ಕಾರ್ಮೆಲ್ ಕಾಲೇಜು ಮೊಡಂಕಾಪು ರೆಡ್ ಕ್ರಾಸ್ ಹಾಗೂ ಎನ್.ಎಸ್.ಎಸ್ ಘಟಕ , ಲಯನ್ಸ್ ಹಾಗೂ ಲಯನೆಸ್ ಕ್ಲಬ್ ಬಂಟ್ವಾಳ ಆಶ್ರಯದಲ್ಲಿ , ರೆಡ್ ಕ್ರಾಸ್ ಸೊಸೈಟಿ ಸಹಯೋಗದೊಂದಿಗೆ ಕಾರ್ಮೆಲ್ ಕಾಲೇಜಿನ ಸಭಾಂಗಣದಲ್ಲಿ ರಕ್ತದಾನ ಶಿಬಿರ ನಡೆಯಿತು.
ಲಯನ್ಸ್ ಕ್ಲಬ್ ಬಂಟ್ವಾಳ್ ಅಧ್ಯಕ್ಷರಾದ ಜಗದೀಶ್ ಯಡಪಡಿತ್ತಾಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರೆಡ್ ಕ್ರಾಸ್ ಆರ್.ಎಮ್. ಒ ಡಾ. ದುರ್ಗಾಪ್ರಸಾದ್ ರಕ್ತದಾನದ ಮಹತ್ವವನ್ನು ವಿವರಿಸಿದರು. ಕಾಲೇಜಿನ ಪ್ರಾಂಶುಪಾಲೆ ಪ್ರೊ. ಭಗಿನಿ ಸುಪ್ರಿಯಾ ಎ.ಸಿ ಲಯನೆಸ್ ಕ್ಲಬ್ ಅದ್ಯಕ್ಷೆಯಾದ ಗೀತಾ ಯಡಪಡಿತ್ತಾಯ, ರೆಡ್‌ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಮಂಗಳೂರು ಮೇಲ್ವಿಚಾರಕರಾದ ಡಾ. ಎಡ್ವರ್ಡ್ ವಾಜ಼್, ಶೋಭಾ ಮಾರ್ಲ, ಎನ್.ಎಸ್.ಎಸ್ ಮತ್ತು ರೆಡ್ ಕ್ರಾಸ್ ಸಂಯೋಜಕಿಯರಾದ ಮದುರಾ ಹಾಗೂ ವಿನಿತಾ ವೇಗಸ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮರಿಯಂ ಮಾಜ಼ಿಯ ಸ್ವಾಗತಿಸಿ, ರಕ್ಷಾ ಜೈನ್ ವಂದಿಸಿದರು. ಐರಲ್ ಕಾರ್ಯಕ್ರಮ ನಿರೂಪಿದರು. ವಿದ್ಯಾರ್ಥಿಗಳು ಹಾಗು ಸಾರ್ವಜನಿಕರು ರಕ್ತದಾನ ಮಾಡಿದರು.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…