ವಿಟ್ಲ

ಯಕ್ಷಗಾನ ಹಿರಿಯರ ಸಂಸ್ಮರಣೆ, ತಾಳಮದ್ದಳೆ ಸಪ್ತಾಹ

ಉಜಿರೆಯ ಕುರಿಯ ವಿಟ್ಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ನೇತೃತ್ವದಲ್ಲಿ ಕಾಸರಗೋಡು ಶೇಣಿ ಜಂಗಮದ ಸಹಭಾಗಿತ್ವದಲ್ಲಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ ಕುರಿಯ ಪ್ರತಿಷ್ಠಾನ ವಿಂಶತಿ – ಶೇಣಿ ಶತಕ ಸರಣಿ ಅಂಗವಾಗಿ ಆಯೋಜಿಸಿದ ತಾಳಮದ್ದಳೆ ಸಪ್ತಾಹ, ಬಯಲಾಟದ ಸಂದರ್ಭ ಶನಿವಾರ ವಿಟ್ಲ ಭಗವತೀ ದೇವಸ್ಥಾನದ ಸಭಾಂಗಣದಲ್ಲಿ ರಸಋಷಿ ದೇರಾಜೆ ಸಭಾಂಗಣ-ರಸಿಕರತ್ನ ವಿಟ್ಲ ಜೋಷಿ ವೇದಿಕೆಯಲ್ಲಿ ಸಂಸ್ಮರಣೆ, ಇಬ್ಬರಿಗೆ ಸಮ್ಮಾನ ಮತ್ತು ಬಯಲಾಟ ನಡೆಯಿತು.

ಜಾಹೀರಾತು

ಡಾ| ಎಂ.ಪ್ರಭಾಕರ ಜೋಷಿ ಅವರು ಯಕ್ಷದಿಗ್ಗಜರಾದ ಕುರಿಯ ವಿಠಲ ಶಾಸ್ತ್ರಿ, ಶೇಣಿ ಗೋಪಾಲಕೃಷ್ಣ ಭಟ್, ದೇರಾಜೆ ಸೀತಾರಾಮಯ್ಯ, ವಿಟ್ಲ ಗೋಪಾಲಕೃಷ್ಣ ಜೋಷಿ, ಪುಚ್ಚೆಕೆರೆ ಕೃಷ್ಣ ಭಟ್ ಅವರ ಸಂಸ್ಮರಣೆ ಮಾಡಿದರು. ಇದೇ ಸಂದರ್ಭ ಹಿರಿಯ ಸಾಹಿತಿ ವಾಟೆ ಮಹಾಲಿಂಗ ಭಟ್ ಅವರು ಪ್ರತಿಷ್ಠಾನದ ಪರವಾಗಿ ಕಲಾಪೋಷಕರು, ಸಂಘಟಕರಾದ ಪಿ.ಕೆ.ವೆಂಕಟ್ರಮಣ ಭಟ್ ಮತ್ತು ಸತೀಶ ಪುಣಿಂಚಿತ್ತಾಯ ಅವರನ್ನು ಸಮ್ಮಾನಿಸಿದರು.

ವಿಟ್ಲ ಭಗವತೀ ದೇವಸ್ಥಾನದ ಮೊಕ್ತೇಸರ ಕೇಶವ ಆರ್.ವಿ., ಮೋನಪ್ಪ ಗುರುಸ್ವಾಮಿ, ಕನ್ಯಾನ ಬೆನಕ ಸ್ಟುಡಿಯೋ ಮಾಲಕ ವಿ.ಕುಮಾರಸ್ವಾಮಿ ಕನ್ಯಾನ, ವಿಟ್ಲ ಭಾರತ್ ಶಾಮಿಯಾನ ಮಾಲಕ ಡಿ.ಸಂಜೀವ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಕುರಿಯ ಪ್ರತಿಷ್ಠಾನದ ಸಂಚಾಲಕ ಉಜಿರೆ ಎನ್.ಅಶೋಕ ಭಟ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಕೂಡ್ಲು ಶೇಣಿ ರಂಗಜಂಗಮದ ಸಂಚಾಲಕ ಶೇಣಿ ವೇಣುಗೋಪಾಲ ಭಟ್ ಸಹಕರಿಸಿದರು.

ಪಾದುಕಾಪ್ರದಾನ ಎಂಬ ಯಕ್ಷಗಾನ ತಾಳಮದ್ದಳೆಯಲ್ಲಿ ಕಲಾವಿದರಾಗಿ ಪಟ್ಲ ಸತೀಶ್ ಶೆಟ್ಟಿ, ದುರ್ಗಾಪರಮೇಶ್ವರೀ ಕುಕ್ಕಿಲ, ದೇಲಂತಮಜಲು ಸುಬ್ರಹ್ಮಣ್ಯ ಭಟ್, ವರ್ಷಿತ್ ಕಿಜೆಕ್ಕಾರು, ಡಾ| ಎಂ.ಪ್ರಭಾಕರ ಜೋಷಿ, ಮೂಡಂಬಲು ಗೋಪಾಲಕೃಷ್ಣ ಶಾಸ್ತ್ರಿ, ಶೇಣಿ ವೇಣುಗೋಪಾಲ ಭಟ್, ದಿನೇಶ ಶೆಟ್ಟಿ ಅಳಿಕೆ ಅವರು ಭಾಗವಹಿಸಿದ್ದರು. ಬಳಿಕ ಬಬ್ರುವಾಹನ ಎಂಬ ಯಕ್ಷಗಾನ ಬಯಲಾಟದಲ್ಲಿ ಕಲಾವಿದರಾದ ಪುತ್ತಿಗೆ ರಘುರಾಮ ಹೊಳ್ಳ, ಅಡೂರು ಗಣೇಶ ರಾವ್, ಚೈತನ್ಯಕೃಷ್ಣ ಪದ್ಯಾಣ, ರಾಮಚಂದ್ರ ಭಟ್ ಎಲ್ಲೂರು, ರಂಜಿತಾ ಎಲ್ಲೂರು, ಮಹೇಶ ಮಣಿಯಾಣಿ, ಅನನ್ಯಾ ಬಳಂತಿಮೊಗರು, ವನಿತಾ ಭಟ್ ಎಲ್ಲೂರು, ರಕ್ಷಿತಾ ಎಲ್ಲೂರು, ಪ್ರಕೃತಿ ಭಾಗವಹಿಸಿದ್ದರು.

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

36 minutes ago