ಬಂಟ್ವಾಳ

ತುಳು ಬದುಕಿನ ಕುರಿತು ಮಾಹಿತಿ ಪಡೆದ ಸಿಎಂ, ಅಧ್ಯಯನ ಕೇಂದ್ರಕ್ಕೆ ನೆರವು

 

ರಾಷ್ಟ್ರೀಯ ವಿಚಾರಸಂಕಿರಣಗಳು, ರಾಜ್ಯಮಟ್ಟದ ಕಾರ್ಯಕ್ರಮಗಳು ನಡೆದ ಬಿ.ಸಿ.ರೋಡಿನ ಸಂಚಯಗಿರಿಯಲ್ಲಿ ಇರುವ ಪ್ರೊ. ಕೆ. ತುಕಾರಾಮ ಪೂಜಾರಿ ಮತ್ತು ಡಾ. ಆಶಾಲತಾ ಸುವರ್ಣ ದಂಪತಿಯ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಹಾಗೂ ತುಳು ಬದುಕು ವಸ್ತು ಸಂಗ್ರಹಾಲಯಕ್ಕೆ ಭಾನುವಾರ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದರು.

ಈ ಸಂದರ್ಭ ತುಳು ಬದುಕಿಗೆ ಸಂಬಂಧಿಸಿದ ವಸ್ತುಗಳನ್ನು ಆಸಕ್ತಿಯಿಂದ ವೀಕ್ಷಿಸಿದ ಅವರು ಪ್ರೊ. ತುಕಾರಾಮ ಪೂಜಾರಿಯವರಿಂದ ಮಾಹಿತಿ ಪಡೆದರು. ಹುಲಿ ಓಡಿಸುವ ಸಾಧನವನ್ನು ಸ್ವತಃ ತಾನೇ ಪ್ರಯೋಗಿಸಿ ಅದರಿಂದ ಹೊರಬರುವ ಶಬ್ಧವನ್ನು ಆನಂದಿಸಿದರು. ಕೇಂದ್ರದ ಕಾರ್ಯದರ್ಶಿ ಡಾ. ಆಶಾಲತಾ ಸುವರ್ಣ ಅವರು ವಸ್ತು ಸಂಗ್ರಹಾಲಯ ಕುರಿತ ಪೂರಕ ಮಾಹಿತಿ ನೀಡಿದರು.  ಈ ಸಂದರ್ಭ ಸ್ವಾತಂತ್ರ ಹೋರಾಟಗಾರ್ತಿ, ತುಳುನಾಡನ ಅಪ್ರತಿಮ ವೀರ ಮಹಿಳೆ ಉಳ್ಳಾಲ ರಾಣಿ ಅಬ್ಬಕ್ಕ ಅವರ ಬದುಕನ್ನು ಶಾಶ್ವತವಾಗಿ ಪರಿಚಯಿಸುವ ಕಾರ್ಯ ಪ್ರೊ. ತುಕಾರಾಂ ಅವರ ನೇತೃತ್ವದಲ್ಲಿ ನಡೆದಿದೆ. ರಾಷ್ಟ್ರದ ಏಕೈಕ ಹಾಗೂ ಮೊಟ್ಟ ಮೊದಲ ಕಲಾ ಕೇಂದ್ರ ಎಂದು ಖ್ಯಾತಿ ಪಡೆದಿರುವ ರಾಣಿ ಅಬ್ಬಕ್ಕ ಆರ್ಟ್ ಗ್ಯಾಲರಿ ಹೊಂದಿರುವ ತುಳು ಅಧ್ಯಯನ ಕೇಂದ್ರಕ್ಕೆ ಸರಕಾರ ಅನುದಾನ ಒದಗಿಸಬೇಕೆಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮುಖ್ಯಮಂತ್ರಿಯವರಲ್ಲಿ ವಿನಂತಿಸಿಕೊಂಡರು. ಕೇಂದ್ರಕ್ಕೆ ಸರಕಾರದ ವತಿಯಿಂದ ಗರಿಷ್ಠ ಪ್ರಮಾಣದ ಹಣಕಾಸು ನೆರವು ಒದಗಿಸಲಾಗುವುದು ಎಂದು ಮುಖ್ಯಮಂತ್ರಿಈ ಸಂದರ್ಭ ತಿಳಿಸಿದರು.

ಜಾಹೀರಾತು

ಸಚಿವರಾದ ಟಿ.ಬಿ. ಜಯಚಂದ್ರ, ಯು.ಟಿ.ಖಾದರ್, ಮುಖ್ಯ ಸಚೇತಕ ಐವನ್ ಡಿಸೋಜ, ಶಾಸಕ ಅಭಯಚಂದ್ರ ಜೈನ್, ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ತುಳು ಅಧ್ಯಯನ ಕೇಂದ್ರವನ್ನು ವೀಕ್ಷಿಸಿದರು. ಜಿ.ಪಂ. ಸದಸ್ಯರಾದ ಬಿ. ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಸಾಹುಲ್ ಹಮೀದ್, ಅಕ್ರಮಸಕ್ರಮ ಸಮಿತಿ ಮಾಯಿಲಪ್ಪ ಸಾಲ್ಯಾನ್, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಪುರಸಭಾ ಸದಸ್ಯ ಪ್ರವೀಣ್ ಬಿ, ಎಸ್‌ವಿಎಸ್ ಕಾಲೇಜ್ ಪ್ರಿನ್ಸಿಪಾಲ್ ಡಾ. ಪಾಂಡುರಂಗ ನಾಯಕ್, ಪಿ.. ಪಾಲಿಟೆಕ್ನಿಕ್ ಕಾಲೇಜ್ ಪ್ರಿನ್ಸಿಪಾಲ್ ಪ್ರೊ. ಕೆ.ಪಿ. ಸೂಫಿ, ಪ್ರಮುಖರಾದ ಸುದರ್ಶನ್ ಜೈನ್, ವಿವೇಕ್ ಶೆಟ್ಟಿ ನಗ್ರಿಗುತ್ತು, ವಿಶನಾಥ್ ಬಂಟ್ವಾಳ, ಮಧುಸೂದನ್ ಶೆಣೈ ಮೊದಲಾದವರು ಸಂದರ್ಭದಲ್ಲಿದ್ದರು.

ಬಂಟ್ವಾಳ ನ್ಯೂಸ್ ವಸ್ತುಸಂಗ್ರಹಾಲಯ, ಅಧ್ಯಯನ ಕೇಂದ್ರದ ಕುರಿತು ವಿವರವಾದ ವರದಿಯನ್ನು ಕವರ್ ಸ್ಟೋರಿಯಡಿ ಪ್ರಕಟಿಸಿತ್ತು. ಹೆಚ್ಚಿನ ಓದಿಗೆ ಕ್ಲಿಕ್ ಮಾಡಿರಿ

https://bantwalnews.com/2016/12/15/%E0%B2%9C%E0%B2%A8%E0%B2%B8%E0%B2%BE%E0%B2%AE%E0%B2%BE%E0%B2%A8%E0%B3%8D%E0%B2%AF%E0%B2%B0-%E0%B2%AC%E0%B2%A6%E0%B3%81%E0%B2%95%E0%B2%BF%E0%B2%A8-%E0%B2%AA%E0%B3%81%E0%B2%9F%E0%B2%97%E0%B2%B3/

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ