ಬಂಟ್ವಾಳ

ಶಿಕ್ಷಕ ಆದಂ‌ ಸಾಹೇಬ್ ರಿಗೆ ಜವಾನ್ ಫ್ರೆಂಡ್ಸ್ ಸನ್ಮಾನ

ಕಾವಳಪಡೂರು ಗ್ರಾಮದ ವಗ್ಗ ಸರ್ಕಾರಿ ಫ್ರೌಢ ಶಾಲಾ ವಿಭಾಗದ ಪ್ರಭಾರ ಮುಖ್ಯೋಪಾದ್ಯಾಯರಾದ ಆಂಗ್ಲ ಭಾಷಾ ಶಿಕ್ಷಕ, ಸ್ವಚ್ಚ ಸುಂದರ ಶಾಲಾ ಪರಿಸರ ನಿರ್ಮಿಸುವಲ್ಲಿ ಆಧುನಿಕ ಮೂಲ ಸಾಮರ್ಥಗಳ ಜೊತೆಗೆ ಕಲಿಕೆಯ ಭದ್ರ‌ ಬುನಾದಿ ಹಾಕಿ ಪ್ರಾಮಾಣಿಕ ಪ್ರಯತ್ನದ ಮೂಲಕ ಯಶಸ್ವಿ 2017-18 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶೇಖ್ ಆದಂ ಸಾಹೇಬ್ ಅವರಿಗೆ ಜವಾನ್ ಫ್ರೆಂಡ್ಸ್ ಬಿ.ಸಿ.ರೋಡ್ ವತಿಯಿಂದ ಸರಕಾರಿ ಪದವಿಪೂರ್ವ ಕಾಲೇಜು ವಗ್ಗದಲ್ಲಿ ಸನ್ಮಾನಿಸಲಾಯಿತು.

ಜಾಹೀರಾತು

ಈ ಸಂದರ್ಭದಲ್ಲಿ ಮಾತನಾಡಿದ ಜವಾನ್ ಫ್ರೆಂಡ್ಸ್ ತಂಡದ ಸದಸ್ಯ ಹಾಗೂ ವಗ್ಗ ಶಾಲೆಯ ಹಳೆ ವಿದ್ಯಾರ್ಥಿ ನೌಶಾದ್ ವಗ್ಗ ಸಾಹೇಬ್ ಅವರು ಮಾದರಿ ಶಿಕ್ಷಕರಾಗಿದ್ದಾರೆ ವಿದ್ಯಾರ್ಥಿಗಳೊಂದಿಗೆ ಮತ್ತು ಪೋಷಕರೊಂದಿಗೆ ಬೆರೆತುಕೊಳ್ಳುವ ಇವರ ಉತ್ತಮ ನಡತೆಯೇ ಅವರ ಪ್ರಶಸ್ತಿಗೆ ಕಾರಣವಾಗಿದೆ ಮುಂದಿನ ದಿನಗಳಲ್ಲಿ ಅವರಿಗೆ ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ ದೊರಕಲಿ ಎಂದು ಶುಭಹಾರೈಸಿದರು. ಈ ಸಂದರ್ಭ ಜವಾನ್ ಫ್ರೆಂಡ್ಸ್ ತಂಡದ ಸತ್ತಾರ್ ನಂದರಬೆಟ್ಟು, ರಿಯಾಝ್ ಜವಾನ್, ನಝೀರ್ ಪರ್ಲಿಯಾ, ಆಶಿಕ್ ಕುಕ್ಕಾಜೆ ಹಾಗೂ ಸ್ಥಳೀಯರಾದ ವೆಲ್ ಸ್ಟನ್ ರೋಡ್ರಿಗಸ್, ಸುಶಾಂತ್ ಹಾಗೂ ಲೋಯ್ಸನ್ ರೋಡ್ರಿಗಸ್ ಉಪಸ್ಥಿತರಿದ್ದರು.

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ