ನಿಗಮದ ವ್ಯಾಪ್ತಿಯವ ವಿವಿಧ ತಾಲೂಕಿನಲ್ಲಿರುವ ಸುಮಾರು 250 ಹೆಕ್ಟರ್ ನಡುತೋಪುಗಳಲ್ಲಿ ಉತ್ತಮ ತಳಿಯ ಹೆಚ್ಚು ಇಳುವರಿ ನೀಡುವ ಗೇರು ಸಸಿಗಳನ್ನು ನಾಟಿ ಮಾಡಲಾಗಿದೆ ಎಂದು ಗೇರು ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್ ತಿಳಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ನಿಗಮದ ವತಿಯಿಂದ ಮಹಾರಾಷ್ಟ್ರದ ವೆಂಗುರ್ಲಾ-4 ತಳಿಯ ಕಸಿ ಗೇರು ಸಸಿಗಳನ್ನು ತರಿಸಲಾಗಿದ್ದು, ನಿಗಮದ ಪುತ್ತೂರು,ಕುಂದಾಪುರ,ಕುಮುಟಾ ಹಾಗೂ ಮೂಡಬಿದ್ರೆ ವ್ಯಾಪ್ತಿಯ 250 ಹೆಕ್ಟರ್ ನಡುತೋಪುಗಳಲ್ಲಿ ನಾಟಿಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿರುವ ಅವರು ಮುಂದಿನ ದಿನಗಳಲ್ಲಿ ಫಸಲು ವೃದ್ದಿಯಾಗಿ ನಿಗಮದ ಅದಾಯವು ಹೆಚ್ಚಾಗುವ ನಿರೀಕ್ಷೆಯನ್ನು ಹೊಂದಲಾಗಿದೆ ಎಂದು ತೊಳಿಸಿದ್ದಾರೆ. ಹಾಗೆಯೇ ವೆಂಗುಲಾ-4 ತಳಿಯ ಸುಮಾರು 50,000 ಕಸಿ ಗೇರು ಸಸಿಗಳನ್ನು ರೈತರು, ಶಾಲಾ,ಕಾಲೇಜು, ಸಂಘ ಸಂಸ್ಥೆಗಳು, ಗ್ರಾಮ ಪಂಚಾಯತ್ ಗಳಿಗೆ ಉಚಿತವಾಗಿ ವಿತರಿಸುವ ಮೂಲಕ ಗೇರು ಕ್ರಷಿಗೆ ಉತ್ತೇಜನ ನೀಡಲಾಗುತ್ತಿದೆಯಲ್ಲದೆ ಪ್ರತಿ ಮನೆಗಳ ತಮ್ಮ ಖಾಲಿ ಜಾಗದಲ್ಲಿ ಗೇರು ಕೃಷಿಯನ್ನು ಬೆಳೆಸುವ ನಿಟ್ಟಿನಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.