ಪರಮ ಪೂಜ್ಯ 108 ಮುನಿ ಶ್ರೀ ವೀರ ಸಾಗರ ಮಹಾರಾಜರ ಮಂಗಲ ವರ್ಷಾಯೋಗ ನಿಮಿತ್ತ, ಪಾಣೆಮಂಗಳೂರು ಶ್ರೀಅನಂತನಾಥ ಸ್ವಾಮೀ ಜಿನ ಚೈತ್ಯಾಲಯದಲ್ಲಿ ಅಕ್ಟೋಬರ್ 2ರಂದು ಸೋಮವಾರ ಬಂಟ್ವಾಳ ಜೈನ್ ಮಿಲನ್, ಮಂಗಳೂರು ಜೈನ್ ಮಿಲನ್, ಪುತ್ತೂರು ಜೈನ್ ಮಿಲನ್ ಮತ್ತು ಇಚಿಲಂಪಾಡಿ ಜೈನ್ ಮಿಲನ್ ಪ್ರಾಯೋಜಕತ್ವದಲ್ಲಿ ಸಾಮೂಹಿಕ ಧರ್ಮ ಸಂಸ್ಕಾರ ವೃತೋಪದೇಶ ಕಾರ್ಯಕ್ರಮ ನಡೆಯಲಿದೆ.
108 ಮುನಿಶ್ರೀ ವೀರ ಸಾಗರ ಮಹಾರಾಜರ ಪಾವನ ಸಾನ್ನಿಧ್ಯದಲ್ಲಿ,ಮೂಡುಬಿದಿರೆ ಶ್ರೀ ಜೈನ ಮಠದ ಪರಮ ಪೂಜ್ಯ ಭಾರತ ಭೂಷಣ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಮತ್ತು ಶ್ರೀ ಕ್ಷೇತ್ರ ನರಸಿಂಹ ರಾಜಪುರದ ಪರಮಪೂಜ್ಯ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ, ಪೂರ್ವಾಹ್ನ 8 ರಿಂದ ಸಾಮೂಹಿಕ ಧರ್ಮ ಸಂಸ್ಕಾರ ವೃತೋಪದೇಶ “ಕಾರ್ಯಕ್ರಮ ನಡೆಯುವುದು.
ಈ ಸಾಮೂಹಿಕ ವೃತೋಪದೇಶದಲ್ಲಿ ಕುಳಿತುಕೊಳ್ಳುವ 8 ವರ್ಷ ಮೇಲ್ಪಟ್ಟ ವಟುಗಳು ಜೈನ್ ಮಿಲನ್ ಅಥವಾ ಚಾತುರ್ಮಾಸ ಸಮಿತಿಯನ್ನು ಸಂಪರ್ಕಿಸಿ ನೋಂದಾಯಿಸಬೇಕಾಗಿ ಚಾತುರ್ಮಾಸ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಸುದರ್ಶನ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .