ಸಿನಿಮಾ

ತುಳು ಸಿನಿಮಾವಲೋಕನ, ನ.5ರಂದು ಲೋಕಾರ್ಪಣೆ

ಬಂಟ್ವಾಳನ್ಯೂಸ್www.bantwalnews.com REPORT

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರೂ ಆಗಿರುವ ಬರಹಗಾರ, ಹವ್ಯಾಸಿ ಕಲಾವಿದ ಜಗನ್ನಾಥ ಶೆಟ್ಟಿ ಬಾಳ ಅವರ ಎರಡು ವರ್ಷಗಳ ಶ್ರಮ ಕೈಗೂಡುವ ಕಾಲ ಬಂದಿದೆ. ನವೆಂಬರ್ 5ರಂದು ಸುರತ್ಕಲ್ ಬಂಟರ ಭವನದಲ್ಲಿ ಸಂಜೆ 3.30ಕ್ಕೆ ತುಳು ಚಿತ್ರರಂಗದ ಇತಿಹಾಸವನ್ನು ನೀಡುವ ತುಳು ಸಿನಿಮಾವಲೋಕನ ಕೃತಿ ಬಿಡುಗಡೆಯಾಗಲಿದೆ.

ಜಗನ್ನಾಥ ಶೆಟ್ಟಿ ಬಾಳ

ಇದರಲ್ಲೇನು ವಿಶೇಷ ಅಂದಿರಾ? ಇಲ್ಲಿದೆ ನೋಡಿ ಪುಸ್ತಕದ ಹೈಲೈಟ್ಸ್..

  • 1971ರಲ್ಲಿ ನಿರ್ಮಾಣವಾದ ಮೊದಲ ತುಳು ಸಿನಿಮಾ ಎಸ್.ಆರ್.ರಾಜನ್ ನಿರ್ದೇಶನದ ಎನ್ನ ತಂಗಡಿಯಿಂದ ಆರಂಭಿಸಿ ನವೆಂಬರ್ ನಲ್ಲಿ ತೆರೆ ಕಾಣಲಿರುವ ಅಂಬರ್ ಕ್ಯಾಟರರ್ಸ್ ವರೆಗಿನ 86 ತುಳು ಸಿನಿಮಾಗಳ ಕುರಿತ ಮಾಹಿತಿಪೂರ್ಣ ಲೇಖನ ಇದರಲ್ಲಿದೆ.
  • ತುಳು ಸಿನಿಮಾದ ನಿರ್ಮಾಣ, ತಂತ್ರಜ್ಞಾನಗಳ ಮಾಹಿತಿ
  • 200 ಪುಟಗಳ ಪುಸ್ತಕ.
  • ಹಿರಿಯ ತಲೆಮಾರಿನ ಕಲಾವಿದರು, ಚಿತ್ರನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರ ಅನುಭವದ ಧಾರೆ, ಹಳೆಯ ಫೊಟೋಗಳ ಸಂಗ್ರಹ.
  • ಹೊಸ ತಲೆಮಾರಿನ ಚಿತ್ರನಿರ್ಮಾಣ ಕುರಿತ ಝಲಕ್.
  • ಚಿತ್ರನಿರ್ಮಾಣದ ಒಳನೋಟ. ಸಮಸ್ಯೆಗಳು.

ಮನೋಹರ ಪ್ರಸಾದ್, ಬಿ.ಗಣಪತಿ, ಬಿ.ಎಂ.ಹನೀಫ್, ಡಾ. ನಾಗವೇಣಿ, ಕದ್ರಿ ನವನೀತ ಶೆಟ್ಟಿ, ಪರಮಾನಂದ ಸಾಲ್ಯಾನ್ ಅವರ ಶುಭಾಶಯ ನುಡಿಗಳು, ತಮ್ಮ ಲಕ್ಷ್ಮಣ, ವಿ.ಜಿ.ಪಾಲ್, ಪದ್ಮನಾಭ ಪುತ್ತಿಗೆ, ದಿನೇಶ್ ಇರಾ ಮೊದಲಾದವರ ಲೇಖನಗಳು ಇದರಲ್ಲಿವೆ. ಹಿರಿಯ ಪತ್ರಕರ್ತ ಪಿ.ಬಿ.ಹರೀಶ್ ರೈ ಮುನ್ನುಡಿಯೊಂದಿಗೆ ಈ ಪುಸ್ತಕ ಇತಿಹಾಸ ದಾಖಲಿಸುವ ಪುಸ್ತಕವಾಗಿ ಹೊರಬರಲಿದೆ.

ಕಾರ್ಯಕ್ರಮದಲ್ಲಿ ಏನೇನಿದೆ:

ನ.5ರಂದು ಭಾನುವಾರ ಸುರತ್ಕಲ್ ಬಂಟರ ಭವನದಲ್ಲಿ ಸಾಹಿತ್ಯ, ಸಾಂಸ್ಕೃತಿಕ ರಂಗಚಾವಡಿ ಸಂಘಟನೆಯಡಿ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಅವರಿಗೆ ರಂಗಚಾವಡಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಡಾ. ಮೋಹನ ಆಳ್ವ ಪುಸ್ತಕ ಬಿಡುಗಡೆ ಮಾಡುವರು. ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ನಿರ್ದೇಶಕ ರಾಮ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಭಾಗವಹಿಸುವರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts