ಬಂಟ್ವಾಳ ತಾಲೂಕಿನ ಪ್ರಸಿದ್ಧ ಕಾರಣಿಕ ಕ್ಷೇತ್ರವಾದ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ವರ್ಷಾವಧಿ ಕೋಲ ಮಹೋತ್ಸವ ನವೆಂಬರ್ 22 ಮತ್ತು 23ರಂದು ನಡೆಯಲಿದೆ.
22ರಂದು ಸಂಜೆ 5.59ಕ್ಕೆ ಕೊಪ್ಪರಿಗೆ ಮುಹೂರ್ತ, 6ರಿಂದ ಪಣೋಲಿಬೈಲು ಶ್ರೀ ಕೃಷ್ನಾ ಭಜನಾ ಮಂದಿರದಿಂದ ಕುಣಿತ ಭಜನೆ, 6.30ರಿಂದ 8ರವರೆಗೆ ಸೌಮ್ಯ ಸುಧೀಂದ್ರ ರಾವ್ ಅವರಿಂದ ಭರತನಾಟ್ಯ ಮತ್ತು ನೃತ್ಯ ವೈಭವ ನಡೆಯಲಿದೆ. ರಾತ್ರಿ 8 ಗಂಟೆಯಿಂದ 9ವರೆಗೆ ಅಮ್ಮ ಡ್ಯಾನ್ಸ್ ಗ್ರೂಪ್ ಮಾರ್ನಬೈಲ್ ಅವರಿಂದ ನೃತ್ಯ, 9ರಿಂದ 12ವರೆಗೆ ಲಕುಮಿ ತಂಡದ ಕುಸಲ್ದ ಕಲಾವಿದರಿಂದ ಸಾಮಾಜಿಕ ನಾಟಕ ಒವೂಲ ಒಂತೆ ದಿನಾನೇ ಪ್ರದರ್ಶನಗೊಳ್ಳುವುದು.
23ರಂದು ಬೆಳಗ್ಗೆ 9ರಿಂದ ನವಕ, ಕಲಶ ಪ್ರಧಾನ ಮತ್ತು 12 ತೆಂಗಿನ ಕಾಯಿಯ ಗಣಹೋಮ, 11ರಿಂದ ನಾಗತಂಬಿಲ, ಮಧ್ಯಾಹ್ನ 1ರಿಂದ ಸಾರ್ವಜನಿಕ ಅನ್ನಸಂತರ್ಪಣೆ, 2.30ರಿಂದ : ಶ್ರೀ ಅಯ್ಯಪ್ಪ ಬಯಲಾಟ ಸೇವಾ ಸಮಿತಿ ಪಣೋಲಿಬೈಲು ಇವರಿಂದ ಭಜನೆ, 3.30ರಿಂದ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬ ಭಜನಾ ಮಂಡಳಿ ಇವರಿಂದ ಭಜನೆ, 4.30ರಿಂದಗೌರಿ ಗಣೇಶ ಭಜನಾ ಮಂಡಳಿ, ತೊಕ್ಕೊಟ್ಟು, 5.30 ರಿಂದ ಶ್ರೀ ಕೃಷ್ಣ ಭಜನಾ ಮಂದಿರ ಕುಡುಮೂನ್ನೂರು 6 ರಿಂದ ಕೃಷ್ಣ ಭಜನಾ ಮಂದಿರದಲ್ಲಿ ಭಜನೆ ನಡೆಯಲಿದೆ. ರಾತ್ರಿ 7ರಿಂದ ಪಣೋಲಿಬೈಲ್ ಶ್ರಿಕೃಷ್ಣ ಭಜನಾ ಮಂದಿರದಿಂದ ಶ್ರೀ ಕ್ಷೇತ್ರಕ್ಕೆ ಮೆರವಣಿಗೆ ತೆರಳುವುದು. ಬಳಿಕ ಯಕ್ಷಗಾನ ಬಯಲಾಟದಲ್ಲಿ ಪ್ರಮುಖ ಕಲಾವಿದರು ಪಾಲ್ಗೊಳ್ಳುವರು. ರಾತ್ರಿ 10.30ರಿಂದ 11.30ವರೆಗೆ ತುಳು ಅಪ್ಪೆ ಕಲಾವಿದರು ಬಂಟ್ವಾಳ ಇವರಿಂದ ” ಸಾಂಸ್ಕೃತಿಕ ಕಾರ್ಯಕ್ರಮ, 11.30 ರಿಂದ 1.00 ತನಕ ನಮ್ಮ ಟಿವಿ ಬಲೆ ತೆಲಿಪಾಲೆ ಖ್ಯಾತಿದ ಪ್ರಶಸ್ತಿ ವಿಜೇತ ಮಸ್ಕಿರಿ ಕುಡ್ಲ ತಂಡೊದ ತುಳುನಾಡ ಕಲಾಬಿರ್ಸೆ ದೀಪಕ್ ರೈ ಪಾಣಾಜೆ, ಜೆ.ಪಿ ತೂಮಿನಾಡು, ರಾಜೇಶ್ ಮುಗುಳಿ, ಪ್ರಕಾಶ್ ತೂಮಿನಾಡು ಅವರಿಂದ ತೆಲಿಕೆ ಬಂಜಿ ನಿಲಿಕೆ ಕಾರ್ಯಕ್ರಮ ನಡೆಯುವುದು. ಬಳಿಕ ರಾತ್ರಿ 1ರಿಂದ ವರ್ಷಾವಧಿ ಕೋಲವು ಜರಗಲಿರುವುದು.