ಕವರ್ ಸ್ಟೋರಿ

ಬಿ.ಸಿ.ರೋಡ್ – ಮೇಲ್ಕಾರ್ – ಮುಡಿಪು – ತೊಕ್ಕೊಟ್ಟು – ಕಾಸರಗೋಡು

www.bantwalnews.com

ಇನ್ನು ಬಿ.ಸಿ.ರೋಡಿನಿಂದ ಕಾಸರಗೋಡಿಗೆ ಬಸ್ಸಿನಲ್ಲಿ ತೆರಳಬೇಕಾದವರು ಕಷ್ಟಪಡಬೇಕಾಗಿಲ್ಲ. ಸಾಮಾನ್ಯವಾಗಿ ಕಾಸರಗೋಡಿಗೆ ಹೋಗಬೇಕಾದರೆ ಒಂದೋ ವಿಟ್ಲ ಮಾರ್ಗ ಹಿಡಿಯಬೇಕಾಗಿತ್ತು, ಇಲ್ಲವೇ ಪಂಪ್ ವೆಲ್ ಗೆ ತೆರಳಿ ಅಲ್ಲಿಂದ ತುಂಬಿದ ಬಸ್ ಏರಬೇಕಿತ್ತು. ಸೀಟು ಸಿಕ್ಕಿದರೆ ಛಾನ್ಸ್ ಎಂಬಂಥ ಸ್ಥಿತಿ. ಆದರೆ ಈಗ ಹಾಗಿಲ್ಲ. ಗಂಟೆಗೊಂದರಂತೆ ಸುಮಾರು 12 ಟ್ರಿಪ್ ಬಸ್ಸುಗಳು ಬಿ.ಸಿ.ರೋಡಿನ ನೂತನ ಕೆಎಸ್ ಆರ್ಟಿಸಿ ಬಸ್ ನಿಲ್ದಾಣದಿಂದ ಕಾಸರಗೋಡಿಗೆ ತೆರಳುತ್ತವೆ. ಎರಡೂ ಕಾಲು ಗಂಟೆಯೊಳಗೆ ಕಾಸರಗೋಡು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ನೀವು ತಲುಪುತ್ತೀರಿ.

ಜಾಹೀರಾತು

ಇದರಿಂದ ಶಾಲೆ, ಕಾಲೇಜು, ಕಚೇರಿಗಳಿಗೆ ತೆರಳುವವರಿಗೆ ಅನುಕೂಲ. ವಿಶೇಷವಾಗಿ ಬಿ.ಸಿ.ರೋಡಿನಿಂದ ದೇರಳಕಟ್ಟೆಗೆ ಆಸ್ಪತ್ರೆಗೆಂದು ತೆರಳುವವರಿಗೆ ಈ ಬಸ್ಸುಗಳು ಹೊಸ ಸೇರ್ಪಡೆ. ಹಾಗೆಯೇ ಕಾಸರಗೋಡಿನಿಂದ ದೇರಳಕಟ್ಟೆಗೆ ಬರುವವರಿಗೆ ಲಾಭ.

ಜಾಹೀರಾತು

ಬಂಟ್ವಾಳನ್ಯೂಸ್ ಗೆ ಕೆಎಸ್ಸಾರ್ಟಿಸಿ ಅಧಿಕಾರಿಗಳು ಒದಗಿಸಿದ ಮಾಹಿತಿ ಇವು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.