ಬಿ.ಸಿ.ರೋಡ್‌ನಲ್ಲಿರುವ ಹಳೆ ತಾಲೂಕು ಪಂಚಾಯತ್ ಕಟ್ಟಡ ಸಹಿತ ಪಕ್ಕದ ವಾಣಿಜ್ಯ ಸಂಕೀರ್ಣವನ್ನು ತೆರವುಗೊಳಿಸುವ ಪ್ರಕ್ರಿಯೆಗೆ ಜಿಲ್ಲಾ ಪಂಚಾಯತ್ ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
ಕಟ್ಟಡದಲ್ಲಿ ವ್ಯಾಪಾರ ನಡೆಸುವ ವಿವಿಧ ಅಂಗಡಿಯವರ ಪರವಾಗಿ ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಅವರು ಜಿಪಂ ಅಧ್ಯಕ್ಷರ ನ್ಯಾಯಾಲಯದಲ್ಲಿ ಅಫೀಲು ದಾವೆ ಹೂಡಿದ್ದರು. ಬಂಟ್ವಾಳ ತಾಲೂಕು ಪಂಚಾಯತ್ 2017 ಎಪ್ರಿಲ್ 17ರಂದು ನಡೆದ ಸಾಮಾನ್ಯ ಸಣೆಯಲ್ಲಿ ನಿರ್ಣಯ ಸಂಖ್ ಯೆ9(6) ರಂತೆ ತಾಲೂಕು ಪಂಚಾಯತ್‌ನ ಹಳೆಯ ಕಟ್ಟಡ ಜೊತೆಗೆ ಪಕ್ಕದ ಸದೃಢವಾದ ವಾಣಿಜ್ಯ ಸಂಕೀರ್ಣವನ್ನು ಕೂಡ ಕಡೆವಲು ನಿರ್ಣಯ ಕೈಗೊಂಡಿತ್ತು. ಈ ನಿರ್ಣಯದ ವಿರುದ್ಧ ಅವರು ಜಿಪಂ ಅಧ್ಯಕ್ಷರ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಸಾರ್ವಜನಿಕರ ಹಣದಲ್ಲಿ ನಿರ್ಮಿಸಲಾದ ಸದೃಢ ಕಟ್ಟಡವನ್ನು ಕೆಡವಿ ಹಾಕುವುದು ಕಾನೂನು ಬಾಹಿರವಾಗಿದೆ ಎಂದು ತಮ್ಮ ದಾವೆಯಲ್ಲಿ ದೂರಿದ್ದರು.
ಈ ದಾವೆಯಲ್ಲಿ ತಾಲೂಕು ಪಂಚಾಯತ್‌ನ ಕಾರ್ಯನಿರ್ವಹಣಾ ಅಧಿಕಾರಿ ಹಾಗೂ ಅಧ್ಯಕ್ಷರನ್ನು ಪ್ರತಿವಾದಿಯನ್ನಾಗಿಸಲಾಗಿದೆ. ಈ ಅರ್ಜಿಯ ವಿಚಾರಣೆ ನಡೆಸಿದ ಜಿಪಂ ಅಧ್ಯಕ್ಷರ ನ್ಯಾಯಾಲಯ ತಾಲೂಕು ಪಂಚಾಯತ್‌ನ ನಿರ್ಣಯ ಸಂಖ್ಯೆ 9(6)ನ್ನು ಜಾರಿಗೆ ತರದಂತೆ ತಾತ್ಕಾಲಿಕ ತಡೆಯಾಜ್ಞೆ ನೀಡಿ ಪ್ರಕರಣದ ಮುಂದಿನ ವಿಚಾರಣೆಯನ್ನು ನ. 13ಕ್ಕೆ ಮುಂದೂಡಿದೆ. ಅಲ್ಲದೆ ಅಫೀಲುದಾರರಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕಕ್ಕೂ ತೊಂದರೆ ನೀಡಬಾರದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಅಫೀಲುದಾರರ ಪರವಾಗಿ ವಕೀಲ ಪ್ರಕಾಶ್‌ನಾರಾಯಣ ವಾದಿಸಿದರು.
IFTAAR ORGANISED BY FORMER MINISTER RAMANATHA RAI AT PANEMANGALORE (more…)