ಗೊಂದಲ ಹೇಳಿಕೆ, ಆಡಿಯೋ ಚಿತ್ರೀಕರಣ ನೀಡಿರುವ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಂಟ್ವಾಳ ತಾಲೂಕು ಮುಸ್ಲಿಂ ಒಕ್ಕೂಟದ ಮುಖಂಡರು ಶುಕ್ರವಾರ ತಹಶೀಲ್ದಾರ್‌ರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರೆ.
ದೇಶದ ಭದ್ರತೆ ಹಾಗೂ ಸರಕಾರದ ಹಿತದೃಷ್ಟಿಯಿಂದ ಪೊಲೀಸ್ ಉನ್ನತ ಅಧಿಕಾರಿಗಳು ಸಮಾಜದ ಶಾಂತಿ,ಸ್ವಾಸ್ಥ್ಯ ಕೆಡಿಸಲು ಯತ್ನಿಸಿದ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕೆಂದು ಒಕ್ಕೂಟದ ಪ್ರಮುಖರು ಮನವಿಯಲ್ಲಿ ಒತ್ತಾಯಿಸಿದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಕೈಲಾರ್, ರಹೀಂ ಪಿ.ಎ.ರಶೀದ್ ತಲಪಾಡಿ, ನಾಸೀರ್ ತಲಪಾಡಿ, ಲತೀಫ್ ಫರಂಗಿಪೇಟೆ, ಇಸ್ಮಾಯಿಲ ಅರಬಿ ಬಂಟ್ವಾಳ, ಬಾವ ತಾಳಿಪಡ್ಪು, ಝಮೀರ್ ನೆಹರೂನಗರ, ಇದ್ದಿನಬ್ಬ ತಲಪಾಡಿ, ಐಡಿಯಲ ಉಂಙಕ ಮತ್ತಿತರರು ಉಪಸ್ಥಿತರಿದ್ದರು.