ಪೊಲೀಸ್ ಇಲಾಖೆ ಸಾರ್ವಜನಿಕ ಟಿಪ್ಪು ಜಯಂತಿ ಆಚರಣೆ ನಿಷೇಧಿಸಿದರೂ ವಿಟ್ಲ ಸಮೀಪದ ಒಕ್ಕೆತ್ತೂರು ಎಂಬಲ್ಲಿ ಜಯಂತಿ ಆಚರಣೆಗೆ ಮುಂದಾದ ಹಿನ್ನಲೆಯಲ್ಲಿ ವಿಟ್ಲ ಪೊಲೀಸರು ಮೂವರನ್ನು ವಶಕ್ಕೆ ಪಡೆದು ಬಿಡುಗಡೆ ಗೊಳಿಸಿದರು.
ವಿಟ್ಲ ಸಮೀಪದ ಒಕ್ಕೆತ್ತೂರು ಎಂಬಲ್ಲಿ ಸ್ಥಳೀಯ ಯುವಕರು ಟಿಪ್ಪು ಜಯಂತಿ ಮಾಡಲು ಮುಂದಾಗಿದ್ದರು. ನಿಷೇಧ ಇದ್ದ ಕಾರಣ, ಪೊಲೀಸರು ಯುವಕನನ್ನು ವಶಕ್ಕೆ ಪಡೆದುಕೊಂಡಾಗ ಜನ ಜಮಾಯಿಸಿದರು. ಬಳಿಕ ಪೊಲೀಸರು ಗುಂಪನ್ನು ಚದುರಿಸಿ ಮತ್ತಿಬ್ಬರನ್ನು ವಶಕ್ಕೆ ಪಡೆದುಕೊಂಡರು.
ವಿಟ್ಲ ಭಾಗದಲ್ಲಿ ವಿಟ್ಲ ಪೊಲೀಸರು ಹಾಗೂ ಹೆಚ್ಚುವರಿಯಾಗಿ ಪೊಲೀಸ್ ಕರೆಸಿಕೊಂಡು ಬಿಗಿ ಬಂದೋ ಬಸ್ತ್ ಏರ್ಪಡಿಸಲಾಗಿತ್ತು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…