ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ಕನಕ ಜಯಂತಿಯನ್ನು ಸೋಮವಾರ ಬಿ.ಸಿ.ರೋಡಿನ ಮಿನಿ ವಿಧಾನಸೌಧದಲ್ಲಿ ಆಚರಿಸಲಾಯಿತು. ತಹಶೀಲ್ದಾರ್ ಪುರಂದರ ಹೆಗ್ಡೆ ಉದ್ಘಾಟಿಸಿದರು.
ಅವರು ಮಾತನಾಡಿ ಜಾತಿ ಜಾತಿಗಳ ಮಧ್ಯೆ ಸಾಮಾರಸ್ಯ ಬೆಳೆಯಲು ಹಾಗೂ ಶಾಂತಿ ಬೆಳೆಸಲು ಕನಕ ಜಯಂತಿ ಆಚರಣೆ ಪೂರಕ ಎಂದರು. ವೇದಿಕೆಯಲ್ಲಿ ಕೇಂದ್ರ ಸ್ಥಾನೀಯ ಉಪತಹಶೀಲ್ದಾರ್ ಕೆ.ಸೀತಾರಾ, ಚುನಾವಣ ಶಿರಸ್ತೆದಾರ್ ಗೋಪಾಲ, ಭೂಮಿ ಶಾಖೆಯ ಶಿರಸ್ತೆದಾರ್ ಗ್ರೆಟ್ಟಾ ಪಿಂಟೋ, ಕಂದಾಯ ನಿರೀಕ್ಷಕ ನವೀನ್ ಕುಮಾರ್, ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯ ವಿಶುಕುಮಾರ್ ವೇದಿಕೆಯಲ್ಲಿದ್ದರು. ಕಂದಾಯ ನಿರೀಕ್ಷಕ ರಾಮ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ದಿವಾಕರ ಮುಗುಳ್ಯ ವಂದಿಸಿದರು.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…