ಬಂಟ್ವಾಳ

ಬಂಟ್ವಾಳದಲ್ಲಿ ಗೆಲುವು, ರಾಜ್ಯದಲ್ಲಿ ಅಧಿಕಾರ

  • ಬಿ.ಸಿ.ರೋಡಿನ ನವಕರ್ನಾಟಕ ಪರಿವರ್ತನಾ ಯಾತ್ರೆಯಲ್ಲಿ ನಾಯಕರ ಮನವಿ

ಬಂಟ್ವಾಳನ್ಯೂಸ್ ವರದಿ with VIDEO

Picturs: Kishore Peraje

ಜಾಹೀರಾತು

ಬಂಟ್ವಾಳದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕು, ಈ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಶಕ್ತಿ ನೀಡಬೇಕು.

ಶನಿವಾರ ಮಧ್ಯಾಹ್ನ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಸಮೀಪ ಇರುವ ಮೈದಾನದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಬಿಜೆಪಿಯ ನವಕರ್ನಾಟಕ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ನಾಯಕರು, ವಿಧಾನಸಭೆಯ ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸುವ ಮೂಲಕ ಪರಿವರ್ತನೆ ತರಬೇಕು ಎಂದು ಮನವಿ ಮಾಡಿದರು.

ಜಾಹೀರಾತು

ಬಿಜೆಪಿಯ ಬಂಟ್ವಾಳ ಮುಖಂಡ ಹಾಗೂ ಕಳೆದ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ಉಳಿಪ್ಪಾಡಿ ರಾಜೇಶ್ ನಾಯಕ್ ಅವರ ಹೆಸರನ್ನು ಸಮಾರಂಭದಲ್ಲಿದ್ದ ಅತಿಥಿಗಳು ಪ್ರಸ್ತಾವಿಸಿದಾಗಲೆಲ್ಲ ಸೇರಿದ್ದ ಕಾರ್ಯಕರ್ತರು ದೊಡ್ಡ ಸ್ವರದಲ್ಲಿ ಜೈಕಾರ ಹಾಕಿದರು.

ಜಾಹೀರಾತು

ಹೈಲೈಟ್ಸ್:

ಬೆಂಗಳೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಮುಖ್ಯಮಂತ್ರಿಯಾದ ಬಳಿಕ ಕೈಗೊಳ್ಳುವ ಯೋಜನೆಗಳನ್ನು ತಿಳಿಸುತ್ತೇನೆ ಎಂದ ಬಿಎಸ್‌ವೈ, ಬಂಟ್ವಾಳದಲ್ಲಿ ಬಿಜೆಪಿಯನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿಸಿ ಕರ್ನಾಟಕವನ್ನು ಕಾಂಗ್ರೆಸ್‌ಮುಕ್ತಗೊಳಿಸಲು ಕೊಡುಗೆ ನೀಡಬೇಕು ಎಂದು ಮನವಿ ಮಾಡಿದರು.

ಸಿಎಂ ವಿರುದ್ಧ ನೇರ ವಾಗ್ದಾಳಿ ನಡೆಸಿದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪಮೌಢ್ಯ ನಿಷೇಧ ಕಾಯ್ದೆ ಜಾರಿ ನೆಪದಲ್ಲಿ ಹಿಂದುಗಳ ಸಾಂಪ್ರದಾಯಿಕ ಆಚರಣೆಗಳನ್ನು ನಿಲ್ಲಿಸುವ ಯತ್ನ ನಡೆಯುತ್ತಿದೆ, ಎಲ್ಲ ಧರ್ಮಗಳ ಆಚರಣೆ ನಿಲ್ಲಿಸಲು ಸಿದ್ದರಾಮಯ್ಯ ಸಿದ್ದರಿದ್ದಾರಾ ಎಂದು ಪ್ರಶ್ನಿಸಿದರು.ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲಾಗುವುದು ಎಂದರು.

ಜಾಹೀರಾತು

ರಮಾನಾಥ ರೈಯವರು ಬಂಟ್ವಾಳ ಕ್ಷೇತ್ರಕ್ಕೇನು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ ಸಂಸದೆ ಶೋಭಾ ಕರಂದ್ಲಾಜೆ, ದ.ಕ. ಜಿಲ್ಲೆಗೆ ಎಷ್ಟು ಕೋಟಿ ಅನುದಾನವನ್ನು ರೈ ತಂದಿದ್ದಾರೆ ಎಂಬ ಚರ್ಚೆ ನಡೆಯಬೇಕು. ಕಲ್ಲಡ್ಕ ಘಟನೆ ಆರಂಭದಲ್ಲೇ ಕಠಿಣ ಕ್ರಮ ಕೈಗೊಂಡಿದ್ದರೆ, ಶರತ್ ಹತ್ಯೆಯೇ ನಡೆಯುತ್ತಿರಲಿಲ್ಲ ಎಂದರು.

ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ಡಿ.ವಿ.ಸದಾನಂದ ಗೌಡ, ಮಾಜಿ ಸಚಿವ ಕುಮಾರ್ ಬಂಗಾರಪ್ಪ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು, ಕೇಂದ್ರ ಸಾಧನೆಯನ್ನು, ಹಿಂದಿನ ಬಿಜೆಪಿ ಸರಕಾರದ ಸಾಧನೆಯನ್ನು ಜನರಿಗೆ ತಿಳಿಸಬೇಕು ಎಂದು ಕರೆಯಿತ್ತರು.

ಜಾಹೀರಾತು

ಬಿಜೆಪಿ ಮುಖಂಡ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಪ್ರಾಸ್ತಾವಿಕ ಮಾತನಾಡಿದರು. ಬಿಜೆಪಿ ಕ್ಷೇತ್ರ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಸ್ವಾಗತಿಸಿದರು. ಮೋನಪ್ಪ ದೇವಸ್ಯ ವಂದಿಸಿದರು. ರಾಮದಾಸ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.

ಇದೇ ವೇಳೆ ಪಕ್ಷಕ್ಕೆ ನಾರಾಯಣ ಪೂಜಾರಿ ಬೊಳ್ಳುಕಲ್ಲು, ಪ್ರದೀಪ್, ಶ್ರೀಕಾಂತ ಶೆಟ್ಟಿ, ನಳಿನಿ ರೈ, ಜಯರಾಜ್ ಕಾಂಚನ್ ಸಹಿತ ಹಲವರು ಬಿಜೆಪಿ ಸೇರಿದರು.

ಹಾಜರಿದ್ದವರು:

ಜಾಹೀರಾತು

ಮಾಜಿ ಸಚಿವ ಶ್ರೀರಾಮುಲು, ಪಕ್ಷ ಪ್ರಮುಖರಾದ ಆಯನೂರು ಮಂಜುನಾಥ, ರವಿಕುಮಾರ್, ಮಾಳವಿಕಾ, ನಾಗರಾಜ ಶೆಟ್ಟಿ, ಗಣೇಶ್ ಕಾರ್ಣಿಕ್, ಮೀನಾಕ್ಷಿ ಶಾಂತಿಗೋಡು, ಸಂಜೀವ ಮಠಂದೂರು, ಭಾರತಿ ಶೆಟ್ಟಿ, ತೇಜಸ್ವಿನಿ ಗೌಡ, ಸುಲೋಚನಾ ಜಿ.ಕೆ.ಭಟ್, ಉದಯ ಕುಮಾರ್ ಶೆಟ್ಟಿ, ಮೋನಪ್ಪ ಭಂಡಾರಿ, ಪದ್ಮನಾಭ ಕೊಟ್ಟಾರಿ, ರುಕ್ಮಯ ಪೂಜಾರಿ, ಉಮಾನಾಥ ಕೋಟ್ಯಾನ್, ಬ್ರಿಜೇಶ್ ಚೌಟ, ಕಿಶೋರ್ ರೈ, ಸುದರ್ಶನ್, ಸತ್ಯಜಿತ್ ಸುರತ್ಕಲ್, ರವಿಚಂದ್ರ, ಸತೀಶ ಕುಂಪಲ, ಕಮಲಾಕ್ಷಿ ಪೂಜಾರಿ, ತುಂಗಪ್ಪ ಬಂಗೇರ, ರವೀಂದ್ರ ಕಂಬಳಿ ಹಾಜರಿದ್ದರು. ಚಲನಚಿತ್ರ ನಟ ಬುಲೆಟ್ ಪ್ರಕಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

FOR VIDEO REPORT PLS CLICK:

ಜಾಹೀರಾತು

 

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ