www.bantwalnews.com
ಜಾಮಿಆ ಮರ್ಕಝುಸ್ಸಖಾಫತು ಸ್ಸುನ್ನಿಯ್ಯಾದˌ ವಿಶ್ವವಿಖ್ಯಾತ ಬುಖಾರೀ ದರ್ಸ್ ಬಳಿಕˌ ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರಿಗೆ ಗೌರವಾರ್ಪಣೆಯನ್ನು ಆಯೋಜಿಸಲಾಗಿತ್ತು. 2014 ರಲ್ಲಿ ಕರ್ನಾಟಕದಲ್ಲಿ ಮನುಕುಲದ ಸಂದೇಶದಡಿ ಎ.ಪಿ.ಉಸ್ತಾದರು ನಡೆಸಿದ ಯಾತ್ರೆ ಅವಸ್ಮರಣೀಯವಾಗಿತ್ತು. ಈ ಯಾತ್ರೆಯ ಸ್ಮರಣಾರ್ಥ “ಮರ್ಕಝ್ ಕನ್ನಡ ವಿದ್ಯಾರ್ಥಿಗಳ ಒಕ್ಕೂಟ”(ಕೆ.ಎಸ್.ಒ) ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿˌ ಖ್ಯಾತ ಲೇಖಕˌ ಮರ್ಕಝ್ ವಿದ್ಯಾರ್ಥಿಯಾದಂತಹ ದೇರಳಕಟ್ಟೆ ಬರುವ ನಿವಾಸಿ ಹಾರಿಸ್ ಬರುವ ಬರೆದ ಇಮಾಂ ಅಹ್ಮದ್ ರಝಾ ಖಾನ್ ರ ಸಂಕ್ಷಿಪ್ತ ಜೀವನ ಚರಿತ್ರೆಯ “ಬರ ನೀಗಿಸಿದ ಬರೇಲ್ವಿ ವಿದ್ವಾಂಸ” ಎಂಬ ಕೃತಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಕೆ.ಎಸ್.ಒ. ಡೈರಕ್ಟರ್ ವಿ.ಪಿ.ಎಂ ಫೈಝಿ ವಿಲ್ಯಾಪಳ್ಳಿ, ಎಸ್.ವೈ.ಎಸ್. ರಾಜ್ಯ ಸಮಿತಿ ಸದಸ್ಯ ಅಬ್ದುಲ್ ಹಮೀದ್ ಬೀಜಕೊಚ್ಟಿ, ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಹಾಫಿಝ್ ಸುಫ್ಯಾನ್ ಸಖಾಫಿ, ಸಿ.ಪಿ. ಸ್ವಾಲಿಹ್ ಸಖಾಫಿ, ಎಸ್ಸೆಸ್ಸೆಫ್ ಕೊಪ್ಪಳ ಜಿಲ್ಲಾ ಪ್ರ.ಕಾರ್ಯದರ್ಶಿ ನೂರುದ್ದೀನ್ ರಝ್ವಿ, ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ಗುಲಾಂ ಹುಸೇನ್ ನೂರಿ, ಎಸ್ಸೆಸ್ಸೆಫ್ ರಾಯಚೂರು ಜಿಲ್ಲಾಧ್ಯಕ್ಷ ಆಲಂ ಬರಕಾತಿ, ಗೌರವಾಧ್ಯಕ್ಷ ವಲೀ ಭಾಷಾ, ಸಯ್ಯದ್ ಮುಝಮ್ಮಿಲ್ ತಿರೂರ್ಕಾಡ್, ಕೆ.ಎಸ್.ಒ ಅಧ್ಯಕ್ಷ ಹಾಫಿಝ್ ಸಿರಾಜುದ್ದೀನ್ ಕರಾಯ, ಪ್ರ.ಕಾರ್ಯದರ್ಶಿ ಹಸನ್ ತೀರ್ಥಹಳ್ಳಿ, ಕೋಶಾಧಿಕಾರಿ ಇಕ್ಬಾಲ್ ಗೇರುಕಟ್ಟೆ ಮತ್ತಿತರರು ಪಸ್ಥಿತರಿದ್ದರು.