ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಪಕ್ಕದ ಸುದೆಕಾರಿನಲ್ಲಿರುವ ಕೃಷಿ ಭೂಮಿಯಲ್ಲಿ ನೇಜಿ ನೆಟ್ಟು ಬೆಳೆದ ಭತ್ತವನ್ನು ಕಟಾವು ಮಾಡುವ ಕಾರ್ಯಕ್ರಮಕ್ಕೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಚಾಲನೆ ನೀಡಿದರು.
ಕಳೆದ ಕೆಲ ವರ್ಷಗಳಿಂದ ಕಲ್ಲಡ್ಕ ವಿದ್ಯಾಕೇಂದ್ರದ ವಿದ್ಯಾಕೇಂದ್ರದ ವಿದ್ಯಾರ್ಥಿಗಳೇ ನೇಜಿ ನೆಟ್ಟು ಬೆಳೆದ ಭತ್ತವನ್ನು ವಿದ್ಯಾರ್ಥಿಗಳೇ ಕೊಯ್ಲು ಮಾಡುತ್ತಿದ್ದಾರೆ. ಈ ಮೂಲಕ ಸ್ವಾವಲಂಬಿಯಾಗುವತ್ತ ಹೆಜ್ಜೆ ಇಟ್ಟಿದ್ದಾರೆ. ಇದು ಶಾಲಾ ಕಲಿಕೆಯ ಒಂದು ಭಾಗವೂ ಹೌದು. ಬೆಳೆ ಕಟಾವು ಮಾಡುವ ಮೂಲಕ ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಗೆ ಅಧ್ಯಾಪಕರು ಕೃಷಿ ಚಟುವಟಿಕೆಗಳ ಕಾರ್ಯಾನುಭವ ನೀಡುವುದರ ಜೊತೆಗೆ ಸ್ವಾವಲಂಬಿ ಬದುಕಿನ ಪಾಠ ಹೇಳಿದರು. ವಿದ್ಯಾಕೇಂದ್ರದ ಆಡಳಿತ ಮಂಡಳಿ ಸದಸ್ಯರು, ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.