ಮಂಗಳೂರಿನಲ್ಲಿ ಬಿಜೆಪಿಯ ಕೋರ್ ಕಮಿಟಿ ಸಭೆ ಮುಗಿಸಿ ಪುತ್ತೂರಿಗೆ ತೆರಳುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್.ಯಡಿಯೂರಪ್ಪ ಅವರನ್ನು ಬಿ.ಸಿ.ರೋಡಿನ ನಾರಾಯಣಗುರು ವೃತ್ತದ ಬಳಿ ಪಕ್ಷದ ಕಾರ್ಯಕರ್ತರು ಗುರುವಾರ ರಾತ್ರಿ ಸ್ವಾಗತಿಸಿದರು.
ಬಂಟ್ವಾಳ ಕ್ಷೇತ್ರ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ ಅವರ ನೇತೃತ್ವದಲ್ಲಿ ಪಕ್ಷದ ನೂರಾರು ಮಂದಿ ಕಾರ್ಯಕರ್ತರು ಯಡಿಯೂರಪ್ಪ ಅವರಿಗೆ ಹಾರ ಹಾಕಿ ಸ್ವಾಗತಿಸಿ, ಬೀಳ್ಕೊಟ್ಟರು.
ಬಿಎಸ್ ವೈ ರಾತ್ರಿ ಪುತ್ತೂರಿನಲ್ಲಿ ತಂಗಲಿದ್ದಾರೆ. ನ.2 ರಂದು ಹೊರಟಿರುವ ನವಕರ್ನಾಟಕದ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ ಈಗಾಗಲೇ ಪುತ್ತೂರು ಪ್ರವೇಶಿಸಿದ್ದು, ಶನಿವಾರ ನ.11 ರಂದು ಪುಂಜಾಲಕಟ್ಟೆಯ ಮೂಲಕ ಬಂಟ್ವಾಳ ವಿಧಾನಸಭಾ ಕ್ಷೇತ್ರವನ್ನು ಪ್ರವೇಶಿಸಲಿದೆ.
ಈ ಹಿನ್ನಲೆಯಲ್ಲಿ ಭರದ ಸಿದ್ದತೆಯನ್ನು ಬಿಜೆಪಿ ನಡೆಯುತ್ತಿದೆ.ಯಡಿಯೂರಪ್ಪ ಅವರು ಈ ಹಿಂದೆಯು ಹಲವು ಬಾರಿ ಬಂಟ್ವಾಳಕ್ಕೆ ಅಗಮಿಸಿದ್ದು,ಇದೀಗ ಮತ್ತೆ ಪರಿವರ್ತನಾ ರಾಲಿಯ ಮೂಲಕ ಬಂಟ್ವಾಳಕ್ಕಾಗಮಿಸುತ್ತಿರುವುದು ಕಾರ್ಯಕರ್ತರಲ್ಲಿ ಉತ್ಸಾಹ, ಹುರುಪು ಮೂಡಿಸಿದೆ. ಈ ಸಂದರ್ಭ ಪಕ್ಷದ ಪ್ರಮುಖರಾದ ರಾಮದಾಸ ಬಂಟ್ವಾಳ, ದಿನೇಶ್ ಭಂಡಾರಿ, ಜಿ.ಆನಂದ, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ರಮಾನಾಥ ರಾಯಿ, ವಜ್ರನಾಥ ಕಲ್ಲಡ್ಕ ಮತ್ತಿತರರು ಉಪಸ್ಥಿತರಿದ್ದರು.