ಸೊಂಟನೋವೇ, ಬೆಳಗ್ಗೆದ್ದು ಒಂದು ಲೀಟರ್ ಬಿಸಿನೀರು ಕುಡಿಯಿರಿ!
ಡಾ.ಎ.ಜಿ.ರವಿಶಂಕರ್
ಅಂಕಣ: ಪಾಕಶಾಲೆಯೇ ವೈದ್ಯಶಾಲೆ
ಆಭ್ಯಂತರ ಉಪಯೋಗಗಳು
ಚೆನ್ನಾಗಿ ಕುದಿಸಿ ಆರಿಸಿದ ನೀರು ಆರೋಗ್ಯವನ್ನು ಕಾಪಾಡಲು ಮತ್ತು ಸರಿಪಡಿಲು ಸಹಕರಿಸುವ ಮೂಲಕ ಮನುಷ್ಯನ ಸುಖಮಯವಾದ ದೀರ್ಘಕಲೀನ ಜೀವನಕ್ಕೆ ಭದ್ರ ಬುನಾದಿಯನ್ನು ಒದಗಿಸುತ್ತದೆ.
ಜಾಹೀರಾತು
ಬೆಳಗ್ಗೆ ಆಹಾರದ ಮೊದಲು ಬಿಸಿನೀರು ಕುಡಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.
ಬೆಳಗ್ಗೆ ಆಹಾರದ ಮೊದಲು ಸಾಧಾರಣ 1 ಲೀಟರಿನಷ್ಟು ನೀರನ್ನು ಪ್ರತಿನಿತ್ಯ ಕುಡಿಯುವುದರಿಂದ ಸೊಂಟ ನೋವನ್ನು ತಡೆಕಟ್ಟ ಬಹುದು.
ಬಿಸಿನೀರು ಶಾರೀರಿಕ ಮತ್ತು ಮಾನಸಿಕ ಒತ್ತಡವನ್ನು ನಿವಾರಿಸಿ ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ
ಬಿಸಿನೀರು ಕುಡಿಯುವುದರಿಂದ ಗಂಟಲು ಮತ್ತು ಎದೆಯಲ್ಲಿ ಗಟ್ಟಿಯಾಗಿರುವ ಕಪ ಕರಗುತ್ತದೆ.
ಎದೆ ಉರಿ, ಹುಳಿತೇಗು ಇತ್ಯಾದಿ ಲಕ್ಷಣಗಳು ಇದ್ದಾಗ ಅವಾಗಾವಾಗ ಯಥೇಷ್ಟವಾಗಿ ಬಿಸಿನೀರನ್ನು ಕುಡಿಯಬೇಕು.
ನಿಯಮಿತವಾಗಿ ಬಿಸಿನೀರನ್ನು ಕುಡಿಯುವುದರಿಂದ ಕರುಳಿನ ಕ್ರಿಮಿಯ ಬಾಧೆ ಕಡಿಮೆಯಾಗುತ್ತದೆ.
ಬಿಸಿನೀರು ದೇಹದಲ್ಲಿ ರಕ್ತಸಂಚಾರವನ್ನು ಉತ್ತೇಜಿಸುವ ಮೂಲಕ ಅವಯವಗಳಿಗೆ ಸೂಕ್ತ ಪೋಷಣೆ ದೊರಕಲು ಸಹಕರಿಸುತ್ತದೆ.
ಬಿಸಿನೀರು ಅಜೀರ್ಣವನ್ನು ಹೋಗಲಾಡಿಸಿ ಬಾಯಿರುಚಿಯನ್ನು ಹೆಚ್ಚಿಸುತ್ತದೆ.
ಬಿಸಿನೀರನ್ನು ಯಥೇಷ್ಟವಾಗಿ ಕುಡಿಯುವುದರಿಂದ ಶರೀರದ ಅನಾವಶ್ಯಕ ಕೊಬ್ಬು ನಿವಾರಣೆಯಾಗುತ್ತದೆ.
ಬಿಸಿನೀರು ಶರೀರದ ಕಲ್ಮಶವನ್ನು ಬೆವರು ಹಾಗು ಮೂತ್ರದ ಮೂಲಕ ದೇಹದಿಂದ ಹೊರ ಹಾಕುತ್ತದೆ.
ಜಾಹೀರಾತು
Dr. Ravishankar A G
ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.