ರಕ್ತದಾನ ಮಹಾದಾನ ಶ್ರೇಷ್ಠ ದಾನ ,ಇದು ಮಾನವೀಯತೆಯ ಪ್ರತೀಕ ,ನಾವೆಲ್ಲಾಒಂದೇತಾಯಿಯ ಮಕ್ಕಳು ಎಂಬ ಸಂದೇಶ ಸಾರಬೇಕು ಎಂದು ಎಂದು ಮಾಣಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಗೌರವಾಧ್ಯಕ್ಷರಾದ ಈಶ್ವರ ಪೂಜಾರಿ ತಿಳಿಸಿದರು.
ಯುವವಾಹಿನಿ ಮಾಣಿ ಮತ್ತು ಬಂಟ್ವಾಳ ಘಟಕ, ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ಇದರಆಶ್ರಯದಲ್ಲಿ ಇಂಡಿಯನ್ರೆಡ್ಕ್ರಾಸ್ ಸೊಸೈಟಿ ದ.ಕ.ಜಿಲ್ಲೆರಕ್ತನಿಧಿ, ಸರಕಾರಿ ಲೇಡಿಗೋಷನ್ ಆಸ್ಪತ್ರೆ, ಡೆಲ್ಟಾ ಕಣ್ಣಿನ ಆಸ್ಪತ್ರೆ, ಮಂಗಳೂರು ಸಹಯೋಗದೊಂದಿಗೆ ಮಾಣಿ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿಜರುಗಿದ ರಕ್ತದಾನ ಮತ್ತುಉಚಿತಕಣ್ಣು ಪರೀಕ್ಷಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಯುವವಾಹಿನಿ ಮಾಣಿ ಘಟಕದಅಧ್ಯಕ್ಷ ರಾಜೇಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ವಿರಳವಾಗಿ ಸಿಗುವ ನೆಗೆಟಿವ್ ರಕ್ತದ ಗುಂಪು ತನ್ನದು, ವರ್ಷಕ್ಕೆ ಎರಡು ಬಾರಿ ನಿರಂತರವಾಗಿg ಕ್ತದಾನ ಮಾಡುತ್ತಿದ್ದೇನೆ. ಈಗಲೂ ಆರೋಗ್ಯವಾಗಿದ್ದೇನೆ. ಆದ್ದರಿಂದ ರಕ್ತದಾನದಿಂದ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷರಾದ ಲೋಕೇಶ್ ಪೂಜಾರಿ ಅಲೆತ್ತೂರು ತಿಳಿಸಿದರು.
ರಕ್ತ ಪಡೆಯಲು ಬದಲಿ ವ್ಯವಸ್ಥೆಇಲ್ಲ , ಮಾನವರದಾನದಿಂದಲೇರಕ್ತವನ್ನು ಪಡೆದುಜೀವ ಉಳಿಸಬೇಕಾಗಿದೆ. ಆದ್ದರಿಂದ ವಿರಳವಾದ ರಕ್ತದಗುಂಪನ್ನು ಸರಳವಾಗಿ ಪಡೆಯುವುದೇ ಇಂತಹ ಶಿಬಿರದ ಉದ್ದೇಶ ಎಂದು ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಡೆಲ್ಟಾ ಕಣ್ಣಿನ ಆಸ್ಪತ್ರೆಯ ಬಾಲಚಂದ್ರ ತಿಳಿಸಿದರು.
ಯುವವಾಹಿನಿ ಕೇಂದ್ರ ಸಮಿತಿಯಅಧ್ಯಕ್ಷರಾದ ಯಶವಂತ ಪೂಜಾರಿ, ಯುವವಾಹಿನಿ ಮಾಣಿ ಘಟಕದ ಸಲಹೆಗಾರರಾದ ದಯಾನಂದ ಕೊಡಾಜೆ, ಮಾಣಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷರಾದ ನಾರಾಯಣ ಸಾಲ್ಯಾನ್, ಯುವವಾಹಿನಿ ಮಾಣಿಘಟಕದ ಆರೋಗ್ಯ ನಿರ್ದೇಶಕರಾದ ಶಿವರಾಜ್, ಶಿಬಿರಕ್ಕೆ ಶುಭ ಹಾರೈಸಿದರು. ಶಿಬಿರದಲ್ಲಿ ೬೬ ಮಂದಿ ರಕ್ತದಾನ ಮಾಡಿದರು. ೧೬೦ ಮಂದಿ ಕಣ್ಣು ಪರೀಕ್ಷಾ ಶಿಬಿರದ ಪ್ರಯೋಜನ ಪಡೆದರು ಹಾಗು ಉಚಿತ ಕನ್ನಡಕಗಳನ್ನು ವಿತರಿಸಲಾಯಿತು
ಯುವವಾಹಿನಿ ಮಾಣಿಘಟಕದ ಸಲಹೆಗಾರರಾದ ಪ್ರೇಮನಾಥ್ ಕೆ. ಪ್ರಾಸ್ತಾವಿಕ ಮಾತನಾಡಿದರು, ಯುವವಾಹಿನಿ ಬಂಟ್ವಾಳ ಘಟಕದ ಕಾರ್ಯದರ್ಶಿ ದಿನೇಶ್ ಸುವರ್ಣ ರಾಯಿ ಸ್ವಾಗತಿಸಿದರು, ಯುವವಾಹಿನಿ ಮಾಣಿಘಟಕದ ಕಾರ್ಯದರ್ಶಿ ಪ್ರಶಾಂತ್ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.