ಬಿ.ಸಿ.ರೋಡಿನ ಪ್ರಸಿದ್ಧ ವೈದ್ಯ ಡಾ. ಪಿ.ಜಿ. ಭಟ್ (75) ಭಾನುವಾರ ಸೆ.24ರಂದು ನಿಧನ ಹೊಂದಿದರು. ಪತ್ನಿ, ಇಬ್ಬರು ಪುತ್ರಿಯರನ್ನು ಅವರು ಅಗಲಿದ್ದಾರೆ.
ಎಂ.ಬಿ.ಬಿ.ಎಸ್. ಪದವಿ ಪಡೆದ ಬಳಿಕ ಬಿ.ಸಿ.ರೋಡಿನಲ್ಲಿ ಈಗ ಫ್ಲೈ ಓವರ್ ಇರುವ ಜಾಗದಲ್ಲಿ ಸುಮಾರು 40 ವರ್ಷಗಳ ಕಾಲ ವೈದ್ಯವೃತ್ತಿ ನಡೆಸಿದ್ದ ಡಾ. ಭಟ್, ಕೆಲ ಕಾಲದಿಂದ ಅಸೌಖ್ಯ ಹೊಂದಿದ್ದರು. ಬಿ.ಸಿ.ರೋಡ್, ಬಂಟ್ವಾಳ ಸಹಿತ ಸುತ್ತಮುತ್ತಲಿನ ಪರಿಸರದ ಜನರ ಮನೆವೈದ್ಯರೂ ಆಗಿದ್ದ ಡಾ. ಭಟ್, ತಮ್ಮ ಸರಳ ನಡೆ, ನುಡಿಯಿಂದ ಹಾಗೂ ರೋಗಿಗಳ ಜೊತೆ ಆಪ್ತವಾಗಿ ಮಾತನಾಡುವ ಮೂಲಕ ಜನಪ್ರೀತಿ ಗಳಿಸಿದ್ದರು. ಕ್ರೀಡಾಭಿಮಾನಿಯೂ, ಬ್ಯಾಡ್ಮಿಂಟನ್, ಚೆಸ್ ಕ್ರೀಡಾಪಟುವೂ ಆಗಿದ್ದ ಡಾ. ಭಟ್, ಎಂಭತ್ತು, ತೊಂಭತ್ತರ ದಶಕದಲ್ಲಿ ಬಂಟ್ವಾಳ, ಬಿ.ಸಿ.ರೋಡ್ ಪರಿಸರದ ಹೆಚ್ಚಿನ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಭಾನುವಾರ ಆಸ್ಪತ್ರೆಯಿಂದ ಸಂಜೆ ಅವರ ಮೃತದೇಹವನ್ನು ಮನೆಗೆ ತರಲಾಯಿತು. ಡಾ. ಭಟ್ ನಿಧನ ಬಿ.ಸಿ.ರೋಡಿನ ಓರ್ವ ಪ್ರಜ್ಞಾವಂತ ನಾಗರಿಕನನ್ನು ಕಳೆದುಕೊಂಡಂತಾಗಿದೆ ಎಂದು ಅವರ ಅಭಿಮಾನಿಗಳು ತಿಳಿಸಿದ್ದಾರೆ.