಿದೆ.

ಇದರಲ್ಲಿ ವೀಡಿಯೋ ನ್ಯೂಸ್ ಮೂಲಕವೂ ಸುದ್ದಿ ಬಿತ್ತರಗೊಳ್ಳುವುದರಿಂದ ವಿದೇಶದಲ್ಲಿ ಉದ್ಯೋಗದಲ್ಲಿರುವ ವಿಟ್ಲ ನಾಗರಿಕರಿಗೆ ಇಲ್ಲಿನ ಕಾರ್ಯಕ್ರಮಗಳನ್ನು ನೇರವಾಗಿ ವೀಕ್ಷಿಸಲು ಅನುಕೂಲವಾಗಿದೆ.

ಪ್ರಗತಿಯತ್ತ ಪಯಣಎಂಬ ಅಡಿಬರಹದೊಂದಿಗೆ ಸುದ್ದಿಗಳನ್ನು ಕ್ಲಪ್ತ ಸಮಯದಲ್ಲಿ ಓದುಗರಿಗೆ ತಲುಪಿಸುತ್ತಿರುವ ಅಂತರ್ಜಾಲ ತಾಣ ಮುಂದೆಯೂ ನಿರಂತರವಾಗಿ ಕಾರ್ಯನಿರ್ವಹಿಸಲಿ.

ಶುಭಾಶಯಗಳು  ನಿಮಗೆ

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts