ತಾಲ್ಲೂಕಿನ ಮಂಚಿ ಸಮೀಪದ ನಾಡಾಜೆ ಎಂಬಲ್ಲಿ ಮನೆಯೊಂದರ ಹಿಂಬದಿ ಬಾಗಿಲಿನ ಚಿಲಕ ಮುರಿದು ರೂ 3,22,500 ಮೌಲ್ಯದ ಚಿನ್ನಾಭರಣ ಮತ್ತು ರೂ 3,050 ಮೊತ್ತದ ನಗದು ಕಳ್ಳರು ದೋಚಿ ಪರಾರಿಯಾದ ಘಟನೆ ಶನಿವಾರ ಬೆಳಕಿಗೆ ಬಂದಿದೆ.
ಇಲ್ಲಿನ ನಿವಾಸಿ, ಕೃಷಿಕ ಮೋಹನ ಶೆಟ್ಟಿ ಎಂಬವರು ಎಂದಿನಂತೆ ಮನೆಯವರೊಂದಿಗೆ ಶುಕ್ರವಾರ ರಾತ್ರಿ ಮಲಗಿದ್ದ ವೇಳೆ ಮನೆಯ ಹಿಂಬಾಗಿಲಿನ ಚಿಲಕ ಮುರಿದು ಕಳ್ಳರು ಒಳಪ್ರವೇಶಿಸಿದ್ದಾರೆ. ಮನೆಯೊಳಗೆ ಕಪಾಟಿನಲ್ಲಿದ್ದ ವಿವಿಧ ಬಗೆಯ ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗಿರುವುದು ಶನಿವಾರ ಬೆಳಿಗ್ಗೆ ಎದ್ದು ನೋಡಿದಾಗಲೇ ಇವರ ಗಮನಕ್ಕೆ ಬಂದಿದೆ ಎಂದು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)